ಹೀಗೊಂದು ಭಾವಗೀತೆ - *ಸಂಪ್ರೀತಿ - ನಂಪ್ರೀತಿ*

ಹೀಗೊಂದು ಭಾವಗೀತೆ - *ಸಂಪ್ರೀತಿ - ನಂಪ್ರೀತಿ*

ಕವನ

ಅಂತರಂಗ ಕದವು ತೆರೆದಿದೆ ಬಾ ಈಗ

ರಂಗುರಂಗು ತಳಿರು ಕಟ್ಟಿದೆ ನೋಡೀಗ

ಒಳಗಣ್ಣು ತೆರೆದು ನೀ ನೋಡು

ನನ್ನೆದೆಗೆ ಒಲವು ನೀ ನೀಡು||

 

ಅಂದಚೆಂದ ಸವಿಯು ಬಾರೋ ನೀ ನೀಗ

ಮೆಲ್ಲಮೆಲ್ಲ ಹೃದಯ ಹಾಡನು ಹಾಡೀಗ

ಸಂಪ್ರೀತಿ ಚೆಂದ ಮಾವಯ್ಯ ನಂಪ್ರೀತಿ ಜಗಕೆ ತೋರಯ್ಯ||

 

ಮೇಘಶಾಮ ಮುರಳಿ ಲೋಲನೆ ನೀನಯ್ಯ

ಕೃಷ್ಣಲೀಲೆ ಆಡು ಬಾಳಲಿ ಮಾವಯ್ಯ

ರವಿಮಾಮ ಬಂದ ಬಾನಲ್ಲಿ

ಸೇರು ಬಾ ನನ್ನ ತೋಳಲ್ಲಿ||

 

ನಾರಿಗೆದ್ದ ಕಳ್ಳ ಕೃಷ್ಣನೆ ಬಾ ಬಳಿಗೆ

ಸೀರೆಕದ್ದ ಮರುಳ ಮಾಧವ ತಾ ಸಲಿಗೆ

ತನುವನ್ನು ಬಳಸಿ ಚುಂಬಿಸೈ

ಮನವನ್ನು ತಣಿಸಿ ಮುದ್ದಿಸೈ||

 

-*ಶ್ರೀ ಈರಪ್ಪ ಬಿಜಲಿ* 

 

ಚಿತ್ರ್