ಹಾ ಮ ಸತೀಶರ ಕೆಲವು ಹನಿಗಳು

ಹಾ ಮ ಸತೀಶರ ಕೆಲವು ಹನಿಗಳು

ಕವನ

ತಳುಕು

ಖಾಲಿ ಕೊಡ

ಹಿಡಿದು ಬಂದ

ನೀರೆಯ ವಯ್ಯಾರಕ್ಕೆ

ಪೈಪೇ ಒಡೆದು

ನೀರು ಚಿಮ್ಮಿತು

ಸುತ್ತಲೂ ತಂಪಾಯಿತು !

*****

ತಲೆಗಳು

ಹೆತ್ತವರ ತಲೆಗಳು

ಗಿರಿ ಬೆಟ್ಟ ಶಿಖರಗಳು

ನಡು ನಡುವೆ

ಅಲ್ಲೊಂದು ಇಲ್ಲೊಂದು

ಸಣ್ಣಗೆ ಹರಿಯುವ

ನೀರಿನ ಝರಿಗಳು ! 

*****

ಬದು ಬದುಕಿನೊಳಗೆ 

ಬದು ಬದುಕಿನೊಳಗೆ

ಬದು ಬದುಕು ಸೇರಿ

ಬದು ಬದುಕ ನಡೆಯ ನೋಡಿ

ಬದು ಬದುಕಿನಾಟ

ಬದು ಬದುಕ ಜೊತೆಗೆ 

ಬದು ಬದುಕಿಕೊಂಡು ಬಾಳಿ

 

ಬದು ಬದುಕ ಭ್ರಮೆಗೆ

ಬದು ಬದುಕ ಚಿತ್ತ

ಬದು ಬದುಕಿನಲ್ಲೆ ಅರಳಿ

ಬದು ಬದುಕ ಪಯಣ 

ಬದು ಬದುಕಿನಾಚೆ

ಬದು ಬದುಕಿನೆಳೆಯ ತೊಡಗಿ

 

ಬದು ಬದುಕಿಗಿರಲು

ಬದು ಬದುಕುವಾಸೆ

ಬದು ಬದುಕ ಏಣಿ ಏರಿ

ಬದು ಬದುಕ ನೆಲದಿ

ಬದು ಬದುಕ ಕಂಡು

ಬದು ಬದುಕಿದಂತೆ ಸಾಗಿ

*****

ಬದುಕು

ಬದುಕಿನೊಳಗೆ

ಬದುಕು ಸೇರಿ

ಬದುಕ ನಡೆಯ ಕಂಡಿತು

ಬದುಕಿನಾಟ

ಬದುಕ ಜೊತೆಗೆ

ಬದುಕಿಕೊಂಡು ಬಾಳಿತು

 

ಬದುಕ ಭ್ರಮೆಗೆ

ಬದುಕ ಚಿತ್ತ

ಬದುಕಿನಲ್ಲೆ ಅರಳಿತು

ಬದುಕ ಪಯಣ

ಬದುಕಿನಾಚೆ

ಬದುಕನೆಳೆಯ ತೊಡಗಿತು

 

ಬದುಕಿಗಿರಲು

ಬದುಕುವಾಸೆ

ಬದುಕ ಏಣಿ ಏರಿತು

ಬದುಕ ನೆಲದಿ

ಬದುಕ ಕಂಡು

ಬದುಕಿದಂತೆ ಸಾಗಿತು

 

-ಹಾ ಮ ಸತೀಶ

 

ಚಿತ್ರ್