ಹೆಸರು

ಹೆಸರು

ಬರಹ

ಹೆಸರು:
ಹೆಸರೆಂದರೆ ಒಂದು ವ್ಯಕ್ತಿ, ಸ್ಥಳ, ವಸ್ತುವನ್ನು ಗುಱುತಿಸಲು ಮನುಷ್ಯ ಮಾತು ಕಲಿತಂದೇ ಮಾಡಿದ ಮೊದಲ ಕೆಲಸವೇನೋ. ಹೆಸರಿಡುವುದಱಿಂದ ಅನುಕೂಲ ಹೆಚ್ಚಿರಬಹುದು. ಈಗ ಕನ್ನಡಕಂದರನ್ನೆ ತೆಗೆದುಕೊಳ್ಳಿ. ಇವರು ಕಪ್ಪಗೆ, ಐದಡಿಯ ಆಸಾಮಿ ಎಂದರೆ ಜನರ ಮನಸ್ಸಿಗೆ ಯಾರುಯಾರೋ ಮನಸ್ಸಿಗೆ ಬರಬಹುದು. ಆದರೆ ಕನ್ನಡಕಂದ ಎಂದ ತಕ್ಷಣ ಇವನಾ ಎಂಬ ಚಿತ್ರ ಮನಸ್ಸಿನ ಮುಂದೆ ಬಂದು ನಿಲ್ಲುತ್ತದೆ. ಈ ಕಾರಣಕ್ಕೇ ಜನ ವ್ಯಕ್ತಿ, ಊರು, ಸ್ಥಳಗಳಿಗೆ ಹೆಸರಿಡಲು ತೊಡಗಿದರೇನೋ?

ಹೆಸರಿಡುವುದಱಿಂದ ಅನುಕೂಲವೂ ಇದ್ದಂತೆ ಅನನುಕೂಲವೂ ಇದೆ. ಹೆಸರಿಡುವುದಱಿಂದ ಒಂದು ಗುಱುತುಂಟಾಗಿ ಮೂರ್ತಿಗಳು ವಿಗ್ರಹಗಳು ಸೃಷ್ಟಿಗೊಂಡು ಆ ಮೂರ್ತಿಗಳೇ ತಮ್ಮತಮ್ಮಲ್ಲಿ ಜಗಳಾಡಿಕೊಳ್ಳಲು ಶುರು ಮಾಡುತ್ತವೆ. ಈಗ ನೋಡಿ ಶಂಕರರ ವಿಚಾರ, ರಾಮಾನುಜರ ವಿಚಾರ, ಮಧ್ವರ ಹಾಗೂ ಬಸವಣ್ಣನವರ ವಿಚಾರ ಈ ಭೇದಗಳೆ ಮತಗಳಾಗಿ ಪಂಗಡಗಳಾಗಿ ಬಿಟ್ಟವು. ಭಾಷೆಗಳಿಗೆ ಹೆಸರಿಡಲು ಪ್ರಾರಂಭಿಸಿದ ಕೂಡಲೆ ತೆನ್ನುಡಿಗಳು ತಮಿೞ್, ಕನ್ನಡ, ತೆಲುಗು ಮತ್ತು ಮಲಯಾಳಂಗಳಾಗಿ ಇವರೆಲ್ಲಾ ನಾನು ಹೞಬ. ನಾನು ಸ್ವಚ್ಛ ಇತ್ಯಾದಿ ಜಗಳಗಳಿಗೆ ನಾಂದಿಯಾಯ್ತು. ಹೆಸರಿಡದಿದ್ದಾಗ ಈ ಗೋಜಲುಗಳಿರಲಿಲ್ಲವೇನೋ?

ಹಾಗಾದರೆ ಈ ವಿಗ್ರಹಗಳನ್ನೆಲ್ಲ ಸಮಾಜದ ಒಳಿತಿಗಾಗಿ ಭಂಜಿಸುವರಾರು? ನಾವು ನೀವಲ್ಲದೆ ಮತ್ತಿನ್ನಾರು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet