ಹಾ. ಮ. ಸತೀಶ್ ಅವರ ಹನಿಗಳು

ಹಾ. ಮ. ಸತೀಶ್ ಅವರ ಹನಿಗಳು

ಕವನ

ದಾನ

ಪಡೆಯುವುದು 

ಕೊಡುವುದು 

ಎರಡೂ

ಶ್ರೇಷ್ಠವೆ !

***

ಚೌ ಚೌ 

ರವೆಯಲ್ಲಿ

ಚೌ ಚೌ ಬಾತ್

ಇರುವಂತೆ

ಬದುಕಿನಲ್ಲೂ

ಸ್ವಲ್ಪ ಸಿಹಿ

ಸ್ವಲ್ಪ ಖಾರ !

***

ಹೇಳಿ ಕೇಳಿ

ಕಾಯಿಲೆಗಳು 

ಹೇಳಿ ಕೇಳಿ

ಬರುವುದಿಲ್ಲ

ಹಣದಂತೆ !

***

ಪರಿಸ್ಥಿತಿ

ಹಿಂದೆ ಕೆಮ್ಮಿದರು

ಸೀನಿದರೂ

ತಲೆ

ಕೆಡಿಸಿಕೊಳ್ಳದವರು

ಇಂದು

ಅ್ಯಕ್ಷೀ

ಅಂದರೆ 

ಸಾಕು

ಸಂಬಂಧಗಳ

ಕಡಿದು

ಕೊಳ್ಳುವರು !

***

ನಿಜ

ಎಲ್ಲವನ್ನೂ 

ತೆರೆದಿಡಬೇಡ

ಇನ್ನೂ ಏನೋ

ನಿನ್ನಲಿದೆ

ಸಖಿ

ಯಾಕೆಂದೆರೆ

ನಾ

ನಿನ್ನ

ಆತ್ಮ ಸಖ !

-ಹಾ ಮ ಸತೀಶ

 

ಚಿತ್ರ್