‘ಸಂಪದ’ ನಗೆಬುಗ್ಗೆ - ಭಾಗ ೧೩೧

ಕಲ್ಲುಗಳು ಸಾರ್ ಕಲ್ಲುಗಳು !
ಸೂರಿ ಲಾರಿ ಡ್ರೈವರ್. ಬೇರೆ ಬೇರೆ ಊರುಗಳಿಂದ ಲಾರಿಯಲ್ಲಿ ಕಲ್ಲು, ಮಣ್ಣು, ಇಟ್ಟಿಗೆ ಮತ್ತಿತರ ವಸ್ತುಗಳನ್ನು ಸಾಗಿಸುತ್ತಿದ್ದ. ಆಸ್ಪತ್ರೆಯೊಂದರ ಕಟ್ಟಡ ರಿಪೇರಿಗೆ ಒಂದು ಲೋಡ್ ಕಲ್ಲನ್ನು ತರಲಿಕ್ಕೆ ಹೇಳಿದ್ದರು.
ಸೂರಿ ಆಸ್ಪತ್ರೆಯ ಎದುರು ಲಾರಿ ನಿಲ್ಲಿಸಿ ಒಳಹೋದ. ಕೌಂಟರ್ ನಲ್ಲಿ ಕುಳಿತಿದ್ದ ಯುವತಿ ‘ಏನು?’ ಎಂದು ಕೇಳಿದಾಗ, ಕಲ್ಲುಗಳಿವೆ ಎಂದು ಹೇಳಿದ. ರೂಂ ನಂಬರ್ ೮ಕ್ಕೆ ಹೋಗಿ ಎಂದಳು ಯುವತಿ. ಸೂರಿ ಸೀದಾ ರೂಂ ನಂಬರ್ ೮ಕ್ಕೆ ಹೋದ. ಅಲ್ಲಿ ಕುಳಿತಿದ್ದ ವೈದ್ಯರು ಟೇಬಲ್ ಮೇಲೆ ಮಲಗಲು ಸೂರಿಗೆ ಹೇಳಿದರು. ‘ನೋವು ಹೊಟ್ಟೆಯ ಬಲಭಾಗದಲ್ಲಿದೆಯಾ? ಅಥವಾ ಎಡಭಾಗದಲ್ಲಿದೆಯಾ? ಎಂದು ವೈದ್ಯರು ಕೇಳಿದಾಗ, ‘ಒಂದು ಲೋಡ್ ಕಲ್ಲು ಹೊರಗಿದೆ. ಎಲ್ಲಿ ಇಳಿಸೋದು? ಎಂದು ಶರ್ಟ್ ಸರಿಪಡಿಸುತ್ತಾ ರಾಜು ಎದ್ದ. ಆತನ ಮಾತು ಕೇಳಿ ಡಾಕ್ಟರ್ ಸುಸ್ತು
***
ನೆನಪು
ಬೆಂಗಳೂರಿನ ಜನಯನಗರ ನಾಲ್ಕನೇ ಬ್ಲಾಕ್ ನ ಶಾಪಿಂಗ್ ಕಾಂಪ್ಲೆಕ್ಸ್ ಗೆ ಬಂದ ಶ್ರೀಮತಿ ತನ್ನ ಎರಡೂ ಕೈಗಳಿಗೆ ಮೆಹಂದಿ ಹಾಕಿಸಿಕೊಂಡಳು.
ನಂತರ ತಾನು ತನ್ನ ಸ್ಕೂಟಿಯಲ್ಲಿ ಬಂದಿರುವ ಬಗ್ಗೆ ನೆನಪಿಸಿಕೊಂಡು ಬಹಳ ಬೇಸರದಿಂದ ಅಲ್ಲಿಯೇ ಅಂಗಡಿಯ ಬಳಿಯೇ ಕೂತಿದ್ದಳು. ಆಗ ಅಲ್ಲಿಗೆ ಬಂದ ಆಕೆಯ ಪಕ್ಕದ ಮನೆಯಾತ ಶ್ರೀಮತಿಯನ್ನು ನೋಡಿ ಮಾತನಾಡಿಸಿ, ಅವಳದೇ ದ್ವಿಚಕ್ರ ವಾಹನದಲ್ಲಿ ಅವಳನ್ನು ಕೂರಿಸಿಕೊಂಡು ಜೆ ಪಿ ನಗರದ ಮನೆಯ ಬಳಿ ಬಂದಾಗ ಅವನಿಗೆ ತಾನು ಜಯನಗರ ನಾಲ್ಕನೇ ಬ್ಲಾಕ್ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ತನ್ನ ಬೈಕ್ ಮತ್ತು ಹೆಂಡತಿಯನ್ನು ಬಿಟ್ಟು ಬಂದಿರುವುದು ನೆನಪಾಯಿತು…!
