೨೬/೧೧ ನ ಕರಾಳರಾತ್ರಿಯಂದು, ಮುಂಬೈನ, 'ಕಾಮಾ ಆಸ್ಪತ್ರೆ,'ಯಲ್ಲಿ ಹೆಣ್ಣು-ಮಗುವೊಂದು ಜನಿಸಿತ್ತು !

೨೬/೧೧ ನ ಕರಾಳರಾತ್ರಿಯಂದು, ಮುಂಬೈನ, 'ಕಾಮಾ ಆಸ್ಪತ್ರೆ,'ಯಲ್ಲಿ ಹೆಣ್ಣು-ಮಗುವೊಂದು ಜನಿಸಿತ್ತು !

ಬರಹ

ಆತಂಕವಾದಿಗಳ ಆರ್ಭಟದಿಂದ ಘಾಸಿಗೊಂಡ ಮುಂಬೈ ಪುಟಗಳಿಂದ :

ಮುಂಬೈ ನಗರದಲ್ಲಿ, ೨೬ ನೆಯ ತಾರೀಖಿನ ರಾತ್ರಿ ೧೦ ಗಂಟೆಗೆ, ಉಗ್ರರು ತಮ್ಮ ಅತ್ಯಾಧುನಿಕ ರೈಫಲ್ ಗಳಿಂದ, ಗುಂಡಿನ ಮಳೆಕರೆಯುತ್ತಿದ್ದ ಸಮಯದಲ್ಲೇ ೨೮ ವರ್ಷದ 'ನಸ್ರಿಂ ಶೇಖ್', ನ್ನು 'ಕಾಮಾ ಆಲ್ ಬ್ಲೆಸ್' ಆಸ್ಪತ್ರೆ' ಯ ಹೆರಿಗೆಯ ಆಪರೇಷನ್ ಥಿಯೇಟರ್ ಗೆ ಕರೆದೊಯ್ಯುವ ಏರ್ಪಾಡು ನಡೆಯುತ್ತಿತ್ತು. ಗ್ರೆನೇಡ್, ಎ. ಕೆ ೪೫ ರೈಫಲ್ ನ ಚಕಾಮಕಿಯ ಶಬ್ದಗಳು ವಾರ್ಡ್ ನ ಹೊರಗೆ ಹೆಚ್ಚುತ್ತಾಹೋಯಿತು. ವಾಚ್ ಮನ್ ಗಳ, ರೋಗಿಗಳ ಚೀತ್ಕಾರ, ಆಕ್ರಂದನಗಳು ಹೃದಯವನ್ನು ಸೀಳುವಷ್ಟರಮಟ್ಟಿಗೆ ಭಯಂಕರವಾಗಿದ್ದವು. ವಾರ್ಡ್ ಬಾಯ್ ಓಡಿಬಂದವನೆ, ಇಬ್ಬರೂ ವಾಚ್ ಮನ್ ಗಳು ಗುಂಡಿನೇಟಿನಿಂದ ಮೃತರಾದ ವಿಷಯ ತಿಳಿಸಿದ. ತಕ್ಷಣವೇ, ಆ ವಾರ್ಡಿನ ಬಾಗಿಲನ್ನು ಭದ್ರವಾಗಿ ಮುಚ್ಚಲಾಯಿತು. ಅಕ್ಕ-ಪಕ್ಕದ ಕಪ್ಬರ್ಡ್ ಗಳು, ಬೆಂಚು, ಕುರ್ಚಿಗಳನ್ನು ಎಳೆದುತಂದು ಬಾಗಿಲಿಗೆ ಸಪೋರ್ಟ್ ಕೊಡಲಾಯಿತು. ಸಿ. ಎಸ್. ಟಿ ರೈಲ್ವೆ ಸ್ಟೇಶನ್ ನಿಂದ ಆಗತಾನೇ ಬಂದ, ಭಯೋತ್ಪಾದಕರ ಗುಂಡುಗಳು ಕಾಮಾ ಆಸ್ಪತ್ರೆಯ ಭದ್ರವಾದ ಗೋಡೆಗಳಿಗೆ ಸಿಡಿಯುತ್ತಿದ್ದ ಶಬ್ದವನ್ನು ಊಹಿಸಿಕೊಂಡರೇ, ತಲೆ ರುಯ್ಯನೆ ಸುತ್ತಿ ಮೂರ್ಛೆಬರುವಂತಾಗುತ್ತಿತ್ತು. ಆತಂಕಿಗಳು ತಮ್ಮ ಎ. ಕೆ. ೪೭ ಕೋವಿಯಿಂದ ಬಾಗಿಲನ್ನು ದಡ-ದಡ ಬಡಿದು, ಕಾಲಿನಲ್ಲಿ ಒದೆಯುತ್ತಿದ್ದರು. ಆಹೊತ್ತಿಗೆ, ವಾರ್ಡ್ ನಲ್ಲಿದ್ದ, ಡಾಕ್ಟರ್ ಗಳು, ನರ್ಸ್ ಗಳು ಹಾಗೂ ವೇರ್ಡ್ ಬಾಯ್, ಗಳು ಒಳಗಿನ ಲೈಟ್, ಫ್ಯಾನ್ ಗಳನ್ನು ಆರಿಸಿದ್ದರು. ಟೆಲಿಫೋನ್ ರಿಸೀವರ್ ಗಳನ್ನು ಎತ್ತಿ ಹೊರಗಿಟ್ಟಿದ್ದರು. ಶಬ್ದಬರಬಾರದೆಂದು, 'ನಸ್ರಿಂ ಶೇಖ್' ಬಾಯಿಗೆ ಬಟ್ಟೆ ತುರುಕಿದ್ದರು. ಸೆಡೆಟೀವ್ ಇಂಜೆಕ್ಷನ್ ಚುಚ್ಚಲಾಯಿತು. ಎಲ್ಲೋ, ಯಾವುದೋ, ಭಾರಿ ಮಾರ್ಕೆಟ್ ನಲ್ಲಿ ಜನಜಂಗುಳಿಯಲ್ಲಿ ಆಗುವ ಶಬ್ದದಂತೆ, ಭಾಸವಾಗುತ್ತಿತ್ತು. ಸ್ವಲ್ಪ ಸಮಯದನಂತರ ನಿಧಾನವಾಗಿ ಬೂಟಿನ ಶಬ್ದ ದೂರ-ದೂರ ಸರಿಯುತ್ತಿರುವಂತೆ ಅನುಭವವಾಯಿತು. ಈ ಘಟನೆಯಾದ ೩ ಗಂಟೆಯ ಮೇಲೆ ಶೇಖಳ ಹೆರಿಗೆಯನ್ನು ಮಾಡಲಾಯಿತು. ಮುಂಬೈನ ಕರಾಳರಾತ್ರಿಯದಿನ, ಜನರೆಲ್ಲರ, ಗಲಭೆ, ಪ್ರಾಣಭಯ, ಉದ್ವೇಗ, ಹಾಗೂ ಚೀತ್ಕಾರಗಳ ಮಧ್ಯೆ, ಹೆಣ್ಣು ಮಗುವೊಂದು ಜನಿಸಿತ್ತು ! ಆ ಜಗನ್ನಿಯಾಮಕನ ಮಹಿಮೆಯನ್ನು ಊಹಿಸಲು ಸಾಧ್ಯವೇ ? ಹೆರಿಗೆ-ನೋವುಬಂದ ೩ ಗಂಟೆಗಳ ಬಳಿಕ, ನಡೆದ ಆಪರೇಶನ್ ಸಫಲವಾಗಿತ್ತು ! ಡಾಕ್ಟರ್ ಗಳು, ನರ್ಸ್ ಗಳು, ಸಿಬ್ಬಂದಿವರ್ಗವಲ್ಲದೆ, ಅಲ್ಲಿನ ರೋಗಿಗಳ ಆತಂಕ ಹೇಳತೀರದು !

