ಹನಿ -- ಮಾಲೆ

ಹನಿ -- ಮಾಲೆ

ಕವನ

೧... ಹಾಯ್ಕು

ತೋರಣಗಳ

ನಡುವೆ ಅರಳಿತು

ನವ ಯೌವನ !

 

೨... ಕವಿತೆ

ಹೃದಯ

ಆತ್ಮ

ಸಮ್ಮಿಲನ

ಸಂಬಂಧಗಳ

ನಡುವಿನ

ಬಿಂದು !

 

೩... ಟಂಕಾ

ಮೌನಗಳಿಂದು

ಮನಸುಗಳ ಜೊತೆ

ಸೇರುವುದಿಲ್ಲ

ವೈರಿಗಳಂತೆ ಬಾಳಿ

ಮಸಣ ಸೇರುತ್ತವೆ !

 

೪..ಅಬಾಬಿ

ದುಃಖದ ಹೊಳೆಯಲ್ಲಿ 

ತೇಲಿ ಸಾಗುತ್ತಿರುವೆ

ಹಾಯಿ ದೋಣಿಗಳಿಲ್ಲ

ದಡಸೇರುವ ತವಕದಲ್ಲಿರುವೆ !

 

೫...ರುಬಾಯಿ

ಯೌವನ ಓಡೋಡಿ ಬಂದಿತು

ಶೃಂಗಾರ ಪ್ರೀತಿಯ ತಂದಿತು

ಸುಖದ ಕಡಲು ಎದ್ದಾಗ

ಪ್ರೇಮವು ಉಕ್ಕುತ ನಿಂದಿತು

 

೬...ಲಿಮೆರಿಕ್

ಹುಟ್ಟು ಸಾವಿನ ನಡುವೆ ಪ್ರೀತಿಯಿದೆ

ಮೋಹ ಪಲ್ಲವಿ ಜೊತೆಗೆ ತಾಳ್ಮೆಯಿದೆ

ಗಂಡನು ಕೈಯನು ಹಿಡಿದಾಗ

ಹೆಂಡತಿ ಹತ್ತಿರ ಸೇರಿದಾಗ

ಜೀವನ ಪಾಠಕೆ ಸನಿಹ ಏಣಿಯಿದೆ 

 

೭ ... ತನಗ

ಬಾಳಿನೊಲುಮೆಯೊಳು

ಸವಿ ಹರಡುತಿರೆ

ಬದುಕಿನಾಟವದು

ಹಾಳಾಗದು ನೋಡೆಂದು !

 

೮.. ಒಡಪು

ಬಂಡೆಗಪ್ಪಳಿಸುವಂತೆ ಬಟ್ಟೆ ಒಗೆಯುತಲಿಹಳು

ರಪ ರಪನೆ ಹಪ್ಪಳ ಸಂಡಿಗೆ ಮಾಡುತಲಿಹಳು

ಬೋಸ ನೀನೆಂದು ನನ್ನ ಹಂಗಿಸುತಲಿಹಳು

ಬಾಸು ನಾನೆಂದು ವೀಣಾ ಹೇಳುತಲಿಹಳು

 

-ಹಾ ಮ ಸತೀಶ ಬೆಂಗಳೂರು*

 

ಚಿತ್ರ್