ಹರಯ ಮಯ್ಯ ಕೊರೆವ ಚಳಿಗೆ....

ಹರಯ ಮಯ್ಯ ಕೊರೆವ ಚಳಿಗೆ....

ಕವನ

 

ಹರಯ ಮಯ್ಯ ಕೊರೆವ ಚಳಿಗೆ
ನಿದಿರೆಗೆ ವಶವಾದನೆ
ಕನಸೊಂದನು ಕಂಡನೆ
ಮನದಿ ಮುದಗೊಂಡೆನೆ!
 
ಹರಿವ ತೊರೆಯ ನೀರ ಬದಿಗೆ 
ಹರಿಯ ನೆನೆದು ತಿರುಗುತಿರಲು
ಹಲವು ಬಗೆಯ ಮುಗುಳು ಮುಡಿದು
ಚೆಲುವನೊಬ್ಬ ಬಂದನೆ
ಕೊಳಲ ಕರದಿ ತಂದನೆ
ಬಳಿಗೆ ಬಂದು ನಿಂದನೆ
'ಒಲಿವೆ ನಿನಗೆ' ಎಂದನೆ!
ಅವನೇ ಯಶೋದ ಕಂದ
ಅವನು ಮುಕುಂದನೇ!
 
(ಮುಗುದೆಯಾದ ಸೊಗದ ಹೆಣ್ಣು)
ನಗುತನಾನು ಬಳಿಗೆ ಸರಿದು
'ನಾನಲ್ಲ ನಿನ್ನ ರಾಣಿ ರಾಧೆ'
'ತಿಳಿಯದೆ ಏಕೆ ಹೋದೆ?'
ನುಡಿಯೆ ಅವನ ಕಿವಿಯೊಳು!
 
ಶೂನ್ಯವಾಯಿತೆಲ್ಲ 
ಅಲ್ಲಿ ಮುರಳಿ ಧಾರಿ ಇಲ್ಲ
ಇರಳು ಕಳೆಯೆ, ಬೆಳಗು ಹರಿಯೆ
ನಿಜಕೆ ವಶವಾದನೆ.
-ಮಾಲು