‘ಜೋಕೆ ... ಜಾಲದ ಬಲೆಗೆ ಬಿದ್ದಾಗಲೇ ಅರಿವೆ ನೀ ಸಂಚು’
ನೆಟ್ನೋಟ ವಿಜಯ ಕರ್ನಾಟಕ ಸುಧೀಂದ್ರ ಹಾಲ್ದೊಡ್ಡೇರಿ
ಇಂದು ಜಗತ್ತಿನ ಯಾವುದೇ ಮೂಲೆಯಲ್ಲಿ ಭಯೋತ್ಪಾತ ಕೃತ್ಯ ನಡೆದರೂ ನಾವೀಗ ನಡುಗಬೇಕಾದ ಪರಿಸ್ಥಿತಿಯಿದೆ. ಸಮೂಹ ಮಾಧ್ಯಮದ ಅತ್ಯದ್ಭುತ ಪ್ರಗತಿಯಿಂದ ಆಯಾ ಕ್ಷಣದಿಂದಲೇ ರೆಕ್ಕೆಪುಕ್ಕಗಳನ್ನು ಹಚ್ಚಿಕೊಂಡ ಸುದ್ದಿ ಜಗತ್ತಿನಾದ್ಯಂತ ಹರಡಿ ಆತಂಕಕ್ಕೆಡೆ ಮಾಡಿಕೊಡುತ್ತದೆ. ಹತ್ತಾರು ಜನರನ್ನು ಕೊಲ್ಲುವುದಕ್ಕಿಂತಲೂ ಅಂಥ ಸುದ್ದಿಯೊಂದನ್ನು ಲಕ್ಷಾಂತರ ಜನರಿಗೆ ಮುಟ್ಟಿಸುವುದು ಭಯೋತ್ಪಾದಕರ ಮುಖ್ಯ ಉದ್ದೇಶವಾಗುತ್ತಿದೆ. ಉಪಗ್ರಹ ಸಂಪರ್ಕ ಜಾಲದ ನೆರವಿನ ಟೀವಿಯಂಥ ಪ್ರಬಲ ಸಮೂಹ ಮಾಧ್ಯಮ ತನ್ನ ವ್ಯಾಪ್ತಿ ಹೆಚ್ಚಿಸಿಕೊಂಡಂತೆ ಸಾಮಾನ್ಯ ಜನರನ್ನು ಕಂಗಾಲು ಮಾಡುವುದು ಭಯೋತ್ಪಾದಕರಿಗೆ ಸುಲಭವಾಗುತ್ತಿದೆ. ಈ ನಿಟ್ಟಿನಲ್ಲಿ ಅವರು ಜಯ ಸಾಧಿಸಿದರೂ, ಸಾಂಪ್ರದಾಯಿಕ ಸಂಪರ್ಕ ಸಾಧನಗಳ ಮೂಲಕ ತಮ್ಮ ಜಾಲವನ್ನು ವಿಸ್ತರಿಸಿಕೊಳ್ಳುವ ಅಥವಾ ಮಾಹಿತಿ ವಿನಿಮಯ ಮಾಡಿಕೊಳ್ಳುವ ಕೆಲಸ ಕಷ್ಟವಾಗುತ್ತಿದೆ. ಎಲ್ಲ ದೇಶಗಳ ಬೇಹುಗಾರಿಕಾ ಸಂಸ್ಥೆಗಳು, ಆಂತರಿಕ ಸುರಕ್ಷಾ ಏಜೆನ್ಸಿಗಳು, ಮಿಲಿಟರಿ ಭಯೋತ್ಪಾದಕರ ಸಂಪರ್ಕ ಜಾಲವನ್ನು ಬೇಧಿಸುವುದರ ಜತೆಗೆ ತಮ್ಮ ಸಂಪರ್ಕ ಜಾಲದಲ್ಲಿ ವಿನಿಮಯವಾಗುವ ಮಾಹಿತಿ ಅವರಿಗೆ ಲಭ್ಯವಾಗದಂತೆ ನೋಡಿಕೊಳ್ಳುತ್ತಿವೆ. ಆದರೆ ಇವೆರಡು ಬಣಗಳ ನಡುವಣ ಮೇಲಾಟ 20-20 ಕ್ರಿಕೆಟ್ ಪಂದ್ಯಗಳಿಗಿಂತಲೂ ರೋಮಾಂಚಕ. ನಿತ್ಯ ಸಮರವೆಂದೇ ಪರಿಗಣಿಸಬಹುದಾದ ಹೋರಾಟವಿದು.
ಇಂಟರ್ನೆಟ್ ನಿಮಗೆ ಗೊತ್ತು. ಅಮೆರಿಕ .....................................ಓದಿ ಲೇಖನ