ಹೂದೋಟ

ಹೂದೋಟ

ಕವನ

ಸುಮಗಳು ನಗುತಿರಲು ಹೊಂಬಣ್ಣದಿ

ಮನವು ಬದಿಗೊತ್ತಿದೆ ಬೇಗುದಿ

ಹಲವು ಬಣ್ಣದ ರಂಗ ರೂಪಗಳು

ಬಿಡದೇ ಸೆಳೆದಿವೆ ಹೃದಯ ಕಂಗಳು.

 

ಕವಿ ಹೃದಯ ಕಾಣುವುದು ಸಗ್ಗದ ದಾರಿ

ಎಲೆಯ ಮರೆಯ ಹೂವನು ಹಾರಿ

ಹಸಿರೇ ಮಲಗಿದೆ ಅಚ್ಚನೊತ್ತಿ ಬಾಗಿಲಲಿ

ಮನ್ಮಥನೂ ನಾಚುವ ಹಸಿರ ಹೊನಲಿನಲಿ.

 

ಪ್ರತಿಯ ಕುಂಡದಿ ಜೀವಕಳೆ

ಹಲವು ಬೆರೆತಿರಲು ಕುಂದದು ಭಾವಕಳೆ

ಹಸಿರೇ ಇಳೆಯ ನಿಜದಿ ಸಂಪತ್ತು

ಅಂಗಳದಿ ಹರಡಿದೆ ಬೆಲೆಬಾಳುವ ಮುತ್ತು.

 

ಮರೆತು ಕುಳಿತೆ ನನ್ನ ನಾನೇ

ಹೊಗಳಿ ಕುಳಿತೆ ಸುಮದ ಕಣ್ಣನೇ

ಅರಳಿ ಮುದುಡುವ ಸುಮಗಳು

ನಮ್ಮಂತೆ ಚಿಂತಿಸದೇ ಕಳೆದಿವೆ ಘಳಿಗೆಗಳು!!

 

-ನಿರಂಜನ ಕೇಶವ ನಾಯಕ, ಶಿಕ್ಷಕ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್