ಹಿರೋಶಿಮಾದ ಹೂವುಗಳು

ಹಿರೋಶಿಮಾದ ಹೂವುಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಎಡಿಟಾ ಮೋರಿಸ್,ಕನ್ನಡಕ್ಕೆ : ಡಾ. ವಿಜಯ್ ನಾಗ್ ಜಿ.
ಪ್ರಕಾಶಕರು
ಸೃಷ್ಟಿ ಪಬ್ಲಿಕೇಷನ್ಸ್, ಗೋವಿಂದರಾಜ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೨

'ಫ್ಲವರ್ಸ್ ಆಫ್ ಹಿರೋಶಿಮಾ' ಕಾದಂಬರಿಯ ಮೂಲಕ ಜಗತ್ತಿನ ೩೯ ಭಾಷೆಗಳಿಗೆ ಅನುವಾದವಾಗಿರುವ ಈ ಕಾದಂಬರಿಯು, ಕನ್ನಡಕ್ಕೆ ಬಹಳ ತಡವಾಗಿಯಾದರೂ ಡಾ. ವಿಜಯ್ ನಾಗ್ ಅವರಿಂದ ಬರುತ್ತಿರುವುದು ಬಹಳ ಸಂತೋಷದ ವಿಷಯ. ಅಣುದಾಳಿ, ವಿಕಿರಣದ ಪರಿಣಾಮದಿಂದ ಉಂಟಾದ ನೋವು, ಹತಾಷೆಗಳನ್ನೇ ಕೇಂದ್ರವಾಗಿಟ್ಟುಕೊಂಡು ರಚನೆಯಾದ ಕಾದಂಬರಿಗಳ ಪಟ್ಟಿ ಹೇಗೆ ದೊಡ್ಡದಿದೆಯೋ, ಹಾಗೆಯೇ ಮನುಷ್ಯ ಪ್ರಕೃತಿಯ ಮೇಲೆ, ಕೊನೆಗೆ ತನ್ನೊಡನೆ ಇರುವ ಮನುಷ್ಯನ ಮೇಲೆಯೇ ಏಕಸ್ವಾಮ್ಯತೆಯನ್ನು ಸ್ಥಾಪಿಸಲು ಹವಣಿಸಿ ಮಾಡಿಕೊಂಡ ಅಪಾಯಗಳ ಕುರಿತು ರಚನೆಯಾದ ಕಾದಂಬರಿಗಳ ಪಟ್ಟಿಯೂ ಅಷ್ಟೇ ಇದೆ. 'ಹಿರೋಶಿಮಾದ ಹೂವುಗಳು' ಈ ಪಟ್ಟಿಗೆ ಬರುವ ಕಾದಂಬರಿ. ಮನುಜಕುಲ ಎದುರಿಸಿದ, ಇಂದೂ ಭಯದಲ್ಲೇ ಇರುವ ಬಹುದೊಡ್ಡ ಅಪಾಯಗಳು, ಅಣುಬಾಂಬ್ ಮತ್ತು ಜೈವಿಕ ಅಸ್ತ್ರಗಳು, ಲಿಟಲ್ ಬಾಯ್ ಮತ್ತು ಫ್ಯಾಟ್ ಬಾಯ್ ಎಂಬೆರಡುಗಳಿಂದ ನಾಶವಾದ ಹಿರೋಶಿಮಾ ಮತ್ತು ನಾಗಾಸಾಕಿಗಳೆಂಬ ಅವಳಿ ಪಟ್ಟಣಗಳಲ್ಲಿ ಒಂದಾದ, ಹಿರೋಶಿಮಾ ನಗರದಲ್ಲಿನ ಒಂದು ಕುಟುಂಬಕ್ಕೆ ಒದಗಿದ ದುಃಸ್ಥಿತಿಯನ್ನು ಕೇಂದ್ರವಾಗುಳ್ಳ ಕಾದಂಬರಿಯಿದು. ಒಂದಿಡೀ ಭೂಭಾಗದ ಜನರ ವ್ಯಥೆಯನ್ನು ಕಾದಂಬರಿಯಲ್ಲಿ ಕಾಣಿಸದೆ, ಹಾಗೆ ಕಾಣಿಸಿ ಕಾದಂಬರಿಯ ಗಾತ್ರವನ್ನು ಹೆಚ್ಚು ಮಾಡದೇ, ಒಂದು ಕುಟುಂಬ 'ರೇಡಿಯೇಟ್' ಗೆ ಸಿಕ್ಕು ನರಳಿದ ಕಥೆ ಈ ಕಾದಂಬರಿಯ ವಸ್ತುವಾಗಿದೆ. ಗಾತ್ರದಲ್ಲಿ ಕಿರಿದಾದರೂ ಅದರ ಕಲಾತ್ಮಕತೆ, ಸಾರುತ್ತಿರುವ ಆಶಯಗಳಲ್ಲಿ ಹಿರಿದಾಗಿದೆ. ಕಾದಂಬರಿಯ ರಚನೆಗೆ ಮಾಡಿಕೊಂಡಿರುವ ವಸ್ತುವಿನ ಆಯ್ಕೆಯೇ ಶಕ್ತಿಯುತವಾಗಿದೆ ಹಾಗೆಯೇ ಮತ್ತೂ ಅಂತಹ ಅಪಾಯಗಳಿಂದ ದೂರವಿರುವಂತೆ ಓದುಗರನ್ನು ಆಲೋಚಿಸುವಂತೆ ಮಾಡುತ್ತಿದೆ. ಎಂದು ಬೆನ್ನುಡಿಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ ಆರ್. ದಿಲೀಪ್ ಕುಮಾರ್ ಇವರು. 

ಕೃತಿಯ ಲೇಖಕರಾದ ಡಾ ವಿಜಯ್ ನಾಗ್ ಜಿ. ಇವರು ಮೈಸೂರಿನ ಸಿಟಿ ಸೆಂಟ್ರಲ್ ಲೈಬ್ರೆರಿಯಲ್ಲಿ ಗ್ರಂಥಾಲಯ ಸಹಾಯಕರಾಗಿದ್ದಾರೆ. ಅನುವಾದ ಕ್ಷೇತ್ರದಲ್ಲಿ ಪಳಗಿದ್ದಾರೆ. ಅವರ ಕೃತಿಗಳೆಂದರೆ ಜಿಮ್ ಗ್ರೀನ್ ಅವರ ಆಂಗ್ಲ ಕೃತಿ -"ಆಲ್ಬರ್ಟ್ ಐನ್ ಸ್ಟೀನ್ ; ಆಯ್ದ ಬರಹಗಳು", "ಜೆನ್ ಅನುಭವ", ಥಾಮಸ್ ಹೂವರ್ ರಚಿಸಿರುವ ಕೃತಿಯ ಅನುವಾದ "ಜಪಾನಿನ ಕಥೆಗಳು". ಇನ್ನೂ ಹಲವಾರು ಕೃತಿಗಳು ಪ್ರಕಟಣೆಯ ಹಂತದಲ್ಲಿವೆ.