ಹೊಸವರ್ಷದ ಶುಭಾಶಯಗಳು ತಮ್ಮೆಲ್ಲರಿಗೂ-ರಘೋತ್ತಮ್ ಕೊಪ್ಪರ

ಹೊಸವರ್ಷದ ಶುಭಾಶಯಗಳು ತಮ್ಮೆಲ್ಲರಿಗೂ-ರಘೋತ್ತಮ್ ಕೊಪ್ಪರ

ಬರಹ

ಹೊಸವರ್ಷದ ಶುಭಾಶಯಗಳು ತಮ್ಮೆಲ್ಲರಿಗೂ-ರಘೋತ್ತಮ್ ಕೊಪ್ಪರ
೨೦೦೭ನೇ ವರುಷ ಮುಗಿಯುತ್ತ ಬಂತು. ಈಗಾಗಲೇ ಎಲ್ಲರೂ ೩೧ರ ರಾತ್ರಿ ಎಲ್ಲಿ ಮಾಡಬೇಕು, ಹೇಗೆ ಮಾಡಬೇಕು ಎಂದು ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ೨೦೦೭ ಹೇಗಿತ್ತು? ಅದರ ಸಿಹಿ ಕಹಿ ನೆನಪುಗಳನ್ನು ಮೆಲುಕುಹಾಕುತ್ತಾ ಬಂಧು ಮತ್ತು ಮಿತ್ರರೊಂದಿಗೆ ಕೇಕೆ ಹೊಡೆಯುವ ಕಾಲ ಹತ್ತಿರವೇ ಬಂದಿದೆ. ಪ್ರತಿ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ನಾವೆಲ್ಲ ಇನ್ನೊಂದು ವಿಚಾರವನ್ನು ಹಾಕಿಕೊಂಡಿರುತೇವೆ. ಅದು ಹೊಸ ವರ್ಷದಿಂದ ಬೆಳಿಗ್ಗೆ ಜಾಗಿಂಗ್ ಮಾಡುವುದು. ಹೊಸ ವರ್ಷದಿಂದ ಜಿಮ್ ಗೆ ಹೋಗೋಣ, ಗುಂಡು ಹಾಕೋದು ಬಿಡಬೇಕು, ಸಿಗರೇಟ್ ಬಿಡಬೇಕು ಹೀಗೆ ಏನೇನೊ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ಅವರ ಯೋಜನೆಗಳು ಸಫಲಗೊಳ್ಳಲಿ ಎಂದು ಹಾರೈಸೋಣ. ಸಂಪದ ಮಿತ್ರರಿಗೆಲ್ಲ ಹೊಸ ವರ್ಷದ ಶುಭಾಶಯಗಳು.