ಹೆತ್ತವರ ಬಿಟ್ಟಾಯ್ತು...

ಹೆತ್ತವರ ಬಿಟ್ಟಾಯ್ತು...

ಕವನ

 

ಗೆಳೆಯಾ,
ಹೆತ್ತವರ ಬಿಟ್ಟಾಯ್ತು,
ಮುಚ್ಚಿಟ್ಟ ಒಲವನ್ನು
ನಿನ್ನಲ್ಲಿ ಇಟ್ಟಾಯ್ತು,
ಮತ್ತೇನು ತಿಳಿಯದೆ
ಮುತ್ತನ್ನು ಕೊಟ್ಟಾಯ್ತು!
ಇನ್ನೇನು ಹೇಳಲಿ?!
ಬಾಳಾಯ್ತು ಕೇಲಿ;
ತರಲಿಕ್ಕೆ ತಡವೇಕೆ
ಬೆರಳೀಗೆ ಉಂಗುರಾ,
ಕೊರಳೀಗೆ ತಾಳಿ;
ನಾ ನಿನಗೆ ಸರಿಯೆಂದು
ತೋರಿಸುವೆ ಬಾಳಿ
-ಮಾಲು