ಹೆಮ್ಮೆಯ ಪುತ್ರರು

ಹೆಮ್ಮೆಯ ಪುತ್ರರು

ಕವನ

ಕನ್ನಡ ನಾಡಿನ ಹೆಮ್ಮೆಯ ಪುತ್ರರು

ನಾಡಿನ ಸಂಸ್ಕೃತಿ ಸಂಪ್ರದಾಯ ಆಚರಿಸುವರು

ಹಲವಾರು ಭಾಷೆ ಮಾತನಾಡುವರು

ಕನ್ನಡಮ್ಮನ ದೇವಾಲಯ ಮನದಲ್ಲಿ ಕಟ್ಟಿದವರು

 

ನಾಡಿನ ಭವ್ಯತೆಯ ಬಗ್ಗೆ ಸಾರಿದವರು

ನುಡಿ ಕನ್ನಡ ನಡೆ ಕನ್ನಡವ ಹೊನ್ನುಡಿಗಾರರು

ಕನ್ನಡ ತಾಯಿಗೆ ನಮನ ಸಲ್ಲಿಸಿದವರು

ಕನ್ನಡ ಬಾವುಟ ಹಾರಿಸಿ ಮೆರೆದ ಚೆನ್ನುಡಿಗಾರರು

 

ಹೆತ್ತ ತಾಯಿಗಿಂತ ಹೊತ್ತ ನಾಡೆ ಶ್ರೇಷ್ಠವೆಂದರು

ತಾಯಿಯ ಮಡಿಲಲ್ಲಿ ತೂಗಿ ನಂದಾದೀಪವಾದರು

ಕನ್ನಡಿಗರ ಮನಸಲ್ಲಿ ಹಚ್ಚೆಯಾಕಿಸಿದರು

ನಕ್ಷತ್ರಗಳಂತೆ ಮಿನುಗಿ ದೃವತಾರೆಯಾದವರು

 

ಕಟ್ಟಿರುವ ಮನೆಗಳು ದೂರ ದೂರಿದ್ದರು

ಮನಸಿನಲ್ಲಿ ಅಣ್ಣ ತಮ್ಮಂದಿರೆಂದು ಹಾಡಿದರು

ನಾವೆಲ್ಲ ಒಂದೇ ಎಂದು ತಿಳಿ ಹೇಳಿದರು

ಸೌಹಾರ್ದತೆ ಭಾವೈಕ್ಯತೆಯಿಂದ ಕುಣಿದಾಡಿದರು.

-ಚಂದ್ರಶೇಖರ ಶ್ರೀನಿವಾಸಪುರ, ಕೋಲಾರ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್