ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)

ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)

ಬರಹ

ಮನೆಯಲ್ಲಿ ಒಂದೇ ತರಹದ ಆದುಗೆ ಊಟ ಮಾಡಿ ಬೇಸರವಾದಾಗ ರುಚಿ ಹೆಚ್ಚಿಸಲು ಪುರುಷರು ತಮ್ಮ ಪತ್ನಿಗೆ(ಮದುವೆಯಾಗಿದ್ದರೆ) ಇದನ್ನು ತೋರಿಸದೇ ಹೊಸ ರುಚಿಗಳನ್ನು ಮಾಡಿ ನೋಡಬಹುದು.
ಪೇಪರ್ ದೋಸೆ
ಬೇಕಾಗುವ ಸಾಮಾನು : ೪-೫ ಹಳೆಯ ದಿನಪತ್ರಿಕೆಗಳು, ೧ ಪಾವು ಉದ್ದಿನಬೇಳೆ. ೧ ಚಿಟಿಕೆ ಅಡುಗೆ ಸೋಡಾ, ರುಚಿಗೆ ತಕ್ಕಷ್ಟೇ ಉಪ್ಪು.
ಮಾಡುವ ವಿಧಾನ : ಮೊದಲು ದಿನಪತ್ರಿಕೆಗಳಲ್ಲಿನ ಸುದ್ದಿಗಳನೆಲ್ಲ ಓದಿ. (ಅಂದಿನ ದಿನಪತ್ರಿಕೆಗಳಿದ್ದರೆ ಇನ್ನೂ ರುಚಿ ಹೆಚ್ಚು). ದರೋಡೆ, ಕಳ್ಳತನ, ಅತ್ಯಾಚಾರ ವರದಿಗಳನ್ನು ಕತ್ತರಿಸಿಟ್ತುಕೊಳ್ಳಿ. ಉದ್ದಿನ ಬೇಳೆಯನ್ನು ಹಿಂದಿನ ದಿನವೇ ನೆನೆಹಾಕಿ. ಬೆಳಿಗ್ಗೆ ಕತ್ತರಿಸಿಟ್ಟುಕೊಂಡ ವರದಿಗಳನ್ನು ಹಾಗೂ ಉದ್ದಿನ ಬೇಳೆಯನ್ನು ಸೇರಿಸಿ ಗ್ರೈಂಡರ್ನಲ್ಲಿ ಹಾಕಿ ಚೆನ್ನಾಗಿ ರುಬ್ಬಿ. ಅಡುಗೆ ಸೋಡಾ ಹಾಕಿ ಕದಡಿ. ಹಂಚಿನ ಮೇಲೆ ದೊಡ್ದ ದೋಸೆಯನ್ನು ಹಾಕಿರಿ. ಹಂಚಿನ ಕೆಳಗೆ ಉರಿ ಇದೆಯೋ ಇಲ್ಲವೋ ನೋಡಿಕೊಂಡು ಖಾತ್ರಿ ಮಾಡಿಕೊಳ್ಳಿ. ೨ ನಿಮಿಶ ಬೆಂದ ನಂತರ ಗರಿಗರಿ ಬಿಸಿಬಿಸಿ ದೋಸೆ ಸಿದ್ಧ. ಗರಿಗರಿ ಇನ್ನೂ ಹೆಚ್ಚು ಬೇಕಾದಲ್ಲಿ ಪೇಪರ್ಗಳು ಬಂದ ತಕ್ಷಣವೇ ಕತ್ತರಿಸಿ ರುಬ್ಬಿ ಕಲೆಸಿದರೆ ತಿನ್ನಲು ಇನ್ನೂ ಚೆನ್ನ. ಅತಿಥಿಗಳಿಗೆ ಇದನ್ನೇ ಕೊಡಿ. ಅವರ ಪ್ರತಿಕ್ರಿಯೆಯನ್ನು ಕಾಯಿರಿ.
ಮುಂದಿನ ಸಲದ ವಿಶೇಷ ಅಡುಗೆ-ವಾಂತೀಭಾತ್
-ಸಿದ್ಧರಾಮ ಹಿರೇಮಠ.