ಹೊಗಳಿಕೆ

ಹೊಗಳಿಕೆ

ಕವನ

ನನ್ನ ನೀ ಹೊಗಳು

ನಿನ್ನ ನಾ ಹೊಗಳುವೆ

ಇಷ್ಟೇ ನಮ್ಮ ಬರಹದ ಬದುಕು

ಮುಂದೆ ಕನಸಲ್ಲೇ

ನಾವು ಕುವೆಂಪು ದ ರಾ ಬೇಂದ್ರೆ !

 

ನೀ ಬರೆದಿರುವುದ

ನಾ ವಿಮರ್ಶಿಸುವೆ

ನಾ ಬರೆದಿರುವುದ ನೀ ವಿಮರ್ಶಿಸು

ಮುಂದೆ ಕನಸಲ್ಲೇ

ನಾವು ಖ್ಯಾತ ವಿಮರ್ಶಕರು !

 

ನನಗೆ ನೀ ಗುರುವಾಗು

ನಿನಗೆ ನಾ ಗುರುವಾಗುವೆ

ಗರ್ವದಲೇ ಹೀಗೇ ತಿರುಗುವ

ಮುಂದೆ ಕನಸಲ್ಲೇ 

ನಾವು ಮಹಾನ್ ಗುರುಗಳು !

 

ನನಗೆ ನಾನೇ ಷಟ್ಪದಿ ರಾಜ

ನಿನಗೆ ನೀನೇ ಛಂದಸ್ಸು ರೋಜಾ

ಉಳಿದವರೆಲ್ಲಾ ಲಟಾರಿಗಳು

ಮುಂದೆ ಕನಸಲ್ಲೇ

ನಾವು ಪಂಪ ಮಹಾರನ್ನರು !

 

ನಾನೇ ಇಂದು ವ್ಯಾಕರಣ ಪಂಡಿತ

ನೀನೇ ಇಂದು ಉದ್ಧಾರ ಪರಿಣಿತ

ಬರೆಯಲು ಬಾರದಿದ್ದರೂ ಕವಿಕುಲ ತಿಲಕ

ಮುಂದೆ ಕನಸಲ್ಲೇ

ಕವಿ ಸಾಹಿತಿ ಲೇಖಕರು !

 

ಬರೆದಷ್ಟು ಮುಗಿಯದು

ನಮ್ಮೀ ಸುವಿಚಾರಗಳು

ಬದಲಾವಣೆ ಇಹುದೇ ನಮ್ಮ ನಿಮ್ಮೊಳು

ಮುಂದೆ ಕನಸಲ್ಲೇ

ನಾವೆಲ್ಲ ಒಂದೇ ಕವಿವರ್ಯರು !

 

-ಹಾ ಮ ಸತೀಶ ಬೆಂಗಳೂರು

ಚಿತ್ರ್