ಹುಡುಗಿಯರ ಹಾಡುಗಳ ಪಾಡು
ನಾನು ಸುತಾರಾಂ ಆ ಸಿನಿಮಾ ನೋಡಬೇಕು ಅನ್ಕಂಡಿರ್ಲಿಲ್ಲ. ಆದ್ರೆ ಆಕಸ್ಮಾತ್ ಹೋದೆ. ಅಲ್ಲೀಯವರಿಗೆ ಆ ಸಿನಿಮಾ ಒಂದು ಹಾಡು ಕೇಳಿರ್ಲಿಲ್ಲ. ಸಿನಿಮಾದಲ್ಲಿ ಒಂದೊಂದು ಹಾಡು ಬರ್ತಿದ್ದಂಗೆ ಇಷ್ಟು ಚೆನ್ನಾಗಿರುವ ಹಾಡುಗಳು ( ಹುಡುಗಿಯರ :) ) ಯಾಕೆ ಹಿಟ್ ಆಗಿಲ್ಲ ?ಅನ್ಕಂಡೆ. ಆಮೇಲೆ ಇವೆಲ್ಲಾ ಹುಡುಗಿಯರ ಹಾಡು ಆಗಿದ್ರಿಂದ ಹಾಗಾಗಿರಬಹುದು ಅನಿಸ್ತು.
ತಂದ ನಾನನಾ ನಾನಾ ತಂದನಾನನಾ..........
"ಬೆಚ್ಚನೆ ಭಾವ ಮೂಡಿಸುತಿರುವ... ಮನಸಿನ ಆಸೆ ಕೇಳುವೆಯೇನು...?" ಅಂತ ದೇವರಿಗೆ ಕೇಳ್ತಿರ್ತಾರೆ.
"ಎಲ್ಲಾರು ಜಾತ್ರೆಯಲ್ಲಿ ತೇರನ್ನೆ ನೋಡೋವಾಗ, ಅವನು ನನ್ನೇ ನೋಡಬೇಕು" ಅಂತ ಹುಡುಗಿಯರಿಗಿರುವ ಪೊಸೆಸ್ಸಿವ್ ಸೂಚಿಸುತ್ತೆ.
"ಯಾಕೋ ಬೇಜಾರಾದಾಗ ಸುಮ್ಮನಿರಬೇಕು" "ಎಲ್ಲೋ ಮರೆತ ಹಾಡನ್ನು ಹೆಕ್ಕಿ ತರಬೇಕು" ಅಂತ ಹುಡುಗಿಯರ ಮನದಿಂಗಿತ ಅರಿಯುವ ಪ್ರಯತ್ನ
"ನಾನು ಈಗ ಪ್ರೀತಿಯಲ್ಲಿ ಬೀಳಬೇಕು,.. ನನಗೂ ಒಬ್ಬ ಗೆಳೆಯ ಬೇಕು..."
ಮತ್ತೊಂದು ಅದ್ಭುತ ಹಾಡು....,
"ಮಳೆ ಬರುವ ಹಾಗಿದೆ... ಮನವೀಗ ಹಾಡಿದೆ...ಹ್ರುದಯದಲ್ಲಿ ಕೂತು ನೀನು ನನ್ನ ಕೇಳಬೇಕಿದೆ..."
"ಎದೆಯ ಬಾಗಿಲಲ್ಲಿ ನಿನ್ನ ಸುಳಿವು....."
"ಮರೆತ ಹಾಗೆ ಚೂರು ನಟಿಸಿ...., ನಿನ್ನ ಕಾಣಬೇಕಿದೆ..."
ಮುಂಗಾರುಮಳೆಯಲ್ಲಿದ್ದ ಹುಡುಗರು ಹಾಡುಗಳನ್ನ "ಹುಡುಗ"ರೆಲ್ಲ ಸೇರಿ "ಹಿಟ್" ಆಗಿಸಿದೆವು
ಯಾಕೆ.. ಹುಡುಗಿಯರಿಗೆ ಅವರ ಹಾಡುಗಳು ಇಶ್ಠ ಆಗೋಲ್ಲವೇ...? "ಮೊಗ್ಗಿನ ಮನಸು"ಲ್ಲಿರುವ ಇಶ್ಟು ಸವಿಯಾದ ಹಾಡುಗಳು ಯಾಕೆ ಯಾರೂ(ಹುಡುಗಿಯರು) ಗುನುಗುನಿಸುತ್ತಿಲ್ಲ....?
Comments
ಉ: ಹುಡುಗಿಯರ ಹಾಡುಗಳ ಪಾಡು
In reply to ಉ: ಹುಡುಗಿಯರ ಹಾಡುಗಳ ಪಾಡು by vikashegde
ಉ: ಹುಡುಗಿಯರ ಹಾಡುಗಳ ಪಾಡು
ಉ: ಹುಡುಗಿಯರ ಹಾಡುಗಳ ಪಾಡು