ಹಳೇ ಗಾದೆಗಳು:

ಹಳೇ ಗಾದೆಗಳು:

ಬರಹ

ಹಳೇ ಗಾದೆಗಳು:

ಇದ್ದಿದ್ ಇದ್ದಂಘೇಳಿದ್ರೆ ಎದ್ ಬಂದು ಎದೆಗೊದ್ನಂತೆ.
ನಿಜ ಹೇಳೋದ್ ಯಾರಿಗೂ ಹಿತವಾಗೋಲ್ಲ.

ಹಿಟ್ಟು ಹಳಸಿತ್ತು, ನಾಯಿ ಕಾದಿತ್ತು.
ಪರಿಸ್ಥಿತಿ ತೀರ ಕೆಟ್ಟು ಹೋದ ಮೇಲೆ ಇದೇ ಬೇಕು ಅದೇ ಬೇಕು ಅನ್ನುವಂತಿಲ್ಲ.

ಉಪ್ಗಿಂತ ರುಚಿ ಇಲ್ಲ, ತಾಯಿಗಿಂತ ಆಪ್ತರಿಲ್ಲ.
ಉಪ್ಪಿಲ್ಲದ ಅಡುಗೆ ತಿಂದೋರ್ಗೇ ಗೊತ್ತು.
ತಾಯಿಗಿಂತ ಹಿತವಂತರು ಯಾರು, ಸಾಧ್ಯವೇ ಇಲ್ಲ.!

ಕಂಕ್ಳಲ್ಲಿ ಮಗು ಇಟ್ಕೊಂಡು, ಊರೆಲ್ಲ ಹುಡುಕಿದ್ಳಂತೆ.
ವಸ್ತು ಕಣ್ಮುಂದಿದ್ದರೂ, ಗಮನ ಎಲ್ಲೋ ಇದೆ.

ವೆಂಕಟೇಶ್.