ಹಾ ಮ ಸತೀಶ್ ಅವರ ಕವನ ಮತ್ತು ಹನಿಗಳು

ಹಾ ಮ ಸತೀಶ್ ಅವರ ಕವನ ಮತ್ತು ಹನಿಗಳು

ಕವನ

ಕಲಿತು ಕಲಿತಿಲ್ಲದವರ ನಡುವೆ

ಕಲಿತವರ ನಡುವೆ 

ಕಲಿತವರು ಇರಬಾರದು

ಕಲಿತವರು ಕಳೆಯಬಾರದು

ಕಲಿತವರ ನಡು ನಡುವೆಯೆ

ಕಲಿತು ಕಳೆದು ಹೋಗಬಾರದು

 

ಕಲಿತವರೆಲ್ಲರೂ ಕಲೆಗಾರರಲ್ಲ

ಕಲಿತವರ ಕೊರಳಲ್ಲಿ ಬಿರುದುಗಳಿಲ್ಲ

ಕಲಿತ ಹಲವರ ತಲೆಯೊಳಗೆ

ಕಲಿತಿರುವ ಮಿದುಳುಗಳೇ ಇಲ್ಲ

ಕಲಿತಿರುವ ವಿದ್ಯೆ ಪರಬ್ರಹ್ಮನಿಗೇ ಗೊತ್ತು

 

ಕಲಿತ ಬುದ್ದಿಗೆ ಬೆಲೆಯೇ ಇಲ್ಲವಿಲ್ಲಿ

ಕಲಿತ ಬದ್ದುಗಳಿಗೇ ಹೂ ಮಾಲೆ ಸನ್ಮಾನ

ಕಲಿತರೆ ಸಾಕು ಮತ್ತೆ ಕಲಿಯುವುದು ಬೇಡ

ಕಲಿತವರ ತಲೆಯೊಳಗೆ ಇರುವ ಭರಣಿ

ಕಲಿತು ಹೇಳುತ್ತಿದೆ ಕೊಳೆತು ನಾರುತ್ತಿದೆ 

 

ಕಲಿತವರಲ್ಲಿ ಕೆಲವರು ವೈರಸ್ ಇದ್ದಂತೆ

ಕಲಿತ ವಿದ್ಯೆಯ ಬೇಡವೆಂದರೂ ತುರುಕುವರು

ಕಲಿತದ್ದು ಸಾರ್ಥಕವೆಂದಾಗ ದೂರ ತಳ್ಳುವರು

ಕಲಿತು ಮಾಡಿದ್ದಾದರೂ ಏನೆಂದು ತಿಳಿದಿಲ್ಲ

ಕಲಿತು ತಿಳಿಯುವುದೂ ಇಲ್ಲ ಒಂದು ದಿನ ನಾಪತ್ತೆ

 

ಕಲಿತದ್ದು ಸಾಕು ಎಂದೇನೂ ಆಗಲಾರದ ಸಮಯ

ಕಲಿತವರ ಜೊತೆ ಸೇರುವ ಮನಸ್ಸಿಲ್ಲದವರು

ಕಲಿತವನ ಬರಹಗಳ ಹಾಸ್ಯ ಮಾಡುತ್ತಾ ಸಾಗುವರು

ಕಲಿತ ಕಡೆಗಿಲ್ಲದವರ ಮನಸ್ಥಿತಿಯೇ ಇದು ತಾವು ನಿಯತ್ತಿನಲ್ಲಿ

ಕಲಿತವರಲ್ಲ ಕಲಿತವನ ಸ್ಥಾನಗಳಿಗೆ ಗೌರವ ಕೊಡುವುದೂ ಇಲ್ಲ 

*****

ಹನಿಗಳು

ಹೊಟ್ಟೆ

ಉರಿ

ತಾ

ಗಳ

ನಡುವೆ

ನಮ್ಮ

ಸ್ಥಿತಿ

ಕೊನೆಯ

ಬೇಂಚಿನ

ಹುಡುಗನಂತೆ !

***

ಓಂ

ಕಾರ

ಳೇ

ನಮ್ಮ

ನಡುವಿನ

ಪ್ರಭಾ

ವಲಯ !

***

ತಪ್ಪಿಲ್ಲದಿದ್ದರೂ

ತಪ್ಪಿದೆ

ಎನ್ನುವವರು

ಸಮಾಜ

ಮುಖಿಗಳು !

 

-ಹಾ ಮ ಸತೀಶ

 

ಚಿತ್ರ್