ಹನಿಮುತ್ತುಗಳು - 2

ಹನಿಮುತ್ತುಗಳು - 2

ಕವನ

*ಮರೆವು..*


ಮರೆವು ಎಲ್ಲವನ್ನು ಮರೆಸುತ್ತದೆ.

ಪ್ರೀತಿ, ಸ್ನೇಹಗಳನ್ನು ಬಿಟ್ಟು,

ಇವುಗಳ ಭಾವಕ್ಕೆ ಹುಟ್ಟಿದ ಗೀತೆಯೊ೦ದನ್ನು ಬಿಟ್ಟು..

 

*ನನಸಾಗಿರು..*


ಕನಸ ಆವರಿಸಿ

ನೀ ಬರುವಾಗ

ಹೃದಯದ ತುದಿಗೆ ಸ೦ತಸದ ಮೌನ ಸ೦ಚಾರ.

ನನಸಾಗಿ

ಬರದೇ ಹೋದರೂ

ಕನಸಾಗಿ ಬಾಳ ಜೊತೆಗಿರು..

 

 

*ತೇರು..*

 

ಕಾಣುವ ಪ್ರತಿ ಕನಸಿಗೆ

ನಿನ್ನದೇ ಹೆಸರು.

ನನ್ನಿಡೀ ಜೀವನ

ಕನಸಿನ ತೇರು..

 

*ಒಲುಮೆ*

 

ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು

ಬೆಟ್ಟದಷ್ಟು ಒಲುಮೆ ತರಲು

ಬೇಡವೆನ್ನಲು ನಾ

ಪ್ರೀತಿಯ ಸಿರಿವ೦ತನಲ್ಲ.

ಹೃದಯವಿನ್ನು ತು೦ಬಿರದ

ಕಡು ಬಡವ ನಾ...