ಹಾಸ್ಯವಿರಲಿ ಮಾತಿನಲಿ ಮಿತ್ರ

ಹಾಸ್ಯವಿರಲಿ ಮಾತಿನಲಿ ಮಿತ್ರ

ಬರಹ

ಹಾಸ್ಯವಿರಲಿ ಮಾತಿನಲಿ ಮಿತ್ರ

ಅಮಿತ ಗೌರವಿತ ಹಿತ ಪಾಲಚಂದ್ರ,
ನಮಿಸುತಿಹನೋರ್ವ ಮಿತ ಮಹೇಂದ್ರ,
ತೀಕ್ಷ್ಣ ತಿಣುಕಿ ಕೂಡಿಸಿ ಸಮಸ್ತ ಮನಸೇ
ತತ್ಪರತೆಯಲಿ ತಿಳಿಸಲಿದವನ ವರಸೆ.
*
ಅಪರಿಚಿತ ಅಂತರ್ಜಾಲ ವ್ಯವಹಾರ ಮಿತ್ರ
ನಿನ್ನಪಾರ ನಿಷ್ಠತೆಯ ಮಾತು ಪವಿತ್ರ
ವಿನಯತೆ ತೋರುವ ಕ್ಷಮೆ ಕೋರುವ
ಖಂಡಿತ ಅನುಚಿತ ಮೇಲೆತ್ತು ಶಿರವ.
*
ಮನುಜಗೆ ಹಾಸ್ಯಗುಣ ಮೇಲು
ಕ್ಲಿಷ್ಟ ಸಮಯಕೆ ಗಳಿಗಳಿಗೆ ಸೋಲು
ಹಾಸ್ಯವಿಲ್ಲದ ಮಾತುಕತೆ ನೀರಸ
ಮನಕಾಯಾಸ ಬದಲಿ ಇರಲಿ ಸರಸ.
*
ಕಾಪಾಡಿ ಕೂಡಿಸು ಚಕಿತ ಹಾಸ್ಯಗುಣ
ಚಕಚಕಿತ ಹಾಸ್ಯಗಾರರಂತೆ ಮೇಲಣ
ಸಿದ್ಧ ಚುರುಕು ಮಾತಾಡಿ ಮಿತ್ರರೊಡನೆ
ಪ್ರಸಿದ್ಧನಾಗು ನಗೆಮಾತಾಡಿ ಸರ್ವರೊಡನೆ
*
ಚಕಿತ ಚೊಕ್ಕ ಮಾತಿನಮಾಲೆ ಕಟ್ಟುವುದು
ಸಹಜಶಕ್ತಿ ತನ್ನ ಮನಸ್ಸೂ ಮುಟ್ಟುವುದು
ಇನಿಸುವವರಿಗೆಲ್ಲ ಆನಂದವಾಗುವುದು
ಅಂದು ಆ ದಿನ ಸುಕೃತ ಗಳಿಸಿತೆಂದು.
*
ಅಂದನಿಸುವುದು ನಿನಗೆ: "ಇದೇ ಮಹಾಸುದಿನ"
ಚೊಕ್ಕ ಜೋಕುಮಾತು ಮಿಡಿದ ಮಹಾದಿನ
[ಅದೊಂದು ಚಲನಚಿತ್ರದ ಹಾಡಿನ ಸಾಲು,
ಹಾರಿಸಿಕೊಂಡು ಜೋಡಿಸಿದೆ ನವ ಕಾಲು!]
*
ವಿಜಯಶೀಲ, ೧೧.೦೬.೦೯
*
[ಪತ್ರ ಕವನಮಾಲೆ]