‘ಸಂಪದ' ನಗೆ ಬುಗ್ಗೆ - ಭಾಗ ೯೧

‘ಸಂಪದ' ನಗೆ ಬುಗ್ಗೆ - ಭಾಗ ೯೧

ಚಪ್ಪಲಿ ಅಂಗಡಿಯಲ್ಲಿ

ಅಂಗಡಿಯವನು – ಅಂಗಡಿಯಲ್ಲಿನ ಎಲ್ಲಾ ಬಾಕ್ಸ್ ಗಳಲ್ಲಿ ಇರುವ ಚಪ್ಪಲಿಗಳಲ್ಲಿ ಒಂದನ್ನು ಬಿಡದೆ ನಾನು ನಿಮಗೆ ತೋರಿಸಿದೆ ಮೇಡಂ, ಇನ್ನು ಯಾವುದೂ ಉಳಿದಿಲ್ಲ..

ಶ್ರೀಮತಿ – ಹಾಗಾದರೆ ಅಲ್ಲಿರುವ ಬಾಕ್ಸ್ ನಲ್ಲಿ ಏನಿದೆ?

ಅಂಗಡಿಯವನು- ಮೇಡಂ ನನ್ನ ಮೇಲೆ ಸ್ವಲ್ಪ ಕರುಣೆ ತೋರಿಸಿ, ಆ ಬಾಕ್ಸಲ್ಲಿ ನಾನು ತಿನ್ನೋಕೆ ಅಂತ ತಂದಿರೋ ಲಂಚ್ ಇದೆ.

***

ಕಪ್ಪೆ ಮತ್ತು ಹಾವು

ಕಪ್ಪೆ: ನೀನು ಮೋಸಗಾರ

ಹಾವು: ಸುಳ್ಳು ಹೇಳಬೇಡ

ಕಪ್ಪೆ: ನೀನೇ ಮೋಸಗಾರ ಎಂದು ಹೇಳಿ ಬಾವಿಗೆ ಹಾರಿತು..

ಹಾವು: ದೇವರೇ., ಇಷ್ಟಕ್ಕೆಲ್ಲ ಯಾರದರೂ ಆತ್ಮಹತ್ಯೆ ಮಾಡ್ಕೊತಾರಾ?

***

ಭಗವಂತನ ಭಕ್ತಿ

ಗಾಂಪನ ಪಕ್ಕದ ಮನೆಯವನ ಹೆಸರು ಭಗವಂತ ಮತ್ತು ಅವರ ಮಗಳ ಹೆಸರು ಭಕ್ತಿ. ಒಂದು ದಿನ ಗಾಂಪನ ಅಮ್ಮ ಹೇಳಿದರು‌

ಅಮ್ಮ: ಗಾಂಪ, ನೀನು ಯಾವಾಗಲೂ ಭಗವಂತನ ಭಕ್ತಿಯ ಕಡೆ ಸದಾ ಗಮನ ಕೊಡು. ಭಕ್ತಿಗೆ ನಿನ್ನ ಮನವನ್ನು ಅರ್ಪಿಸು.

ಗಾಂಪ( ಮನಸ್ಸಿನಲ್ಲಿ): ಅಯ್ಯೋ ಅಮ್ಮಾ ಭಕ್ತಿ ಮೇಲೆ ಮನಸ್ಸು ಇಟ್ಟಿದ್ದೀನಿ, ಆದರೆ ಅವರಪ್ಪ ಭಗವಂತನಿಗೆ ಅದು ಅರ್ಥಾನೇ ಆಗ್ತಿಲ್ಲ.

***

ಹೆಂಡತಿ

ಗಾಂಪನನ್ನು ಕಿಚಾಯಿಸಲೆಂದೇ ಶ್ರೀಮತಿ ಹೇಳಿದಳು: ಗಂಡಸರಿಗೆ ಹೋಲಿಸಿದರೆ ಹೆಂಗಸರಿಗೆ ಆರೋಗ್ಯ, ಆಯುಸ್ಸು, ನೆಮ್ಮದಿ ಎಲ್ಲವೂ ಹೆಚ್ಚಂತೆ ಗೊತ್ತಾ? ಯಾಕಿರಬಹುದು ಹೇಳಿ ನೋಡೋಣ?

