ಹೋರಾಟ ಏನು? ಕೈ ಜೋಡಿಸುವುದು ಹೇಗೆ?

ಹೋರಾಟ ಏನು? ಕೈ ಜೋಡಿಸುವುದು ಹೇಗೆ?

Comments

ಬರಹ
ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಚಳುವಳಿ, ರಾಷ್ಟ್ರವ್ಯಾಪೀ ಜಾಗೃತಿ ಮೂಡಿಸಿರುವುದು ನಿಜ. ಅದರೊಡನೆ ಸಾರ್ವಜನಿಕರು, ಅದರಲ್ಲೂ ಮಧ್ಯಮವರ್ಗದವರು ಕೈ ಜೋಡಿಸಬೇಕೆಂಬ ಕರೆಯೂ ವ್ಯಾಪಕವಾಗಿ ಕೇಳಿಸುತ್ತಿದೆ. ಹಾಗೆನ್ನುವುದು ಕೆಲವರಿಗೆ ಫ್ಯಾಶನ್ನೂ ಆಗಿರಬಹುದು. ಆದರೆ ಆಣ್ಣನ ಈ ’ಹೋರಾಟ’ ಏನು? ಇದರೊಡನೆ ನವು, ಜನಸಾಮಾನ್ಯರು ಕೈ ಜೊಡಿಸುವುದು ಹೇಗೆ? ಇದು ಪ್ರಾಮಾಣಿಕ ಪ್ರಶ್ನೆ. ಆದರೂ ಸಿನಿಕತನದ್ದು ಎಂದು ಬೈಸಿಕೊಂಡಾಗಿದೆಯೇ ಹೊರತು ಉತ್ತರ ಮಾತ್ರಾ ಸಿಕ್ಕಿಲ್ಲ! ’ಜನಲೋಕಪಾಲ’ ಎಂಬ ವ್ಯಾಪಕ ಅಧಿಕಾರದ ಮಸೂದೆಯೊಂದನ್ನು ಜಾರಿಗೆ ತರಬೇಕೆನ್ನುವುದು ಆಂದೋಳನದ ಪ್ರಮುಖ ಒತ್ತಾಯ ಎಂದುಕೊಂಡಿದ್ದೇನೆ, ಇಂತಹ ಒಂದು ಮಸೂದೆಗೆ ಸಂಸತ್ತು ನಿಜವಾಗಿ ಒಪ್ಪಿಗೆ ನೀಡುವುದು ಶಕ್ಯವೇ? ’ರಾಜಕೀಯಕ್ಕಾಗಿ’ ಈ ಮಸೂದೆ ಪಾಸಾದೀತೆಂದೇ ಇಟ್ಟುಕೊಳ್ಳೋಣ; ಅದು ಕಾಯ್ದೆಯಾಗಿ ಜಾರಿಗೆ ಬರುವುದಾದರೂ ಉಂಟೇ? ಕೆಲ ವಿಷಯಗಳ ಮಟ್ಟಿಗೆ ಸದನದಲ್ಲಿ ಸದಸ್ಯರುಗಳ ವರ್ತನೆಯನ್ನೂ ಜನಲೋಕಪಾಲದ ವಿಚಾರಣಾ ವ್ಯಾಪ್ತಿಗೆ ತರಬೇಕೆಂಬ ವಿಷಯವೂ ಸಮಿತಿ ಸಭೆಯಲ್ಲಿ ಚರ್ಚೆಯಾಗಿದೆಯಂತೆ! ಬಹುತೇಕ ಅಲ್ಪ ದರ್ಜೆಯ ಸಂಸ್ಕಾರ ವಿಹೀನ ಸದಸ್ಯರುಗಳೇ ಶಾಸನಸಭೆಗಳಲ್ಲೂ, ಸಂಸತ್ತಿನಲ್ಲೂ ಇರುತ್ತಾರೆನ್ನುವುದು ನಿಜವೇ ಆದರೂ ಸದನಗಳ ನಡಾವಳಿಯ ಬಗ್ಗೆ ಮೂರನೆಯವರೊಬ್ಬರು ವಿಚಾರಣೆ ನಡೆಸುವುದನ್ನು ಸಂಸದೀಯ ಪ್ರಜಾಪ್ರಬುತ್ವಕ್ಕೆ ಸಮ್ಮತವಾಗಬಹುದೇ? ಇಂಥಾ ಅಸಂಭವನೀಯ ಆಂದೋಲನವನ್ನು ಕೆಲವು ಅತ್ಯತ್ಸಾಹೀ ಪ್ರಚಾರಕರು ಎರಡನೇ ಸ್ವಾತಂತ್ರ್ಯ ಹೋರಾಟವೆಂದೇ ವರ್ಣಿಸುತ್ತಿದ್ದಾರೆ. ಇದಂತೂ ತೀರಾ ಬಾಲಿಶವೆನಿಸುತ್ತದೆ! ಅಂದು ವಿದೇಶೀ ಆಳ್ವಿಕೆಯ ವಿರುದ್ಧ, ’ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’ ಎಂಬ ಕೂಗಿತ್ತು. ಈಗಲಾದರೋ ನಮ್ಮವರೇ ಅದ ನಮ್ಮ ಕಣ್ಮಣಿ, ಭ್ರಷ್ಟ ನಾಯಕರನ್ನು ಎಲ್ಲಿಗೆ ಓಡಿಸುತ್ತೀರಿ? ಅಂಥವರನ್ನು ಹಿಡಿದು ವಿಚಾರಿಸಿ, ಈ ನೆಲದ ಜೈಲುಗಳಲ್ಲೇ ನೇಣಿಗೇರಿಸುವ ಕಾನೂನುಗಳು ಬೇಕೆನ್ನುವುದೇನೋ ನಿಜದ;ಲಿ ನಿಜ. ಆದರೆ ಅದನ್ನು ಮಾಡಬೇಕಾದವರ್ಯಾರು? ಇದೇ ನಾಯಕಮಣಿಗಳಲ್ಲವೇ?! ಜನಸಂಖ್ಯೆಯ ಶೇ. 25-30ರಷ್ಟನ್ನೂ ಪ್ರತಿನಿಧಿಸದ, ಅದೂ ಈ ಅಲ್ಪ ಸಂಖ್ಯೆಯನ್ನೂ ಹಣಬಲದಿಂದ, ತೋಳ್ಬಲದಿಂದ, ಹೆಂಡದ ಬುಂಡೆಯಿಂದ ಕೊಂಡ, ಸ್ವಯಂ ಭ್ರಷ್ಟ ಸಂಸತ್ತು, ಶಾಸನಸಭೆಗಳು ಈ ವ್ಯವಸ್ಥೆ ಮಾಡಿಯಾವೇ? ದೇಶದಲ್ಲಿ ಭ್ರಷ್ಟಾಚಾರ ನೀಗಬೇಕಾದರೆ, ಶಾಸಕಾಂಗ ಸದನಗಳನ್ನು ನಿಜವಾಗಿ ಬಹುಜನ ಪ್ರಾತಿನಿಧಿಕವಾಗಿ ಮಾಡುವ ಚಿಂತನೆ ಮೊದಲಾಗಬೇಕು. ಅದೊಂದಾದರೆ ಯಾವ “ಪಾಲಕರೂ”, “ಆಯುಕ್ತರೂ” ಬೇಕಾಗುವುದೇ ಇಲ್ಲ! ಅದಿಲ್ಲದ ಇಂಥಾ “ಓಡಾಟಗಳು” ದಿನ ನಿತ್ಯದ ಬಂದ್, ರಾಸ್ತಾ ರೋಖೋ, ಚಕ್ಕಾಜಾಮ್ ಗಳ ಪೈಕಿಯದಾಗಿಬಿಟ್ಟಾವು, ಅಷ್ಟೆ!
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet