ಹೀರೇಕಾಯಿ ದೋಸೆ
ಬೇಕಿರುವ ಸಾಮಗ್ರಿ
ಹೀರೇಕಾಯಿ - ಸಣ್ಣ ಗಾತ್ರದ್ದು, ಅಕ್ಕಿ ೨ ಕಪ್, ಉದ್ದಿನ ಬೇಳೆ - ೨ ಚಮಚ, ಕಡಲೆಬೇಳೆ ೨ ಚಮಚ, ಮೆಂತ್ಯೆ ಅರ್ಧ ಚಮಚ, ಒಣ ಮೆಣಸು ೬, ಜೀರಿಗೆ ಅರ್ಧ ಚಮಚ, ಕೊತ್ತಂಬರಿ ೨ ಚಮಚ, ಬೆಲ್ಲ ೨ ಚಮಚ, ಹುಣಸೆ ರಸ ೫ ಚಮಚ, ರುಚಿಗೆ ತಕ್ಕಷ್ಟು ಉಪ್ಪು. ಎಣ್ಣೆ, ಬೆಣ್ಣೆ
ತಯಾರಿಸುವ ವಿಧಾನ
ಅಕ್ಕಿ, ಉದ್ದಿನ ಬೇಳೆ, ಕಡಲೆಬೇಳೆ, ಮೆಂತ್ಯೆ ಇವುಗಳನ್ನು ೫ ಗಂಟೆಗಳ ಕಾಲ ನೆನೆಸಿ, ನಂತರ ಅದಕ್ಕೆ ಒಣ ಮೆಣಸು, ಜೀರಿಗೆ, ಕೊತ್ತಂಬರಿ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ. ನಂತರ ಅದಕ್ಕೆ ಬೆಲ್ಲದ ಹುಡಿ, ಉಪ್ಪು, ಹುಣಸೇ ರಸ ಸೇರಿಸಿ.
ಹೀರೇಕಾಯಿ ಸಿಪ್ಪೆ ತೆಗೆದು ತೆಳುವಾಗಿ ಕತ್ತರಿಸಿ. ಹೀರೇಕಾಯಿ ತುಂಡುಗಳನ್ನು ಈ ದೋಸೆ ಹಿಟ್ಟಿನಲ್ಲಿ ಅದ್ದಿ ಕಾದ ಕಾವಲಿಗೆ ಎಣ್ಣೆ ಹಚ್ಚಿ ಒಂದರ ಪಕ್ಕ ಒಂದು ಜೋಡಿಸಿ ಮುಚ್ಚಳ ಮುಚ್ಚಿ ಬೇಯಿಸಿ. ( ಕಡಿಮೆ ಉರಿಯಲ್ಲಿ ಬೇಯಿಸಿ) ಸ್ವಲ್ಪ ಸಮಯದ ನಂತರ ತಿರುವಿ ಹಾಕಿ ಎಣ್ಣೆ ಹಚ್ಚಿ ರೋಸ್ಟ್ ಮಾಡಿ. ಬಿಸಿ ಬಿಸಿ ಹೀರೇಕಾಯಿ ದೋಸೆ ಬೆಣ್ಣೆ ಜೊತೆ ತಿನ್ನಲೂ ಸೂಪರ್ ಆಗಿರುತ್ತದೆ.
-ಶೃತಿ ಗದ್ದೇಗಲ್