*ಹುಣಸೆ ಹಣ್ಣು*( ಕುಸುಮ ಷಟ್ಪದಿ)

*ಹುಣಸೆ ಹಣ್ಣು*( ಕುಸುಮ ಷಟ್ಪದಿ)

ಕವನ

ಹುಣಸೆಯಾ ಹಣ್ಣಿಂದು

ತಣಿಸುತ್ತ ಮೈಮನವ

ಕುಣಿಸುತ್ತ ರುಚಿಯಲ್ಲಿ ನಾಲಿಗೆಯನು||

ಹಣಕೊಟ್ಟು ತಾರದೆಯೆ

ಚಣದಲ್ಲಿ ಮರದಿಂದ

ಮನದಲ್ಲಿ ಮುದವೆನಿಸಿ ತಿನ್ನುತಿಹೆನು||

 

ಓರಿಗೆಯ ಗೆಳೆಯರದು

ಜೀರಿಗೆಯ ತಂದಿಹರು

ಮೀರಿಸಿದ ರುಚಿಯಿಂದು ಬೆಲ್ಲಬೆರೆಸಿ||

ಕೋರುತಲಿ ಬಳಿಯಲ್ಲಿ

ಸೇರಿದರು ಮನೆಯಲ್ಲಿ

ಚೂರನ್ನು ತಂದಿಹನು ಕಿಸೆಯಲ್ಲಿಯೆ||

 

ಮಬ್ಬುಗತ್ತಲಿನಲ್ಲಿ

ರುಬ್ಬಿದರು ಬೆಲ್ಲದಲಿ

ಕಬ್ಬು ಗಾಣದಲಿ ನುಜ್ಜಾಗುವಂತೆ||

ಸುಬ್ಬುವಿನ ತಂತ್ರವಿದು

ರುಬ್ಬಿದರು ಕಲ್ಲಿನಲಿ

ನಿಬ್ಬೆರಗಿನಲ್ಲಿ ಚಪಲದೊಳು ತಾವು||

 

ಹಳಸದಾ ಹಣ್ಣಾಗಿ

ಬೆಳೆಸಿರುವೆ ಮರವನ್ನು

ನಳನಳಿಸಿ ಕಾಯನ್ನು ಕುದಿಸುತ್ತಲಿ||

ಸೆಳೆಯುತ್ತ ನಾಲಿಗೆಯು

ಬಳಿಯಲ್ಲಿ ನನ್ನನ್ನು

ಚಳಿಗಾಲ ವೇಳೆಯಲಿ ಬಾಯರುಚಿಗೆ||

 

ನೋಡಿದಳು ಹಣ್ಣನ್ನು

ಬೇಡಿದಳು ಬಸುರಿಯದು

ಕಾಡಿದಳು ದಿನಪೂರ್ತಿ ಕೊಡಿಸಲಲ್ಲಿ||

ಮೋಡಿಯನು ಮಾಡುತಿದೆ

ಬಾಡದೆಯೆ ಮನೆಯಲ್ಲಿ

ನೀಡಿದೆನು ತೋಷದಲಿ ಹುಳಿಹುಣಸೆಯ||

 

-*ಶಂಕರಾನಂದ ಹೆಬ್ಬಾಳ* 

 

ಚಿತ್ರ್