ದಕ್ಷ್ಗಿಣ ಮುಂಬೈ ನ 'ಬೆಲ್ಲಾರ್ಡ್ ಎಸ್ಟೇಟ್',’ ವಲಯದಲ್ಲಿ ವಾಸಿಸುತ್ತಿದ್ದ ೩೦ ವರ್ಷ ವಯಸ್ಸಿನ 'ನಸೃ ಶೇಖ್', ತನ್ನ ಹೆಂಡತಿ 'ನಸ್ರಿಂ ಶೇಖ್,' ನ್ನು ಹೆರಿಗೆಗಾಗಿ 'ಕಾಮಾ ಆಲ್ಬ್ಲೆಸ್ ಆಸ್ಪತ್ರೆ,' ಗೆ ದಾಖಲು ಮಾಡಿದರು. ರಾತ್ರಿ ೧೦ ಗಂಟೆಗೆ ಹೆರಿಗೆ ನೋವುಕಾಣಿಸಿಕೊಂಡು, ಎಷ್ಟು ಬೇಗ ಅಂದರೆ, ಆಗಲೇ ಮಗುವಿನತಲೆ ಹೊರಗೆ ಬರಲು ಶುರುವಾಗಿತ್ತು. ನರ್ಸ್ ಕೂಡಲೆ 'ನಸ್ರಿಂ ಶೇಖ್' ನ್ನು, 'ಆಪರೇಷನ್ ಥಿಯೇಟರ್' ವಾರ್ಡ್ ಗೆ ಕರೆದೊಯ್ಯಲು ವ್ಯವಸ್ಥೆಮಾಡಿದರು. ಹೊರಗಿನ ಚೀರಾಟ, ಕೂಗಾಟದ ದ್ವನಿ ಒಳಗಿನ ಎಲ್ಲರನ್ನೂ ದಿಗ್ಭ್ರಮೆ ಗೆಡಿಸಿತು. ಡಾಕ್ಟರ್ ಗಳು ಗಾಬರಿಯಲ್ಲಿ ಮಗುವಿನ ತಲೆಯನ್ನು ಒಳಗೆ ನೂಕಲು ಯತ್ನಿಸಿದರು. ಶಬ್ದಬರಬಾರದೆಂದು 'ನಸ್ರಿಂ ಶೇಖ್' ಬಾಯಿಗೆ ಬಟ್ಟೆತುರುಕಿದರು. ತಕ್ಷಣವೇ ಇಂಜೆಕ್ಷನ್ ಕೊಡಲಾಯಿತು. ಲೈಟ್ ಗಳನ್ನು ಆರಿಸಿದರು. ಯಾರೂ ಮಾತಾಡುವಂತಿಲ. ಎಲ್ಲವೂ ಸಂಜ್ಞೆಗಳಲ್ಲೇ ! ನಸ್ರಿಂ ಲೇಬರ್ ಪೇನ್ ತಡೆಯಲು ಬಹಳ ಕಷ್ಟಪಡುತ್ತಿದ್ದರು. ಸುಮಾರು ೧೨-೩೦ ಕ್ಕೆ ಆತಂಕಿಗಳು ಹೊರಟುಹೋದರೆಂದು ಸುದ್ದಿಬಂತು. ಆಗ ಬಾಗಿಲನ್ನು ತೆರೆದರು. ಮತ್ತೆ ಲೈಟ್ ಗಳನ್ನು ಹಾಕಿದರು. ಆಪರೇಶನ್ ಮತ್ತೆ ಶುರುವಾಗಿ ಎಲ್ಲವೂ ಸುಸೂತ್ರವಾಗಿನಡೆದು ಮುಗಿಯುವ ಹೊತ್ತಿಗೆ ಮಧ್ಯರಾತ್ರಿ ೧-೩೦ ಆಗಿತ್ತು. ಇಷ್ಟೆಲ್ಲಾ ಸಂಕಟಗಳನ್ನು ಸ್ಥೈರ್ಯದಿಂದ ಎದುರಿಸಿ ತಮ್ಮ ಕೆಲಸವನ್ನು ಮಾಡಿದ ಡಾಕ್ಟರ್ಗಳು, ಹಾಗೂ ಸಿಬ್ಬಂದಿವರ್ಗವನ್ನು ಎಷ್ಟು ಹೊಗಳಿದರೂ ಸಾಲದು.ಎ

