ಹೃದಯಾಂತರಾಳದಲಿ ನಿನ್ನುಸಿರ ತಂಗಾಳಿ...!!!!!

ಹೃದಯಾಂತರಾಳದಲಿ ನಿನ್ನುಸಿರ ತಂಗಾಳಿ...!!!!!

ಕವನ

 

ಹೃದಯಾಂತರಾಳದಲಿ ಒಲವೀಗ ಅರಳಿ..

ಭಾವನೆಗಳಾರ್ಭಟಕೆ ಮನವೀಗ ನರಳಿ..

ನಿನ್ನ ನೋಟವ ಬಯಸಿ ಕಣ್ಣಂಚು ಹೊರಳಿ...

ಮನಸೀಗ  ರಾಡಿಎದ್ದ ತಿಳಿನೀರ ಓಕಳಿ....!!!!

 

ಬಯಸದೇ ನಿನ್ನತ್ತ ನೋಡುವ ಚಾಳಿ..

ಅರೆಘಳಿಗೆ  ಅಕ್ಷಿಯಲಿ  ನಿನ್ನದೇ ಪ್ರಭಾವಳಿ..

ಯೋಚನಾ ಲಹರಿಯಲಿ ನೀ ಎಬ್ಬಿಸಿದ ಹಾವಳಿ..

ಪ್ರತೀ ಶ್ವಾಸದಲೂ ಬೆರೆತಿರುವ ನಿನ್ನುಸಿರ ತಂಗಾಳಿ..!!!!

 

ಶಾಂತತೆಯ ಚಿತ್ತದಲಿ ನೀನೆಬ್ಬಿಸಿದ ಬಿರುಗಾಳಿ...

ನೆಮ್ಮದಿಯ ದಿನಚರಿಗೆ ನೀನಿಟ್ಟೆ ಧಾಳಿ...

ಕಾದಿರುವೆ ನಿನಗಾಗಿ ಆಡಲು ಪ್ರೀತಿಯ ಹೋಳಿ..

ಬಹುದೂರ ಸಾಗಿರುವೆ ನೀ ಬರಬಾರದೆ ಮರಳಿ....!!!!!!!

 

Comments