ಹೀಗೂ ಉಂಟೇ! ಪ್ರಾಣಿ ಪ್ರಪಂಚ (ಭಾಗ 4)
೧೬.ಕುರುಡರಿಗೆ ಮಾರ್ಗದರ್ಶನ ನೀಡಲು ತರಬೇತಾದ ನಾಯಿಗಳಿಗೆ ರಸ್ತೆಗಳಲ್ಲಿ ಟ್ರಾಫಿಕ್ ದೀಪಗಳಲ್ಲಿ ಕೆಂಪು-ದೀಪ ಮತ್ತು ಹಸುರು-ದೀಪಗಳ ವ್ಯತ್ಯಾಸ ತಿಳಿಯುವುದಿಲ್ಲ. ಆದರೆ, ತನ್ನ ಮಾಲೀಕನನ್ನು ರಸ್ತೆ ದಾಟಿಸುವಾಗ, ವಾಹನಗಳ ದಟ್ಟಣೆಯನ್ನು ಗಮನಿಸಿ, ಯಾವಾಗ ರಸ್ತೆ ದಾಟುವುದು ಸುರಕ್ಷಿತ ಎಂದು ನಾಯಿ ನಿರ್ಧರಿಸುತ್ತದೆ.
೧೭.ಹನ್ನೆರಡನೆಯ ಶತಮಾನದ ತನಕ ಕುದುರೆಗಳನ್ನು ಹೊಲದ ಕೆಲಸಗಳಿಗೆ ಬಳಸುತ್ತಿರಲಿಲ್ಲ. ಯಾಕೆಂದರೆ, ರೋಮನರ ಕಾಲದಿಂದ ಬಳಕೆಯಲ್ಲಿದ್ದ ಕುದುರೆಗಳ ಎದೆ-ಜೀನುಗಳು ಹೊಲದ ಕೆಲಸಕ್ಕೆ ಸರಿ ಹೊಂದುತ್ತಿರಲಿಲ್ಲ. ಅನಂತರ ಆವಿಷ್ಕರಿಸಿದ ಹೆಗಲು-ಜೀನುಗಳು ಮತ್ತು ‘ಕುದುರೆ ಕೊಲರ್”ಗಳು ಹೆಚ್ಚು ತೂಕದ ವಸ್ತುಗಳನ್ನು ಹಾಗೂ ಕೃಷಿ ಉಪಕರಣಗಳನ್ನು ಕುದುರೆಗಳು ಎಳೆಯಲು ಸಹಕರಿಸಿದವು.
೧೮.ಏಕೈಕ ಹಾರುವ ಸಸ್ತನಿ ಬಾವಲಿ. ಅದೇನಿದ್ದರೂ “ಹಾರುವ ಅಳಿಲು” ಕಡಿಮೆ ದೂರವನ್ನು ಗಾಳಿಯಲ್ಲಿ ತೇಲುತ್ತಾ ಕ್ರಮಿಸಬಲ್ಲದು.
೧೯.ಭೂಮಿಯಲ್ಲಿ ಅತ್ಯಂತ ವೇಗವಾಗಿ ಓಡುವ ಪ್ರಾಣಿ ಚಿರತೆ. ಅದರ ಗರಿಷ್ಠ ವೇಗ ಗಂಟೆಗೆ ೯೬ರಿಂದ ೧೦೦.೮ ಕಿಮೀ! ಅದರ ವೇಗವರ್ಧನೆಯೂ ಅದ್ಭುತ. ಈಗ ನಿಂತಿರುವ ಚಿರತೆ ಕೇವಲ ಎರಡೇ ಸೆಕೆಂಡುಗಳಲ್ಲಿ ಗಂಟೆಗೆ ೭೨ ಕಿಮೀ ವೇಗ ಗಳಿಸುತ್ತದೆ! ಆದರೆ, ೨೭೪ ಮೀಟರ್ ದೂರದ ವರೆಗೆ ಮಾತ್ರ ಅದು ತನ್ನ ಗರಿಷ್ಠ ವೇಗವನ್ನು ಉಳಿಸಿಕೊಳ್ಳಬಲ್ಲದು. ಅನಂತರ, ಆಯಾಸದಿಂದಾಗಿ ಅದು ಬಲಿಪ್ರಾಣಿಯ ಬೆನ್ನಟ್ಟುವುದನ್ನು ಕೈಬಿಡುತ್ತದೆ.
೧೯.ಚಿಂಪಾಂಜಿಗಳಿಗೆ ೧೦೦ರಿಂದ ೨೦೦ರಷ್ಟು ಪದಗಳನ್ನು ಗುರುತಿಸಲು ತರಬೇತಿ ನೀಡಲಾಗಿದೆ.
೨೦.ಸಿಂಹಗಳ ಕುಟುಂಬಗಳಲ್ಲಿ ಹೆಣ್ಣು ಸಿಂಹಗಳೇ ಶೇಕಡಾ ೯೦ಕ್ಕಿಂತ ಜಾಸ್ತಿ ಬೇಟೆ ಮಾಡುತ್ತವೆ. ಗಂಡು ಸಿಂಹಗಳಿಗೆ ಜೀವಭಯ ಜಾಸ್ತಿ ಮತ್ತು ಅವು ವಿರಮಿಸಲು ಇಷ್ಟ ಪಡುತ್ತವೆ.
ಫೋಟೋ ೧: ಓಡುತ್ತಿರುವ ಚಿರತೆ ..... ಕೃಪೆ: ಸ್ಟಾಕ್ಫ್ರೀಇಮೇಜಸ್.ಕೋಮ್
ಫೋಟೋ ೨: ಚಿಂಪಾಂಜಿ ..... ಡ್ರೀಮ್ಸ್ ಟೈಮ್.ಕೋಮ್