ಮತ್ತೆ ಯಾರೋ ಆತಂಕಿಗಳು ಬಂದರೆಂಬ ಗಾಳಿವರ್ತಮಾನಬಂತು. ಆಗ ಅಳುತ್ತಿದ್ದ ಮಗುವನ್ನು ಹೇಗೋ ಕಷ್ಟದಿಂದ ಅಳದಂತೆ, ಬಲವಂತವಾಗಿ ತಾಯಿಯ ಮೊಲೆಯೂಡಿಸಲು ಪ್ರಯತ್ನಮಾಡಬೇಕಾಯಿತು. ದೇವರದಯದಿಂದ ಅದು ಗಾಳಿಸುದ್ದಿಯಾಗಿತ್ತು. ನಗರದ ಜನರೆಲ್ಲಾ ಗಾಬರಿಗೊಂಡಿದ್ದರು. ಆಸ್ಪತ್ರೆಯಲ್ಲಿನಜನರು, ಟೆಲಿವಿಶನ್ ವಾರ್ತೆಗಳನ್ನು ಮೇಲಿಂದಮೇಲೆನೋಡಿ ಜಂಗರಿಕೊಂಡಿದ್ದರು. ಅದೇಸಮಯದಲ್ಲಿ 'ತಾಜ್', ಹಾಗೂ 'ಒಬೆರಾಯ್ ಹೋಟೆಲ್' ಗಳಲ್ಲಿ, ಸಿ. ಎಸ್. ಟಿ ರೈಲ್ವೆ ನಿಲ್ದಾಣದಲ್ಲಿ, ನಾರಿಮನ್ ಹೌಸ್ ನಲ್ಲಿ, ಉಗ್ರರು ಮತ್ತು ಭದ್ರತಾಪಡೆಗಳಮಧ್ಯೆ, ಬಿರುಸಿನ ಬಾಂಬ್ ಗ್ರೆನೇಡ್ ದಾಳಿ, ನಡೆಯುತ್ತಿತ್ತು.

ಹೆಣ್ಣುಮಗು ಸುರಕ್ಷಿತವಾಗಿತ್ತು. ಅಲ್ಲಾನ ಕರುಣೆಯನ್ನೂ ಹಾಗೂ ಆಸ್ಪತ್ರೆಯ ಡಾಕ್ಟರ್ ಸಹಿತ ಎಲ್ಲ ಸಿಬ್ಬಂದಿವರ್ಗದ ಸೇವೆಯನ್ನು ಜೀವನದಲ್ಲೆ ಎಂದೆಂದಿಗೂ ಸ್ಮರಿಸುವುದಾಗಿ ಶೇಖ್ ಹೇಳಿದರು. ಅವರು, ಜೀವಂತವಾಗಿ ಮನೆಸೇರುತ್ತೇವೆಂಬ ಆಸೆಯನ್ನು ಬಿಟ್ಟಿದ್ದರು. ೪೨ ವರ್ಷದ ನರ್ಸ್, 'ಜಯಶ್ರೀ ಕುರ್ಡುಂಕರ್', ಮಾತ್ರ ಹೆರಿಗೆ ಸುಸೂತ್ರವಾಗಿ ನೆರವೇರಿದ್ದಕ್ಕೆ ಗಣಪತಿಯನ್ನು ಮನಸ್ಸಿನಲ್ಲೇ ಧ್ಯಾನಿಸಿದರು. ಅವರ ಕಣ್ಣುಗಳಲ್ಲಿ ಆನಂದ ಬಾಷ್ಪ ಸುರಿಯುತ್ತಿತ್ತು ! "ರೋಗಿಗಳ ಹಿತದೃಷ್ಟಿಯೇ ನಮ್ಮ ಧ್ಯೇಯ" ; " ಸಮಯಬಂದರೆ ನಮ್ಮ ಪ್ರಾಣವನ್ನಾದರೂ ಒತ್ತೆಯಿಟ್ಟು, ಅವರ ಜೀವ ಉಳಿಸಲು ಯತ್ನಿಸುತ್ತೇವೆ; " ಎಂದು ನುಡಿದ ಅವರ ಮಾತುಗಳು, ಅವರಂತೆ ಕರ್ತವ್ಯನಿಷ್ಠರಾದ ಅನೇಕ ನಿಸ್ವಾರ್ಥ ಸೇವಾಕರ್ತರ, ಅಂತರಾಳದ ನುಡಿಗಳಾಗಿದ್ದವು ! ಮಾರನೆಯದಿನವೇ ಶೇಖ್ ದಂಪತಿಗಳನ್ನು, ಆಸ್ಪತ್ರೆಯಿಂದ ಮನೆಗೆಕಳಿಸಿದರು. ಆಸ್ಪತ್ರೆಗಿಂತ ಮನೆಯೇ ಕ್ಷೇಮವಲ್ಲವೇ ?

-Mumbai Mirror, 4, December, 2008. P. 5