ಹರಿಯ ನೆನೆದು ಹೆಜ್ಜೆಯಿರಿಸು

ಹರಿಯ ನೆನೆದು ಹೆಜ್ಜೆಯಿರಿಸು

ಕವನ

ಇಟ್ಟ ಧೃಡತೆಯ ಹೆಜ್ಜೆ

ದಟ್ಟ ಕಾನನ ನಡುವೆ

ಬಿಟ್ಟು ಸಾಗುತಲಿರುವೆ ಭಯದ ನೆರಳು

ಸುಟ್ಟು ಹೋಗದ ಮೋಹ

ಕಟ್ಟಿ ಸೆಳೆದಿರುವಾಗ

ನೆಟ್ಟ ನೋಟದೆ ಹುಡುಕಿ ಕರೆವ ಕೊರಳು

 

ಭರದಲಿಡುತಿರೆ ಹೆಜ್ಜೆ

ಕರದಿ ಹಿಡಿದಿಹೆ ಲಾಂದ್ರ

ಕರಗಿ ಹೋಗಲಿ ನಿಶೆಯು ಮಂಜಿನಂತೆ

ಅರಸಿ ಪಡೆಯುವ ಮನದೆ

ಮರುಗಲೇತಕೆ ಬರಿದೆ

ದೊರೆಯದುಳಿಯದು ನಿನಗೆ ಬೇಡ ಚಿಂತೆ

 

ಬೆರಗುಗೊಳಿಸುವ ತರದಿ

ಸೆರಗು ಹಾಸಿದ ಮಂಜು

ಮರೆಗೆ ಸರಿಯಲಿ ಬೇಗ ವಿಧಿಯ ಮುನಿಸು

ಗುರಿಯ ಸೇರುವ ಯೋಗ

ಬರಲಿ ಬಾಳಲಿ ಬೇಗ

ಹರಿಯ ಮನದಲಿ ನೆನೆದು ಹೆಜ್ಜೆಯಿರಿಸು||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್