‘ಟೂರಿಂಗ್ ಟಾಕೀಸ್’ : ಮೂರು ದಿನಗಳ ಸಿನಿಮಾ ಗ್ರಹಿಕಾ ಶಿಬಿರ

‘ಟೂರಿಂಗ್ ಟಾಕೀಸ್’ : ಮೂರು ದಿನಗಳ ಸಿನಿಮಾ ಗ್ರಹಿಕಾ ಶಿಬಿರ

ಸಿನೆಮಾ ನೋಡಲು ಬೇಕಾಗಿರುವ ನಮ್ರ ತೆ, ವಿನಯ, ಸಿನೆಮಾ ನಿಶ್ಯಬ್ದವಾಗಿ, ಉಳಿದು
ಹೇಳುತ್ತಾ ಹೋಗುವುದನ್ನು ಗ್ರಹಿಸಲು ಬೇಕಾಗಿರುವ ಶಿಸ್ತು ಇಲ್ಲವಾಗಿವೆ ಎಂಬ ಕೊರತೆ
ನಮ್ಮಲ್ಲಿ ಬಹಳಷ್ಟು ಜನರನ್ನ ಕಾಡುತ್ತಿದೆ. ಆ ಕೊರತೆ ನೀಗಿಸಲು, ಸಿನೆಮಾ ವ್ಯಾಕರಣದ
ಅಕ್ಷರಾಭ್ಯಾಸಕ್ಕಾಗಿ- ಒಂದು ಪಠ್ಯಕ್ರಮದ  ಶಿಬಿರವೊಂದನ್ನು ಸಂವಾದ ಡಾಟ್ ಕಾಂ ಆಯೋಜಿಸಿದೆ.

ಯಾವ ಸಿನೆಮಾ?
ಯಾವುದಾದರೂ ಆಗಬಹುದು, ಇನ್ನೂ ನಿರ್ಧಾರವಾಗಿಲ್ಲದಿರುವುದರಿಂದ, ಸದ್ಯದ ಮಟ್ಟಿಗೆ ಅದು ಸಸ್ಪೆನ್ಸ್.

ಯಾರು ಮಾತನಾಡುತ್ತಾರೆ?
ಸಂಪನ್ಮೂಲ ವ್ಯಕ್ತಿಗಳು:
೧. ಸಾಮಾನ್ಯ ಪ್ರೇಕ್ಷಕರು/ಶಿಬಿರಾರ್ಥಿಗಳು. ಸಿನಿಮಾ ಗ್ರಹಿಕೆಯ ಬಗೆಗೆ ಕಾಳಜಿ ಆರಂಭಗೊಂಡಿರುವವರು.
೨. ಸಿನಿಮಾ ಕುರಿತಂತೆ ಪ್ರಜ್ಞಾಪೂರ್ವಕವಾಗಿ ಅಲೋಚಿಸಬಲ್ಲವರು:
ಅ) ರಘುನಾಥ ಚ ಹ (ಪತ್ರಕರ್ತರು)
ಆ) ವಿಶಾಖ (ಪತ್ರಕರ್ತರು)
ಇ) ತಾರಕೇಶ್ವರ್ (ಪ್ರಾಧ್ಯಾಪಕರು- ಕನ್ನಡ ವಿಶ್ವವಿದ್ಯಾನಿಲಯ-ಹಂಪಿ)
ಈ) ಡೇವಿಡ್ ಬಾಂಡ್ (ಫ್ರೆಂಚ್ ಭಾಷಾ ಉಪನ್ಯಾಸಕ/ಭಾರತೀಯ ಸಿನಿಮಾಸಕ್ತ)
೩. ಬಿ ಸುರೇಶ್ (ನಟ-ನಿರ್ದೇಶಕ, ಸಿನಿಮಾ ಪ್ರೇಕ್ಷಕ)

ಎಂದು:
ಮೇ ೧ , ಮೇ ೨ ಮತ್ತು ಮೇ ೩., ೨೦೦೯ ರಜಾದಿನಗಳು.

