೫೮ ನೆಯ 'ಗಣರಾಜ್ಯದಿನೋತ್ಸವ'ದ ಶುಭದಿನದ ಹಾರ್ದಿಕ ಶುಭಾಷಯಗಳು !

೫೮ ನೆಯ 'ಗಣರಾಜ್ಯದಿನೋತ್ಸವ'ದ ಶುಭದಿನದ ಹಾರ್ದಿಕ ಶುಭಾಷಯಗಳು !

ಬರಹ

ನಮ್ಮ ದೇಶಕ್ಕೆ ಸ್ವತಂತ್ರ್ಯ ಬರುವ ಮೊದಲೇ ಮಲ್ಲಾಡಿಹಳ್ಳಿ ಶ್ರೀ.ರಾಘವೇಂದ್ರಸ್ವಾಮೀಜಿಯವರು ತಮ್ಮ 'ವ್ಯಾಯಾಮ ಶಿಬಿರ'ಗಳಲ್ಲಿ ಯುವಕರಿಗೆ ಹೇಳಿಕೊಡುತ್ತಿದ್ದ, 'ಕಾಲ್ದಳದ ವೀರ ಗೀತೆ.' ಇಂದಿನ ಗಣರಾಜ್ಯದಿನೊತ್ಸವಕ್ಕೆ, ಶೋಭೆತರುವ ಈ ಮಂಗಳಗೀತೆಯನ್ನು ರಾಘವೇಂದ್ರರು ಸ್ವಾತಂತ್ರ್ಯ ಪೂರ್ವದಲ್ಲೇ ಬರೆದು ತಮ್ಮ ಶಿಬಿರದ ಯುವಕರಿಗೆ ಕೆಳಗೆ ಬರೆದಿರುವ ದಿವ್ಯ ಸಂದೇಶವನ್ನು ನೀಡಿದ್ದರು.

ಹಿಂದೂ ಜನನಿ ಭಾರತ, ನಮ್ಮ ದೇಶಭಾರತ.
ಸ್ವರ್ಣ ಭೂಮಿ ಭಾರತ, ಈ ಪುಣ್ಯಭೂಮಿ ಭಾರತ.[ಪ]

ದೇಶರತ್ನ ಭಾರತ, ಭೂಮಿ ಸಗ್ಗ ಭಾರತ.
ವಿಶ್ವ ಪ್ರೇಮಿ ಭಾರತ, ಈ ನಮ್ಮ ನಾಡು ಭಾರತ.[೧]

ಸಕಲ ಕಲಾ ಕೋವಿದರ, ಜನ್ಮಧಾತ್ರಿ ಭಾರತ
ಅಖಿಲಧರ್ಮ ಶಾಸ್ತ್ರ ಜ್ಞಾನ ನಿಕರವಿಡೀ ಭಾರತ [೨]

ನೀತಿ ಸತ್ಯ ಸದಾಚಾರ, ಮೂಲವಿಡೀ ಭಾರತ.
ಶಾಂತಿ ಮುಕ್ತಿ ಕೀರ್ತಿ ಫನಿ, ಸುಖದ ಬೀಡು ಭಾರತ [೩]

ಹನುಮ ಭೀಷ್ಮ ಭೀಮ ಭಟರು, ಮೆರೆದ ಭೂಮಿ ಭಾರತ.
ರಾಮಹರಿಶ್ಚಂದ್ರನೃ‍ಪರ, ಯಶದ ರಾಜ್ಯ ಭಾರತ [೪]

ತಾರ ಸೀತೆ ಸುಕನ್ಯೆಯರು, ನಲಿದ ನಾಡು ಭಾರತ
ವೀರ ವಿದುಲೆ ದ್ರೌಪದಿಯರ ಪ್ರೇಮಜನನಿ ಭಾರತ [೫]

ಮಧ್ವ ಬಸವ ಬುದ್ಧ ಶಂಕರ, ಬಾಹುಬಲಿಯ ಭಾರತ
ಕಾಳಿದಾಸ ಬಾಣ ರನ್ನ, ಪೊನ್ನರ್ಪೊಗಳ್ದ ಭಾರತ [೬]

ಪ್ರತಾಪರಾಣ ಶ್ರೀಶಿವಾಜಿ, ಸೇವೆಗೈದ ಭಾರತ
ಪುಲಿಕೇಶಿ ರಾಜರಾಮ ಪ್ರುಥ್ವಿ, ಜೀವವಿತ್ತ ಭಾರತ [೭]

ಅನ್ಯ ಜನರು ಸೂರೆಗೊಂಡು, ಧಾಳಿ ಇಟ್ಟ ಭಾರತ
ಭಿನ್ನ ಮತಕೆ ಸಮತೆನೀಡಿ, ನೆಳಲನಿತ್ತ ಭಾರತ [೮]

ಭ್ರಹ್ಮಕ್ಷತ್ರ ವೈಶ್ಯ ಶೂದ್ರರೆಲ್ಲಾರ್ ಮಾತೆ ಭಾರತ
ಒಂದೆ ತಾಯರಕ್ತ ಬಿಂದು, ಪ್ರಾಣದಾತೆ ಭಾರತ [೯]

ಆತ್ಮಬಲಿಯನಿತ್ತು ಸೇವೆಗೈಯುವಾತ ಭಾರತ
ದಾಸ್ಯ ಮುಕ್ತಿಗೊಳಿಸಿದಾತನವನೆ ವೀರ ಭಾರತ [೧೦]