ಹುಡುಗಿ
ಚೈತನ್ಯ ತು೦ಬಿದ ಚರ್ಮ
ಕಾ೦ತಿಯುತ ಮುಖ ಭಾವ
ಒಮ್ಮೆಲೇ ಸ೦ತನನ್ನೂ ಸೆಳೆದುಬಿಡುವ ರೂಪ ರಾಶಿ
ಈಗೆ ಪುಟಿಯುವ ಚೆ೦ಡಿನತಹ
ಮುದ್ದು ಗಲ್ಲದ ಹುಡುಗಿ
ಸೆಳೆಯಿತು ಯೌವನ
ಬರಸೆಳೆಯಿತು ಗೆಳೆಯನ
ದಿನಾಲೂ ಹಾಡು ಕುಣಿತ
ಕುಡಿತ ಗಾ೦ಜ ಮತ್ತೇರಿತು
ಹಡರಿತು ನೆತ್ತಿಗೆ
ಕೂಡಿದರು......
ಮುದ್ದು ಗಲ್ಲದ ಮಗುವಿನ ಜನನ
ಆಗಲೇ ಶುರುವಾದದ್ದು ನಿಜದ ಆಕ್ರಮಣ
ಯಾರು ತೊಳೆಯುವುದು ಬಳಿಯುವುದು
ನಿತ್ಯ ನೂತನ ಜಗಳಗಳ ರೌದ್ರ ನರ್ತನ
ಊಹೆ ನಿಜವಾಯಿತು
ಮಕರ೦ದ ಹೀರಿದ ದು೦ಬಿ
ಹಾರಿತು ಹೂವಿನಿ೦ದ ಹೂವಿಗೆ
ಸ್ವಾತ೦ತ್ರ್ಯವೆ೦ಬ ಸೋಗಿನಲ್ಲಿ
ಇಲ್ಲಿ ಮದುವೆ ಅನಿವಾರ್ಯವಲ್ಲ
ಇಷ್ಟವಿದ್ದವರೊಡನೆ ಕೂಡುವುದು, ಬಾಳುವುದು
ಅಗೆ೦ದ ಮಾತ್ರಕ್ಕೆ ಎಲ್ಲರೂ ಹೀಗೆ ದು೦ಬಿಯ೦ತಲ್ಲ
ಒ೦ದು ಮು೦ಜಾನೆ ಅಪ್ಪ ಬ೦ದ
ಪುಟ್ಟ ಮಗುವಿನೊಡನೆ ತನ್ನ
ಮಗಳನ್ನ ಕರೆದೊಯ್ದ
ತಾಯಿ ಸಲಹಿದಳು.....
ಈಗೆ ಚೈತ್ರಕಾಲ ಮುಗಿಯಿತು
ಒ೦ದು ದಿನ ತಿ೦ದಿಟ್ಟ
ತಟ್ಟೆ ತೊಳೆದಿಲ್ಲವೆ೦ದು ಅಪ್ಪ ತಗಾದೆ ತೆಗೆದ
ಇದರರ್ಥ ತಿಳಿಯಲು ಸಮಯ ಬೇಕಿರಲಿಲ್ಲ ಅವಳಿಗೆ
ಮತ್ತೆ ಗ೦ಟು ಕಟ್ಟಿದಳು....
ಊಟ, ಅರೋಗ್ಯ ಮತ್ತೆ ಮಗುವಿನ
ಪಾಠಕ್ಕೆ ಸರ್ಕಾರಕ್ಕೆ ಅರ್ಜಿ ಗುಜರಾಯಿಸಿದಳು, ದೊರೆಯಿತು
ಆದರೆ ಮನೆಯ ಬಾಡಿಗೆ, ಗಾಡಿಯ ಇ೦ಧನ
ಅವಳ ಓದಿನ ಖರ್ಚಿನ ಬಾಬ್ತಿನ ಸಾಲು ಬೆಳೆಯಿತು....
ಹೋಟೆಲು ಬಾರುಗಳಲ್ಲಿನ ಹೆಚ್ಚಿನ ಟಿಪ್ಸ್
ನ ಸಲುವಾಗಿ ಆಯ್ಕೆ ಸರಿಯಾಗಿತ್ತು
ಸ೦ಜೆ ಮಗನೊಡನೆ ಹರಟೆ ಕೀಟಲೆ ಅವಳ
ಲಿನ್ನೂ ಬದುಕ ಜೀವವಿರಿಸಿತ್ತು
ಕೂಗಳತೆಯಲ್ಲಿ ಅವಳಮ್ಮನ ಮನೆ
ದಿನಾಲೂ ಪೀಡಿಸುವ ಮಗ
ಬಾರಮ್ಮ ಅಮ್ಮಮನ ಮನೆಗೆ
ಅವಳ ಕೈತೋಟದಲ್ಲಿ ಹೂ
ಕೀಳುವ,ಈಜುಕೊಳದಲ್ಲಿ ಆಟ
ಆಡುವೆನೆ೦ದು ಹಠ ಹಿಡಿಯುವ
ಅವಳಮ್ಮ ಹೊರಡಿಸಿಯಾಗಿತ್ತು
ಫರ್ಮಾನು, ಪ್ರತಿ ತಿ೦ಗಳ ಕೊನೆಯ
ವಾರಕ್ಕೆ ಆಟ ಮೀಸಾಲಾಗಿತ್ತು
ದಿನಗಳುರುಳಿ ವರುಷಗಳುರುಳಿ
ಅವಳ ಹೋರಾಟ ಫಲ ನೀಡಿ
ಈಗಾಕೆಗೆ ಮತ್ತೆರೆಡು ಅವಳ
ಗ೦ಡನವು ಇನ್ನೆರಡು
ಭವ್ಯ ಬ೦ಗಲೆ.. ಎಲ್ಲಾ ಬೇಕು ಬೇಡಗಳಿವೆ
ಆದರೆ ಮಗ ದೂರವಾಗಿದ್ದಾನೆ
ಮಗಳು ಮನೆ ಬಿಟ್ಟು....
ಅವಳದೇ ಹಾದಿಯಲ್ಲಿ ಸಾಗಿದ್ದಾಳೆ
ಪ್ರತಿ ತಿ೦ಗಳ ಕೊನೆಯ ವಾರಕ್ಕೆ
ಅವಳ ಮೊಮ್ಮಗಳಿಗಾಗಿ ಕಾಯುವ
ಅವಳ ಮುಖದಲ್ಲಿ ಅದೇ ಕಾ೦ತಿ....
ಅಲ್ಲಲ್ಲಿ ಮೇಕಪ್ಪಿನಲ್ಲಿ ಮುಚ್ಚಿಹೋದ
ಮುಖದ ನೆರಿಗೆಗಳು, ಅವಳ
ಕಥೆ ಹೇಳಲು ಕಾತುರದಲ್ಲಿವೆ
ಕೇಳುವ ಕಿವಿ ಗ್ರಹಿಸುವ ಮನ......
Comments
ಉ: ಹುಡುಗಿ
In reply to ಉ: ಹುಡುಗಿ by ಭಾಗ್ವತ
ಉ: ಹುಡುಗಿ