ಎಲ್ಲಿ?
ಓದೇಕಾರ್ ಫಾರಂ, ನಂದಿ ಹಳ್ಳಿ (ತೋವಿನಕೆರೆ ಬಳಿ) ತುಮಕೂರಿನಿಂದ ಸುಮಾರು ೨೦
ಕಿಲೋಮೀಟರ್ ದೂರದಲ್ಲಿ (ಓದೇಕಾರ್ ಎಸ್ಟೇಟಿನ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ
ಕ್ಲಿಕ್ ಮಾಡಿ)

ಶುಲ್ಕ?
ಕಾಫಿ, ತಿಂಡಿ, ಎರಡು ಊಟ ವಸತಿ ಸೇರಿ ದಿನವೊಂದಕ್ಕೆ ರೂ ೧೫೦ ಎಂದು ಅಂದಾಜಿಸಲಾಗಿದೆ.
ಮೂರು ದಿನವಾದ್ದರಿಂದ ರೂ ೪೫೦ ಆದರೆ, ಉಳಿದ ಖರ್ಚಿಗೆ ರೂ ೫೦ ಅನ್ನು ಸೇರಿಸಿ ರೂ ಒಟ್ಟು
೫೦೦ ಅನ್ನೂ ನಿಗದಿ ಪಡಿಸಲಾಗಿದೆ.

ಇಲ್ಲಿ ನೋಂದಾಯಿಸಿ : http://samvaada.com/events/register.html
ಹೆಚ್ಚಿನ ವಿವರ: http://samvaada.com/events/odekar_film.html

ಈ ವಿಶಿಷ್ಠ , ವಿನೂತನ ಕಾರ್ಯಕ್ರಮಕ್ಕೆ ಭಾಗವಹಿಸುವ ಆಸಕ್ತಿ ಇದ್ದರೆ ಈ ಕೆಳಗಿನ ಸಂವಾದ ಡಾಟ್ ಕಾಂ ಸದಸ್ಯರನ್ನ ಸಂಪರ್ಕಿಸಿ. ೫೦ ಜನರಿಗೆ ಮಾತ್ರ ಪ್ರವೇಶ.
ಸಂಪರ್ಕಿಸ ಬೇಕಾದ ಸಂಖ್ಯೆ:
ಕಿರಣ್ ಎಮ್ - ೯೭೪೨೦ ೫೫೯೬೬ (ಪದ್ಮನಾಭನಗರ)
ರಾಘವ ಕೋಟೆಕರ್ - ೯೯೦೧೩ ೯೯೬೭೧ (ಜೆ ಪಿ ನಗರ, ಜಯನಗರ, ಬನಶಂಕರಿ)
ಅರೆಹಳ್ಳಿ ರವಿ ೯೯೦೦೪ ೩೯೯೩೦ (ಬಿ ಟಿ ಎಂ ಲೇ‌ಔಟ್, ಹೊಸೂರು ರಸ್ತೆ)
ರುದ್ರಮೂರ್ತಿ: ೯೪೮೦೪ ೯೪೧೩೫(ಮಲ್ಲೇಶ್ವರ, ಯಶವಂತಪುರ, ರಾಜಾಜಿನಗರ, ನೆಲಮಂಗಲ)
ಪ್ರಮೋದ್: ೯೪೪೮೭ ೦೧೪೭೦ (ಬಸವನಗುಡಿ)
ರಾಜಕುಮಾರ್ (ಸಮಾಜ ಸೇವಕರ ಸಮಿತಿ) - ೯೪೪೮೧ ೭೧೦೬೯

ತುಮಕೂರಿನ ಆಸಕ್ತರಿಗೆ:
ಕೋಟೆ ನಾಗಭೂಷಣ್, ಪ್ರಜಾಪ್ರಗತಿ ದಿನಪತ್ರಿಕೆ - ೯೮೮೦೦ ೧೮೩೮೧
ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಆಸಕ್ತರಿಗೆ:
ಅವಿನಾಶ್ - ೯೪೮೦೧ ೩೮೦೩೪

ಹಾಸನದ ಆಸಕ್ತರಿಗೆ:
ಪ್ರಭಾಕರ್- - ೯೪೪೮೩ ೬೫೮೧೬