ಹಾ. ಮ. ಸತೀಶ್ ಅವರ ಗಜ಼ಲ್ ಗಳ ಲೋಕ

ಹಾ. ಮ. ಸತೀಶ್ ಅವರ ಗಜ಼ಲ್ ಗಳ ಲೋಕ

ಕವನ

ಚಂದ್ರನ ಜೊತೆಯಲೆ ಸಾಗುವಿಯೇನೆ ಹೇಳೆ ಸಖಿ

ನವಿಲಿನ ತೆರದಲಿ ಕುಣಿಯುವಿಯೇನೆ ಹೇಳೆ ಸಖಿ

 

ಬಂಧನವು ಯಾರಿಗಿಲ್ಲವಿಲ್ಲಿ ಹರಿವ ನೀರಿಗೂ ತಡೆಯಿದೆ

ಇಬ್ಬನಿಯಲಿರುವ ಚಳಿಯಂತೆ ನಡುಗುವಿಯೇನೆ ಹೇಳೆ ಸಖಿ

 

ಹೂವಿನಿಂದ ಮಕರಂದ ಹೀರುವ ದುಂಬಿಯೆಂದು ತಿಳಿದೆಯಾ

ತಪ್ಪುಗಳಿಲ್ಲದೆಯೇ ನನ್ನೊಳಗೆ ಇದೆಯೆಂದು ಕೇಳುವಿಯೇನೆ ಹೇಳೆ ಸಖಿ

 

ಸಾಗರದ ಅಲೆಯಂತೆ ಬದುಕಿನಲ್ಲಿ ಅಬ್ಬರಿಸದಿರುಯೆಂದು ಹೀಗೆ

ಉತ್ಸವದಲ್ಲಿರುವ ಮೂರ್ತಿಯಂತೆ ಕುಳಿತುಕೊಳ್ಳುವಿಯೇನೆ ಹೇಳೆ ಸಖಿ

 

ಈಶನ ಮನದಾಳದ ಧ್ವನಿಗಳಿಗೆ ಯಾವತ್ತೂ ಬೆಲೆಬರಲೀಯೆಂದು

ತಾವರೆಯ ಎಲೆಗಳ ಮೇಲಿನ ಹನಿಗಳಲ್ಲಿ ಇರುವಿಯೇನೆ ಹೇಳೆ ಸಖಿ

***

ದೇಶವ ಲೂಟಿ ಮಾಡುವುದು ಹೀಗೆಯೇ

ನಾಡಿನ ಬದುಕನ್ನು ಕೆಡಿಸುವದು ಹೀಗೆಯೇ

 

ಗೊತ್ತಾಗದ ರೀತಿಯಲ್ಲಿ ತಿನ್ನುವುದು ಹೀಗೆಯೇ

ಹಂಚಿಕೊಳ್ಳದೆ ನಾಯಕನಾಗಿ ಇರುವುದು ಹೀಗೆಯೇ

 

ಜನಸಾಮಾನ್ಯರ ಬದುಕನ್ನು ಹರಿಯುವುದು ಹೀಗೆಯೇ

ಕಳ್ಳರಂತೆ ಅಡಗಿಕೊಂಡು ಆಳುವುದು ಹೀಗೆಯೇ

 

ಬಡವರಿಗೆ ಉಪದೇಶ ನೀಡುವುದು ಹೀಗೆಯೇ

ಕನಸಿಗರಿಗೆ ಚಳ್ಳೆಹಣ್ಣ ಇರಿಸುವುದು  ಹೀಗೆಯೇ

 

ಈಶನ ದಯೆಯಲ್ಲಿ ಹಾರುವುದು  ಹೀಗೆಯೇ

ಬದಲಿಸಲು ಸಾಧ್ಯವೇನು ಕಲಿಸುವುದು  ಹೀಗೆಯೇ

 

-ಹಾ ಮ ಸತೀಶ

 

ಚಿತ್ರ್