ಹೋಲಿಕೆಯೇ ಈ ತೃಣಸಮಾನ ಯುಗಕ್ಕೆ?!
ಏನೆಂದು ಬಣ್ಣಿಸಲಿ
ನಾ ನಿನ್ನ ಚಂದ
ಕವಿಯಾಗಿ ಹೋದೆ
ಕಂಡು ನಿನ್ನಂದ!
ಮುದ್ದಾಗಿ ಬಿರಿದ
ಚೆಂದುಟಿಯ ಹೂನಗುವು
ಹೋಲಿಕೆಯೇ
ಅರೆ ಬಿರಿದ ಮಲ್ಲಿಗೆಯ
ಶ್ವೇತವರ್ಣದ ಸಿರಿಗೆ?
ಮನವನ್ನು ತಣಿಸುವ
ಆ ನಿನ್ನ ಮೊಗವು
ಹೋಲಿಕೆಯೇ
ಚಂದ್ರಮನು ಹೊಮ್ಮಿಸುವ
ಬೆಳದಿಂಗಳ ತಂಪಿಗೆ?
ಪ್ರೇಮದಿಂದ ಕೆಣಕುವ
ತುಂಟ ನೋಟಗಳು
ಹೋಲಿಕೆಯೇ
ಮುಕ್ಕಣ್ಣನ ಕೆರಳಿಸಿದ
ಕಾಮನ ಬಾಣಗಳಿಗೆ?
ನಿನಗಾಗಿ ನನ್ನಲ್ಲಿ
ಮೂಡಿದ ಬಯಕೆಗಳು
ಹೋಲಿಕೆಯೇ
ಆಗಸದ ಅಂಗಣದಿ
ಮಿರಿಗುಡುವ ತಾರೆಗಳಿಗೆ?
ನಮ್ಮಿಬ್ಬರ ಮಿಲನದ
ಅಮೃತ ಘಳಿಗೆ
ಹೋಲಿಕೆಯೇ
ನೀ ನನ್ನೊಂದಿಗಿಲ್ಲದೆಯೂ
ಕಳೆಯುತಿರುವ ಈ ತೃಣಸಮಾನ ಯುಗಕ್ಕೆ?!
Comments
ಉ: ಹೋಲಿಕೆಯೇ ಈ ತೃಣಸಮಾನ ಯುಗಕ್ಕೆ?!
ಉ: ಹೋಲಿಕೆಯೇ ಈ ತೃಣಸಮಾನ ಯುಗಕ್ಕೆ?!
In reply to ಉ: ಹೋಲಿಕೆಯೇ ಈ ತೃಣಸಮಾನ ಯುಗಕ್ಕೆ?! by venkatb83
ಉ: ಹೋಲಿಕೆಯೇ ಈ ತೃಣಸಮಾನ ಯುಗಕ್ಕೆ?!