"ಹೊಸಕಾಲದ ವೈರುಧ್ಯಗಳು" ವಿಚಾರಯಾತ್ರೆ ಹಾಗೂ ಸ್ವಾಮಿ ವಿವೇಕಾನಂದ ಕಾವ್ಯನಮನ

"ಹೊಸಕಾಲದ ವೈರುಧ್ಯಗಳು" ವಿಚಾರಯಾತ್ರೆ ಹಾಗೂ ಸ್ವಾಮಿ ವಿವೇಕಾನಂದ ಕಾವ್ಯನಮನ

ಹಿನ್ನಲೆ -

ಮಾನವ ಬದುಕಿನ ಮುಲ್ಯಗಳ ಬದಲಾವಣೆಯಲ್ಲಿ, ಜೀವನದ ಪರಿಕಲ್ಪನೆಯಲ್ಲಾದ ವ್ಯತ್ಯಾಸದಲ್ಲಿ ಕಾಲದ ಬದಲಾವಣೆಯನ್ನು ಗುರುತಿಸಬೆಕಲ್ಲದೆ ಬೇರೆ ಹಾದಿ ಇಲ್ಲ.ಎಲ್ಲಾ ಕಾಲದಲ್ಲೂ ಮನುಷ್ಯನ ಮನಸ್ಸು ಹಳತನ್ನು ಅನುಮಾನಿಸುತ್ತಾ, ಹೊಸದನ್ನು ಅನ್ವೇಷಿಸುತ್ತಾ ಸಾಗುತ್ತದೆ. ವಿಶ್ವದ ಮಾಹಿತಿಗೆ, ಚಿಂತನೆಗೆ ತೆರೆದುಕೊಂಡಿರುವ ನಮಗೆ ಅವೆಲ್ಲವನ್ನೂ ಅಪ್ಪಿಕೊಳ್ಳುವ ಉತ್ಸಾಹವಿದ್ದರೂ ಪರಂಪರೆಯಿಂದ ನಮ್ಮದಲ್ಲದ ಸಂಗತಿಯಲ್ಲಿ ಅನನ್ಯತೆ ದಕ್ಕುವುದಿಲ್ಲ. ಆಕಾಶವನ್ನು ಅಂಗೈಯಲ್ಲಿ ಹಿಡಿದಂತಾಗುತ್ತದೆ. ಬದುಕಿನ ಅನುಕೂಲಕ್ಕೆ, ಕುತೊಹಲಕ್ಕೆ ವಿಜ್ಞಾನವನ್ನು ತಂತ್ರಜ್ಞಾನವನ್ನು ನೆಚ್ಚಿಕೊಂಡರೂ ಬಾಳಿನ ಮೌಲ್ಯವರ್ಧನೆಗೆ ಜೀವಸಂವೇದನೆಯನ್ನೂ ಭಾವ ವಿಕಾಸವನ್ನೂ ಅವಲಂಬಿಸುವುದು ಅನಿವಾರ್ಯ. ವಿಜ್ಞಾನದಂತೆ, ಗಣಿತದಂತೆ, ಭಾಷೆಯ ತರ್ಕದಂತೆ ಭಾವಾಭಿವ್ಯಕ್ತಿ ಸರಳವಲ್ಲ. ಸಂಕೀರ್ಣವಾದ ಮನಸ್ಸಿಗೆ ಅಂತರಂಗ ಬಹಿರಂಗಗಳನ್ನು ಒಂದಾಗಿಸಿಕೊಳ್ಳುವುದು ಯಾವಾಗಲೂ ಕಷ್ಟ. ಈ ಕಾಲಕ್ಕೆ ಆ ಕಷ್ಟ ಹೆಚ್ಚಾಗಿದೆ. ಆ ವೈರುದ್ಯಗಲೇ ನಮ್ಮೆದುರಿನ ಸವಾಲುಗಳೂ ಆಗಿವೆ. 

