ಹೃದಯ ವಿಹಂಗಮ

ಹೃದಯ ವಿಹಂಗಮ

ಕವನ

 1 ಪಯಣಿಸು ಬಾ ಎದೆಯೊಳಗೆ ಇದು ಹೃದಯ ವಿಹಂಗಮ

   ಹಂಸ ವಾಹಿನಿಯ ಏರಿ ಬರಲು ನಡೆಯಲಿ ಪ್ರೇಮ ಸಂಗಮ 

   ವೊಳಗಿಹುದು ಹೊಸಲೋಕ ಹೊಸಬೆಳಕು ಹೊಸತು ಸಂಭ್ರಮ

        ನೀನಿದ್ದರೆ ಸಾಕಲ್ಲವೆ ಎದೆಯೊಳಗೆ

    ಹಗಲಲು ಮೂಡಿ ಬರುತಾನೆ ಪ್ರೇಮಚಂದ್ರಮ

 

2 ಹಚ್ಚ ಹಸುರಾಗಿ ನಿಂತು ನೀ ನಗುತಿರಲು

   ವಜ್ರ ತಾರೆಯಂತೆ ನಿನತುಟಿ ಅಂಚು ಮಿನುಗುತಿರಲು 

   ಬಾಡದ ಹೂದೋಟದಂತೆ ನಳನಳಿಸುತಿರಲು ನಿನ್ನ ಕಂಗಳು

       ನೀನಿದ್ದರೆ ಸಾಕಲ್ಲವೆ ನನ್ನ ಮನದೊಳಗೆ

   ಪ್ರೇಮ ಲೋಕದ ಬೆಳದಿಂಗಳು

 

3 ಜಿನುಗುವ ಹನಿಗಳು ಹುಲ್ಲಿನ ಮೇಲೆ ನಿನ್ನ ಪಾದಕಮಲದ ಸ್ಪರ್ಶಕೆ

   ಮುತ್ತಿಕ್ಕಲು ಜೇನುಹುಳುಗಳು ನಿನ್ನ ಸಿಹಿ ಸವಿಯುವ ಹರ್ಷಕೆ

   ನಿನ್ನ ಕೋಮಲ ತ್ವಚೆಯನ್ನು ಸವಿಯಲು ಬಾಗಿದ ಎಲೆಗಳು ನಿನ್ನ ಸನಿಹಕೆ

        ನೀನಿದ್ದರೆ ಸಾಕಲ್ಲವೆ ನನ್ನ ಮನದೊಳಗೆ

   ಎರಡೇ ಹೆಜ್ಜೆ ಸ್ವರ್ಗಕೆ

 

4 ನನ್ನ ವನಸಿರಿಯೆ, ಹೊನ್ನರಸಿಯೇ ಮಂಧಾರ ಪುಷ್ಪವೆ

   ಹೃದಯ ಸಿಂಹಾಸನಕೆ ರಾಣಿಯಾಗಲು ಒಪ್ಪಿಗೆಯೆ?

   ಸಂಜೀವಿನಿಯೆ ಸಮ್ಮೋಹಿನಿಯೇ ನನ್ನ ಬಾಳಿನ ಒಲುಮೆಯೇ

        ನೀನಿದ್ದರೆ ಸಾಕಲ್ಲವೆ ನನ್ನ ಮನದೊಳಗೆ

   ಸಾಕು ನನಗೆ ನಿನ್ನ ಕಣ್ ಸನ್ನೆಯೇ ಚಲುವಿನ ಕಣ್ ಸನ್ನೆಯೇ........

                                                                 ಸಂಜಿ