ಹೂವು

ಹೂವು

ಕವನ

ರವಿಯ ರಶ್ಮಿಗೆ ಹೂವು
ತಾನಾಗೆ ಅರಳಿತ್ತು
ಅಂದ ನೋಡಲು ನೊಂದು
ಕಾಂಡಕೆ ಕತ್ತರಿಯ ಮಸೆಯುತಿಹರು
ಹೂವ ಅರಳಿಸಲು ಗಿಡವು
ಪ್ರಾಣ ಬಿಕ್ಷೆಯ ಬೇಡಲು
ಹೂವ ಕೊಂಬೆಯ ಮುರಿವೆ
ಜೀವ ಉಳಿಸಲು ಸರಿಯೇ ಎಂದು ಕೇಳುವರು
ರವಿಯ ನಗುವಲೆ ಬದುಕಿ ಸಾಯ್ವೆ
ತನ್ನ ಪಾಡಿಗೆ ಬಿಡೆಂದು ಮೊರೆಯಿಡಲು
ಬುಡವ ಕಿತ್ತೊಗೆವೆವು ಬದುಕೆನ್ನುವರು
ನೆಟ್ಟು ನೀರು ಹಾಕಿದವರೆಂದು
ರವಿಗೋ ,ದೇವರಿಗೋ ಅರ್ಪಿಸಲೋಲ್ಲೆಂದು
ಯಾರದೋ ಅಪರಿಚಿತ ಮುಡಿಗೆ ಮಾರುತಿಹರು
ಇತ್ತ ರವಿಯ ನಗುವಿಗೂ ಅಲ್ಲ
ಇತ್ತ ದೇವರ ಪಾದಕು ಸಲ್ಲ
ಅಂದದ ಹೂವು ಸೆರೆಯೊಳಗೆ ಮರುಗುತಿಹುದು .
                                   ಬೋ .ಕು .ವಿ

ಚಿತ್ರ್