 

ಕಾರ್ಯಕ್ರಮದ ವಿವರ: 

ಸ್ಫಳ : ಬಿ ಎಮ್ ಎಸ್ ಇಂಜಿನಿಯರಿಂಗ್ ಕಾಲೇಜ್ ಆಡಿಟೋರಿಯಮ್ ಬಸವನಗುಡಿ ರಸ್ತೆ ಬೆಂಗಳೂರು

ದಿನಾಂಕ: 1 ಸೆಪ್ಟೆಂಬರ್ 2013, ಬಾನುವಾರ

ಸಮಯ : ಬೆಳಿಗ್ಗೆ 9.30 ರಿಂದ್ ಮಧ್ಯಾಹ್ನ 1.00

ನೋಂದಣಿ, ಪಾನೀಯ: ೯.೩೦ - ೧೦.೦೦
ಉದ್ಘಾಟನೆ: ೧೦.೦೦ - ೧೦.೩೦ ಡಾ|| ಹರೀಶ್ ಹಂಡೆ ಅವರಿಂದ, ಮ್ಯಾಗ್ಸಸೆ ಪುರಸ್ಕೃತ ತಂತ್ರಜ್ಞರು 

ಭಿನ್ನಜಾಡಿನ ಯಾತ್ರಿಕರೊಂದಿಗೆ ಪರಿಸಂವಾದ - ೧೦.೩೦ - ೧೧.೪೫ 
- ಡಾ|| ಪ್ರಡೀಪ್ ಸಿ. ಆರ್., ಗಣಿತಜ್ಞ ಮತ್ತು ಕೃಷಿಕ 
- ಶ್ರೀಮತಿ ಗೀತ ಅರವಿಂದ್, ಅನುಭವ ಸೈನ್ಸ್ ಸೆಂಟರ್ 
- ಶ್ರೀ ಮುರಳಿ ಹೆಚ್.ಆರ್., ನಮ್ಮ ಸೈಕಲ್ 
- ಶ್ರೀ ವಾಸುದೇವ್ ರಾವ್ ದೇಶಪಾಂಡೆ, 'ಪರಿಶುದ್ದ್' ಗ್ರಾಮ ನೈರ್ಮಲ್ಯ ಯೋಜನೆ 
- ಶ್ರೀ ವೆಂಕಟೇಶ ಮೂರ್ತಿ, ಯೂಥ್ ಫಾರ್ ಸೇವಾ 
- ಶ್ರೀ ರಾಜೇಶ್ ಟಕ್ಕರ್, ಭೂಮಿ ಕಾಲೇಜ್ 

ನಿರೂಪಣೆ: ಶ್ರೀ ದಿವಾಕರ ಹೆಗಡೆ, ಆಕಾಶವಾಣಿ, ಧಾರವಾಡ 

ವಿವೇಕಾನಂದ ಕಾವ್ಯ ನಮನ: ೧೨.೦೦ - ೧.೦೦ 
ಕುವೆಂಪು, ಬೇಂದ್ರೆ, ಜಿಎಸ್ಎಸ್, ನರಸಿಂಹಸ್ವಾಮಿ, ಹೆಚ್ ಎಸ್ ವಿ ಪದ್ಯಗಳೊಂದಿಗೆ 
ಡಾ|| ಜಿ.ಬಿ.ಹರೀಶ್, ಸಾಹಿತ್ಯ ವಿಮರ್ಶಕರು ಮತ್ತು ಉಪಾಸನಾ ಮೋಹನ್, ಖ್ಯಾತ ಗಾಯಕರು 

ಸಮಾರೋಪ ನುಡಿ: ಡಾ|| ಹೆಚ್.ಎಸ್.ವೆಂಕಟೇಶ ಮೂರ್ತಿ, ಖ್ಯಾತ ಕವಿ ಮತ್ತು ಪ್ರಾಧ್ಯಾಪಕರು

ಊಟ: ೧.೧೫ ರಿಂದ 

ಇಲ್ಲಿ ನೋಂದಾಯಿಸಿhttp://vivek150.org/attend/