ಹಳೇ ಗಾದೆಗಳು :
ಬರಹ
ಹಳೇ ಗಾದೆಗಳು :
ಕದ ತಿನ್ನೋನ್ಗೆ ಹಪ್ಳ ಈಡೆ ?
ಹೊಟ್ಟೆ ಬಾಕನಿಗೆ ಏನು ಕೊಟ್ಟರೂ ಕಡಿಮೆಯೆ.
ಹೋದ್ಯ 'ಶನೀಶ್ವರ' ಅಂದ್ರೆ ಬಂದೆ ಗವಾಕ್ಷೀಲಿ, ಅಂದ.
ಕಷ್ಟಗಳು ಪದೆ ಪದೆ ಬರುತ್ತವೆ.
ಇಳಿವಯಸ್ ನಲ್ಲಿ ಸೂಳೆನೂ ಗರತಿ ಅದ್ಲಂತೆ.
ಪರಿಸ್ಥಿತಿ ಒಂದೇಸಮನಾಗಿರಲ್ಲ.
ಹೊಳೆನೀರ್ ಮುಟ್ಟಕ್ಕೆ, ಗೊಣೆನಾಯ್ಕನ್ ಅಪ್ಪಣೆಯೇ ?
ಪ್ರಕ್ರುತಿಯಲ್ಲಿ ಕಾಣುವ ನದಿ, ತೊರೆಗಳು ಸರ್ವರಿಗೂ ಲಭ್ಯ.