***
ಹೆಸರು
ಶ್ರೀಮತಿ: ನಮ್ಮಗೂನ ಎಲ್ರೂ ಡಾಕ್ಟರ್ ಅಂತ ಕರೀಬೇಕು ಅದ್ಕೆ ಡಾಕ್ಟರ್ ಓದಿಸೋಣ ಕಣ್ರೀ
ಸೂರಿ: ಓದಿಸೋದೇನು ಬೆಡ ಬಿಡೆ ಅವ್ನ ಹೆಸರೇ ‘ಡಾಕ್ಟರ್’ ಅಂತ ಇಟ್ಟು ಬಿಡೋಣ ಆಯ್ತಾ?
***
ಹೆದರಿಕೆ
ಮಗ: ಅಪ್ಪ, ನೀವು ಕಾಡಿನ ಯಾವ ಕ್ರೂರ ಮೃಗಗಳಿಗೂ ಹೆದರುವುದಿಲ್ಲ ಅಲ್ಲವೇ?
ಸೂರಿ: ಹೌದು, ನಾನು ಯಾವ ಕಾಡು ಮೃಗಗಳಿಗೂ ಹೆದರುವುದಿಲ್ಲ.
ಮಗ: ಈ ವಿಷಯ ಗೊತ್ತಿತ್ತು ಬಿಡಿ, ನೀವು ಅಮ್ಮನಿಗೆ ಮಾತ್ರವೇ ಹೆದರುವುದು ಅಲ್ಲವೇ?
***
ಊಟದ ಬಳಿಕ
ಸೂರಿ: ಗಾಂಪ, ನಾವು ರಾತ್ರಿ ಊಟವಾದ ತಕ್ಷಣ ಮಲಗಬಾರದು ಅಂತ ಹೇಳುತ್ತಾರಲ್ಲ ಏಕೆ?
ಗಾಂಪ: ಏಕೆ ಹೇಳುತ್ತಾರೆ ಅಂದರೆ, ಊಟವಾದ ಮೇಲೆ ಸ್ವಲ್ಪ ಹೊತ್ತು ವಾಟ್ಸಾಪ್, ಪೇಸ್ಬುಕ್ ನೋಡಬೇಕಲ್ಲ ಅದಕ್ಕೆ !
***
ಕಾರಣ
ಡಾಕ್ಟರ್: ಸೂರಿಯವರೇ, ನಾನು ಮಾಡಿದ ಆಪರೇಷನ್ ನಿಂದ ನೀವು ಗುಣಮುಖರಾಗಿ ನಡೆದಾಡುವಂತಾದರಲ್ಲ ಅದೇ ಸಂತೋಷ. ಅಂದ ಹಾಗೆ ನೀವು ಈಗ ಎಲ್ಲಿಗೆ ಹೋಗುವುದಾದರೂ ನಡೆದುಕೊಂಡೇ ಹೋಗುವಿರಂತಲ್ಲಾ?
ಸೂರಿ: ಹೌದು ಸರ್, ನಿಮ್ಮ ಬಿಲ್ ಕಟ್ಟುವುದಕ್ಕಾಗಿ ಇದ್ದ ಕಾರನ್ನು ಮಾರಿದ್ದಾಯಿತು.
***
ಲವ್ ಲೆಟರ್
ಗಾಂಪ: ನೀನು ಶ್ರೀಮತಿಗೆ ದೇವಸ್ಥಾನದಲ್ಲಿರುವಾಗಲೇ ಲವ್ ಲೆಟರ್ ಕೊಟ್ಟು ಬಿಡು.
ಸೂರಿ: ಯಾಕೆ?
ಗಾಂಪ: ಏಕೆಂದರೆ ದೇವಸ್ಥಾನದಲ್ಲಿ ಚಪ್ಪಲ್ ಹಾಕುವುದಿಲ್ಲ !
***
ಮಂಗಳಾರತಿ
ಪೂಜಾರಿ: ಮಂಗಳಾರತಿ ಯಾರ ಹೆಸರಲ್ಲಿ ಮಾಡಲಿ?
ಸೂರಿ: ನಮ್ಮ ಹೆಂಡತಿಯ ಹೆಸರಿನಲ್ಲೇ ಮಾಡಿ/
ಪೂಜಾರಿ: ನಿಮ್ಮ ಹೆಸರಿನಲ್ಲಿ ಬೇಡವೇ?
ಸೂರಿ: ನಮ್ಮ ಹೆಸರಿನಲ್ಲಿ ಮಂಗಳಾರತಿ ಬೆಳಿಗ್ಗೆ ಮನೆಯಲ್ಲೇ ಆಗಿದೆ !
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