೨೦೦೯ ರ, " ಕಾಲಾಘೋಡಾ ಆರ್ಟ್ಸ್ ಫೆಸ್ಟಿವಲ್, ಮುಂಬೈ " !

೨೦೦೯ ರ, " ಕಾಲಾಘೋಡಾ ಆರ್ಟ್ಸ್ ಫೆಸ್ಟಿವಲ್, ಮುಂಬೈ " !

ಬರಹ

ದಕ್ಷಿಣ ಮುಂಬೈ ನ ಕಾಲಾಘೋಡ (KGAF) ಇಲಾಖೆಯಲ್ಲಿ ಸುಮಾರು, ೧೧ ವರ್ಷಗಳಿಂದ 'ಕಾಲಾಘೋಡ ಅಸೋಸಿಯೇಷನ್' ನವರು, ನಡೆಸಿಕೊಂಡು ಬಂದಿರುವ ವಾರ್ಷಿಕ ಉತ್ಸವವಿದು. ಮುಂಬೈ ನ ಪ್ರತಿಶ್ಠಿತ ’ಟೈಮ್ಸ್ ಆಫ್ ಇಂಡಿಯ ’ ಪತ್ರಿಕೆ, ಇದನ್ನು ಪ್ರಾಯೋಜಿಸುವ ಪ್ರಮುಖ ಸಂಸ್ಥೆಗಳಲ್ಲೊಂದು ! ಉತ್ಸವದಲ್ಲಿ ಸಕ್ರಿಯವಾಗಿ ಪಾಲುಗೊಂಡಿರುವ ಸಂಘ ಸಂಸ್ಥೆಗಳು ಹಲವಾರು :

* 1. National Gallery of Modern Arts.

* 2. David Sassoon Library Gardens.

* 3. Jehangir Arts Gallery.

* 4. Maxmuller Bhavan.

* 5. Cama institute.

ಪ್ರತಿವರ್ಷದಂತೆ, ಈ ವರ್ಷ ಫೆಬ್ರವರಿ, ೭ ರಿಂದ ಫೆಬ್ರವರಿ, ೧೫ ರವರೆಗೆ ನಡೆಯುವ ೯ ದಿನಗಳ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮುಂಬೈ ನ ಯುವಜನ ಉತ್ಸುಕರಾಗಿರುತ್ತಾರೆ. ಪ್ರತಿ ಇಂಚ್ ಜಾಗವೂ ಬಂಗಾರವಾಗಿರುವ ಮುಂಬೈನಲ್ಲಿ ಇಂತಹ ಉತ್ಸವಗಳನ್ನು ಮಾಡುವುದು ಸುಲಭವೇನಲ್ಲ. ಆದರೆ, ಮುಂಬೈ ನ ಜನರಿಗೆ, ಪರಂಪರೆ, ಕಲೆ, ಸಾಹಿತ್ಯ, ಸಂಕೃತಿಯಬಗ್ಗೆ ಅಪಾರ ಕಾಳಜಿಯಿದೆ. ಕರಕುಶಲ ಕೈಗಾರಿಕೆಗಳಿಗೆ ಆದ್ಯತೆ, ಪ್ರೋತ್ಸಾಹಕೊಡುತ್ತಾರೆ. ನಮ್ಮದೇಶದ ಹಲವು ಹಳ್ಳಿಗಾಡುಗಳು, ಹಾಗೂ ಅದಿವಾಸಿಗಳ ನೆಲೆಗಳಿಂದ ಏನಾದರೂ ವಿಶೇಷವಿದ್ದರೆ ಅವನ್ನು ಕಾರಿಗಾರ್ ಗಳ ಸಹಿತ ತಂದು, ಇಲ್ಲಿ ಪ್ರದರ್ಶನಮಾಡುತ್ತಾರೆ. ಅವರ ಕಲೆಗೆ ಒಂದು ಇಂಬು ಸಿಗುತ್ತದೆ. ಹಾಲಿವುದ್ ಚಲನಚಿತ್ರದ ಒಂದು ಸೆಟ್ ನಲ್ಲಿ ಕಾಣಿಸಿಕೊಳ್ಳುವ ವಿಶೇಶ ನಿರ್ಧಾರಿತ ದೃಷ್ಯಗಳಂತೆ, ಒಂದೇ ಒಂದು ರಸ್ತೆಯಲ್ಲಿ ನಾವು ವೈವಿಧ್ಯಮಯ, ವೈಶಿಷ್ಠ್ಯಪೂರ್ಣ ಕಲಾವಸ್ತುಗಳನ್ನು ನಾವು ಕಾಣಬಹುದು.

ಅವುಗಳು :

* ಅಲಂಕಾರವಸ್ತುಗಳು, ಕಲಾಕುಸುರಿವಸ್ತುಗಳು, ಕೈಬ್ಯಾಗ್, ಬಳೆಗಳು, ರೆಡಿಮೇಡ್ ವಸ್ತುಗಳು, ಚಾದರ, ಕೈಮಗ್ಗದ ಬಟ್ಟೆ, ( ಫುಟ್ಪಾತ್ ನ ಮೆಲೇ ಒಂದು ಪುಟ್ಟ ಹ್ಯಾಂಡ್ ಲೂಮ್ ತಂದು ಅದರಲ್ಲಿ ಬಟ್ಟೆನೇಯುವುದನ್ನು ಪ್ರದರ್ಶಿಸುತ್ತಾರೆ )

* ಮರದಲ್ಲಿ ಕೆತ್ತಿದ ಸಣ್ಣಪುಟ್ಟ ಹಾಗೂ ದೊಡ್ಡಮೂರ್ತಿಗಳು, ತರಹಾವರಿ ಚಾಪೆಗಳು, ಮಣ್ಣಿನಮಡಕೆಗಳು, ಕಲ್ಲಿನ ಸುಂದರ ಶಿಲ್ಪಗಳು,

* ಶುದ್ಧವಾದಜೇನುತುಪ್ಪ, ಪುಸ್ತಕದ ಮಳಿಗೆ, ಇವನ್ನೆಲ್ಲಾ ತಯಾರಿಸುವ ಹಲವಾರು ಸಾರ್ವಜನಿಕ ಸೇವಾಸಂಸ್ಥೆಗಳು. ಕೆಲವು ಅಂಧ, ಅಂಗವಿಕಲ, ಮತಿಮಂದ ಅನಾಥಮಕ್ಕಳ, ಅಥವಾ ಆದಿವಾಸಿ ಬುಡಕಟ್ಟುಜನಾಂಗ, ನಾವು ಹೆಚ್ಚಿಗೆ ಹಣಕೊಟ್ಟು ಕೊಂಡರೆ ಅವರಿಗೆ, ಸಹಾಯಧನ, ಅಥವಾ ದೇಣಿಗೆ ಕೊಟ್ಟಂತೆ.ನಮಗೆ ಮೆಂಬರ್ ಶಿಪ್ ಕೂಡ ದೊರೆಯುತ್ತದೆ.

ವಿವಿಧೋದ್ದೇಷಗಳ ಸಂಸ್ಥೆಗಳು ಈ ವಸ್ತುಪ್ರದರ್ಶನದಲ್ಲಿ ಚಾಲ್ತಿಯಲ್ಲಿವೆ. ಕಾಡು, ಪರಿಸರಗಳ ಬಗ್ಗೆ ಕಾಳಜಿವಹಿಸುವ ಹಲವಾರು ವಿಶಯಗಳನ್ನು ನಾವು ಇಲ್ಲಿ ಕಾಣಬಹುದು. ಮಾನಸಿಕ ಅನಾರೋಗ್ಯವುಳ್ಳದವರ, ಅಂಗವಿಕಲರ, ಅಂಧರ ಕಲಾನೌಪುಣ್ಯತೆಯನ್ನು ಇಲ್ಲಿ ನಾವು ನೋಡಿ ಸವಿಯಬಹುದು. ಸರಿಯಾಗಿ ವಿವರಿಸಬೇಕೆಂದರೆ, ಈ ಕಾಲಾಘೋಡ ಉತ್ಸವನಡೆಯುತ್ತಿರುವ ಜಾಗದಲ್ಲಿ ಹಿಂದೆ, ಇಂಗೆಂಡ್ ನ ರಾಜಕುಮಾರ, ೭ ನೆಯ ಎಡ್ವರ್ಡ್ ನ ಒಂದು ಕಂಚಿನ ಪ್ರತಿಮೆಯಿತ್ತು. ಕಪ್ಪು ಕುದುರೆಯಮೇಲೆ ಆಸೀನನಾಗಿದ್ದ ಆತನ ವಿಗ್ರಹ ಬಹಳವರ್ಷಗಳಕಾಲ, ದಕ್ಷಿಣ ಮುಂಬೈನ ಪ್ರಮುಖ ಆಕರ್ಷಣೆಯ ಕೇಂದ್ರವಾಗಿತ್ತು. ಇದನ್ನು ಸ್ಥಳೀಯಜನ "ಕಾಲಾಘೋಡಪ್ರದೇಶ " ವೆಂದು, ಗುರುತಿಗಾಗಿ ಹೇಳುತ್ತಿದ್ದರು. ಈಗಲೂ ಅದೇಹೆಸರಿನಿಂದ ಇದು ಪ್ರಸಿದ್ಧಿಯಾಗಿದೆ. ಕಾಲಾನುಕ್ರಮದಲ್ಲಿ ಆ ವಿಗ್ರಹವನ್ನು ತೆಗೆದು, ಬೈಖಲ್ಲಾನ ಉದ್ಯಾನದಲ್ಲಿ ಇಡಲಾಯಿತು. " ಕಾಲಾಘೋಡಾ ಆರ್ಟ್ಸ್ ಫೆಸ್ಟಿವಲ್ ನ್ನೇ ಮಧ್ಯ ಕೇಂದ್ರವಾಗಿಟ್ಟುಕೊಂಡು ಒಂದು ವೃತ್ತಾಕಾರದ ವಲಯವನ್ನು ರಚಿಸಿದರೆ, ವೃತ್ತದ ಪರಿಧಿಯಲ್ಲಿ, ಬರುವ ಸಂಸ್ಥೆಗಳು, ಹೀಗಿವೆ :

