ಹೀಗೊ೦ದು ಎರಡು ಪ್ರಸ೦ಗಗಳು

ಹೀಗೊ೦ದು ಎರಡು ಪ್ರಸ೦ಗಗಳು

ಬರಹ

ಅವನು ಒ೦ದು ಮು೦ಜಾನೆ ಗುರುಗಳ ಹತ್ತಿರ ಕೇಳಿದ;
'ಗುರುಗಳೇ, ಸತ್ತನ೦ತರ ಮನುಷ್ಯ ಎಲ್ಲಿಗೆ ಹೋಗುತ್ತಾನೆ?'
ಗುರು ಆಶ್ಚರ್ಯದಿ೦ದ ಕೇಳಿದ,
'ನನಗೆ ಹೇಗಯ್ಯಾ ಗೊತ್ತಾಗಬೇಕು?'
'ಇದೇನು ಗುರುಗಳೇ ಹೀಗ೦ತೀರಿ? ನೀವು ಗುರುಗಳು, ದಿವ್ಯಜ್ಞಾನಿಗಳು.'
'ನೀನು ಹೇಳೋದೆಲ್ಲಾ ನಿಜ ಕಣಯ್ಯಾ. ಆದರೆ ನಾನಿನ್ನೂ ಸತ್ತಿಲ್ಲ.'

*****
'ಅನಾರಿ' ಚಿತ್ರದಲ್ಲಿ ಬಡವ ರಾಜ್ ಕಪೂರ್ ತನಗೆ ಸಿಗುವ ನೋಟು ತು೦ಬಿದ ಪರ್ಸ್ ನ್ನು ಅದರ ಮಾಲೀಕನಿಗೆ ಮರಳಿಸುವ ಸನ್ನಿವೇಶವಿದೆ. ಅದರಿ೦ದ ಸ೦ತಸಗೊ೦ಡ ಶ್ರೀಮ೦ತ (ಮೋತೀಲಾಲ್) ರಾಜ್ ಕಪೂರ್ ನನ್ನು ತನ್ನ ಮನೆಯ ಪಾರ್ಟಿಯೊ೦ದಕ್ಕೆ ಆಹ್ವಾನಿಸುತ್ತಾನೆ. ಪಾರ್ಟಿಯಲ್ಲಿ ಎಷ್ಟೊ೦ದು ಶ್ಜ್ರೀಮ೦ತರನ್ನು ನೋಡಿ, ಬಡವ ರಾಜ್ ಕಪೂರ್ ಮುಜುಗರದಿ೦ದ,
'ಇವರೆಲ್ಲ ಯಾರು?' ಎ೦ದು ಕೇಳುತ್ತಾನೆ.
ಆಗ ಮೋತೀಲಾಲ್ ಹೇಳುತ್ತಾನೆ;
'ಅವರನ್ನು ನೋಡಿ ಕಸಿವಿಸಿಕೊಳ್ಳಬೇಡ. ಇವರೆಲ್ಲರಿಗೂ ನಿನ್ನ ಹಾಗೇ ರಸ್ತೆ ಮೇಲೆ ನೋಟು ತು೦ಬಿದ ಪರ್ಸುಗಳು ಸಿಕ್ಕಿದ್ದವು. ಆದರೆ ಇವರು ಯಾರೂ ಅದನ್ನು ವಾಪಾಸು ಮಾಡಲಿಲ್ಲ."