ಹೀಗೊಂದು ಗಝಲ್

ಹೀಗೊಂದು ಗಝಲ್

ಕವನ

ಅಂಧಕಾರ ಮುಸುಗಿರುವ ಬಾಳಿಗೆ

ಬೆಳಕಾಗಿರುವೆ ಪ್ರಿಯೆ||

ದಾರಿಯು ಕಾಣದ ಪಯಣಿಗನಿಗೆ

ಮಾರ್ಗವಾಗಿರುವೆ ಪ್ರಿಯೆ||

 

ಎದೆಯಲ್ಲಿ ಅಂತರ್ಧಾನವಾದ ಒಲವನು

ಪಿಸುನುಡಿಯಲಿ ಅರುಹುವೆ|

ಹೃದಯವು ಮೌನ ಧರಿಸಿ ಕಂಗಳೆದುರಲಿ

ಕಾಣದಾಗಿರುವೆ ಪ್ರಿಯೆ||

 

ಎರಡು ಮನದಲಿ ಒಂದೆ ಪ್ರಾಣದ

ಬಿಂದುವಾದ ಚಂದ್ರಿಕೆ|

ಹಾಲು ಜೇನಿನ ಮಿಲನದಂತೆಯೆ

ಮಿಶ್ರವಾಗಿರುವೆ ಪ್ರಿಯೆ||

 

ಸುಮಕೋಮಲೆಯ ಬಣ್ಣಿಸುವ

ಕಲೆಗಾರನ ಕಲಾಕುಂಚ|

ಸರಿಗಮದ ಸ್ವರದಲಿ ರಾಗತಾಳದಿ

ಗಾನವಾಗಿರುವೆ ಪ್ರಿಯೆ||

 

ರಂಗಸಜ್ಜಿಕೆಯ ಡೌಡೆಯ ನಾದದಲಿ

ಕುಣಿಯುವ ಅಭಿನೇತ್ರಿ|

ವರಕವಿ ಅಭಿನವನ ಭಾವಯಾನದಲಿ

ಕಾವ್ಯವಾಗಿರುವೆ ಪ್ರಿಯೆ||

 

*ಶಂಕರಾನಂದ ಹೆಬ್ಬಾಳ* 

 

ಚಿತ್ರ್