'ಜೆಹಾಂಗೀರ್ ಆರ್ಟ್ಸ್ ಗ್ಯಾಲರಿ' ಪಕ್ಕದಲ್ಲಿ, ಅಥವಾ ಹಿಂದೆ, 'ರಿದಮ್ ಹೌಸ್', ಒಂದುಕಡೆ, 'ಮ್ಯಾಕ್ಸ್ ಮ್ಯುಲ್ಲರ್ ಭವನ,' ಎದುರಿಗೆ 'ಆರ್ಮಿ ಮತ್ತು ನೇವಿ ಕಟ್ಟಡ,' ಅದರ ಬದಿಯಲ್ಲಿ, 'ಡೇವಿದ್ ಸಸೂನ್ ಲೈಬ್ರೆರಿ', 'ಕಾಪರ್ ಚಿಮನಿ ರೆಸ್ಟೊರಾಂಟ್' ವರೆಗೆ. ಬಿ. ಇ. ಎಸ್. ಟಿ. ಬಸ್ ನಲ್ಲಿ ಬಂದರೆ, ’ಜೆಹಾಂಗೀರ್ ಆರ್ಟ್ಸ್ ಗ್ಯಾಲರಿ ’ ಯಬಳಿ ಅಥವಾ ’ರೀಗಲ್ ಸಿನೆಮಾ ಸ್ಟಾಪ್ ’ ಎಂದು ಕಂಡಕ್ಟರ್ ಗೆ ತಿಳಿಸಿದರಾಯಿತು.

ವೀಟಿಯಿಂದ ( ಸಿ. ಎಸ್. ಟಿ) ಕೊಲಾಬಾ ಕ್ಕೆ ಹೋಗುವ ಎಲ್ಲಾ ಬಸ್ ಗಳೂ ಇದರಮುಂದೆಯೇ ಹೋಗಬೇಕು. 'ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಮ್', ' ಛತ್ರಪತಿ ಶಿವಾಜಿಮಹಾರಾಜ್ ವಸ್ತುಸಂಗ್ರಹಾಲಯ) ಎಲ್ಫಿನ್ ಸ್ಟನ್ ಕಾಲೇಜ್', ಎಲ್ಲವೂ ಇದರ ಅಕ್ಕ-ಪಕ್ಕಗಳಲ್ಲಿ ಕಾಣಿಸುತ್ತವೆ. ದಿನವೂ ಸಾಯಂಕಾಲ, ಪ್ರಖ್ಯಾತ ಕಲಾವಿದರು, ತಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ರಸಿಕರನ್ನು ತಣಿಸುತ್ತಾರೆ. ಕಲಾಸಕ್ತರು ಇದಕ್ಕಾಗಿ ವರ್ಶವಿಡೀ ಕಾಯುತ್ತಿರುತ್ತಾರೆ. ಆರ್ಟ್ಸ್ ವರ್ಕ್ಸ್ ಶಾಪ್ ಗಳು, ಉಪನ್ಯಾಸಗಳು, ರಂಗಮಂಚದ ಕಲಾಕಾರ್ಯಕ್ರಮಗಳು, (ನೃತ್ಯ ಮುಂತಾದವುಗಳು) ಪ್ರತಿದಿನವಿಡೀ ಇರುತ್ತವೆ.

ಫೆಬ್ರುವರಿ ತಿಂಗಳ ೭ ರಂದು ಪ್ರಾರಂಭವಾದ, ೯ ದಿನಗಳ ಈ ಆರ್ಟ್ಸ್ ಪ್ರದರ್ಶನ, ಉದಯೋನ್ಮುಖ ಚಿತ್ರಕಾರರಿಗೆ, ಕಲಾವಿದರಿಗೆ, ಸಂಗೀತಕಾರರಿಗೆ, ಉಪನ್ಯಾಸಕಾರರಿಗೆ, ಹಾಗೂ ನೃತ್ಯಪಟುಗಳಿಗೆ, ಸ್ವರ್ಗ-ಕಾಶಿಯಿದ್ದಂತೆ ! ಕಾರ್ಯಕ್ರಮಗಳ ಪಕ್ಷಿನೋಟವನ್ನು ಗಮನಿಸಿ : (ಕೊಂಡಿ.)

** http://www.kalaghodaassociation.com/

** http://www.bombaylives.com/?p=1508

** http://kn.wikipedia.org/wiki/%E0%B2%95%E0%B2%BE%E0%B2%B2_%E0%B2%98%E0%B3%8B%E0%B2%A1

- (ಸಂಗ್ರಹ ) ವೆಂಕಟೇಶ್.