ಹಾಗಲಕಾಯಿ ತುಂಡು ಮಸಾಲಾ
ಹಾಗಲಕಾಯಿ ೨ (ಮಧ್ಯಮ ಗಾತ್ರ), ಹುಣಸೆಹುಳಿ - ಲಿಂಬೆ ಹಣ್ಣು ಗಾತ್ರದ್ದು, ಬೆಲ್ಲ - ರುಚಿಗೆ ತಕ್ಕಷ್ಟು, ಕೊತ್ತಂಬರಿ ೩ ಸಣ್ಣ ಚಮಚ, ಮೆಂತ್ಯೆ ಅರ್ಧ ಚಮಚ, ಬ್ಯಾಡಗಿ ಮೆಣಸಿನಕಾಯಿ ೫, ಕಾಯಿ ಮೆಣಸು ೧, ರುಚಿಗೆ ತಕ್ಕಷ್ಟು ಉಪ್ಪು.
ಒಗ್ಗರಣೆಗೆ: ಎಣ್ಣೆ, ಸಾಸಿವೆ, ಕರಿಬೇವು ಸೊಪ್ಪು
ಮೊದಲಿಗೆ ಲಿಂಬೆ ಹಣ್ಣಿನ ಗಾತ್ರದ ಹುಣಸೆ ಹುಳಿಯ ರಸವನ್ನು ಮಾಡಿ ಇಟ್ಟುಕೊಂಡಿರಿ. ಮೆಂತ್ಯೆ, ಕೊತ್ತಂಬರಿ ಮತ್ತು ಬ್ಯಾಡಗಿ ಮೆಣಸನ್ನು ಹುರಿದು ಮಿಕ್ಸಿಯಲ್ಲಿ ಹಾಕಿ ಹುಡಿ ಮಾಡಿರಿ. ಹಾಗಲಕಾಯಿಯನ್ನು ವೃತ್ತಾಕಾರದಲ್ಲಿ ಸ್ವಲ್ಪ ದೊಡ್ಡ ಗಾತ್ರದಲ್ಲಿ ಕತ್ತರಿಸಿ ಇಟ್ಟುಕೊಂಡಿರಿ. ಒಲೆಯ ಮೇಲೆ ಬಾಣಲೆಯನ್ನು ಇರಿಸಿ ಮೊದಲೇ ಕತ್ತರಿಸಿದ ಹಾಗಲ ಕಾಯಿಯ ತುಂಡುಗಳನ್ನು ಅದಕ್ಕೆ ಹಾಕಿ. ಹುಣಸೇಕಾಯಿ ರಸ, ಕಾಯಿಮೆಣಸು ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಅದರಲ್ಲಿ ಹಾಗಲಕಾಯಿಯು ಅರ್ಧ ಬೆಂದ ನಂತರ ರುಚಿಗೆ ಬೇಕಾದಷ್ಟು ಬೆಲ್ಲ ಸೇರಿಸಿ. ಬೆಲ್ಲ ಕರಗುವವರೆಗೆ, ಸ್ವಲ್ಪ ಗಟ್ಟಿಯಾಗುವವರೆಗೆ ಕಲಡಿರಿ. ಕೊನೆಗೆ ಮೊದಲೇ ಹುರಿದು ಹುಡಿಮಾಡಿಟ್ಟ ಸಾಮಾಗ್ರಿಗಳನ್ನು ಸೇರಿಸಿ, ಕುದಿಸಿರಿ. ಮಸಾಲಾ ಗಟ್ಟಿಯಾದ ಬಳಿಕ ಅದನ್ನು ಒಲೆಯಿಂದ ಕೆಳಗಿಳಿಸಿ ಸಾಸಿವೆ, ಕರಿಬೇವಿನ ಸೊಪ್ಪಿನ ಒಗ್ಗರಣೆ ಕೊಡಿ.