ಗಾಂಪ ತಿರುಗುಬಾಣ ಬಿಟ್ಟ: ಯಾಕಂದ್ರೆ ಹೆಂಗಸರಿಗೆ ಹೆಂಡತಿ ಇರಲ್ಲ!!

***

ಚಕ್ಕುಲಿ

ಗುರು: ಭೂಮಿ ಯಾವ ಆಕಾರದಲ್ಲಿದೆ?

ಗಾಂಪ: ಚಕ್ಕುಲಿಯಾಕಾರದಲ್ಲಿದೆ ಸಾರ್…

ಗುರು: ಇನ್ನೊಮ್ಮೆ ಒತ್ತಿ ಹೇಳು?

ಗಾಂಪ: ಒತ್ತಿದರೆ ಚಕ್ಕುಲಿ ಹುಡಿಯಾಗಬಹುದು..

***

ಫಲಿತಾಂಶ

ಗಾಂಪ: ರಿಸಲ್ಟ್ ಬಂದಿದೆ. ಬಾರೋ ನೋಡ್ಕೊಂಡ್ ಬರೋಣ.

ಸೂರಿ: ನನಗ್ಯಾಕೋ ನಾನು ಪಾಸ್ ಆಗಿರೋದು ಡೌಟ್ ಮಗಾ. ಅಪ್ಪ ಬೇರೆ ಜೊತೇಲೆ ಇದಾರೆ. ನೀನು ನನ್ನ ರಿಸಲ್ಟ್ ನೋಡಿ ಫೋನ್ ಮಾಡು. ಒಂದು ಸಬ್ಜೆಕ್ಟ್ ಫೇಲ್ ಆಗಿದ್ರೆ ‘ಗುಡ್ ಮಾರ್ನಿಂಗ್‌’ ಅಂತ ಕಳಿಸು. ಎರಡು ಫೇಲ್ ಆಗಿದ್ರೆ ‘ನಿನಗೂ ನಿಮ್ಮಪ್ಪಂಗೂ ಗುಡ್ ಮಾರ್ನಿಂಗ್‌’ ಅಂತ ಕಳಿಸು.

ಗಾಂಪ: ಸರಿ ಮಗಾ.

ರಿಸಲ್ಟ್ ನೋಡಿದ ಗೆಳೆಯ ಎಸ್ಸೆಮ್ಮೆಸ್ ಮಾಡ್ತಾನೆ.

‘ನಿನಗೂ ನಿಮ್ಮ ಇಡೀ ಫ್ಯಾಮಿಲಿಗೂ ಗುಡ್ ಮಾರ್ನಿಂಗ್ ಮಗಾ’

***

ಗಿರಾಕಿ ಮತ್ತು ವ್ಯಾಪಾರಿ

ಗಾಂಪ: ಒಂದು ಕೆ.ಜಿ ಚಿಪ್ಸ್ ಎಷ್ಟು ರೂಪಾಯಿ?

ವ್ಯಾಪಾರಿ: 80 ರೂಪಾಯಿ

ಗಾಂಪ: ಲೂಸ್ ತಗೊಂಡರೆ.

ವ್ಯಾಪಾರಿ: ಯಾರ್ ತಗೊಂಡ್ರು ಅಷ್ಟೆ.

***

ಕೊಡೆ !

ಶ್ರೀಮತಿ: ಮೋಡಗಳು ಗುಡುಗಿ ಸದ್ದಾದರೆ ನಿನ್ನ ನೆನಪಾಗುತ್ತದೆ, ತಂಪಾದ ಮಳೆ ಗಾಳಿ ಬೀಸಿದರೆ ನಿನ್ನ ನೆನಪಾಗುತ್ತದೆ. ಮಳೆ ಹನಿಗಳು ಉದುರಲು ಆರಂಭಿಸಿದರೆ ನನಗೆ ನಿನ್ನ ನೆನಪಾಗುತ್ತದೆ‌.

ಗಾಂಪ: ಸರಿ ಸರಿ ನನಗೆ ಗೊತ್ತಾಯ್ತು. … ನಿನ್ನ ಕೊಡೆ ನಮ್ಮ ಮನೇಲೇ ಇದೆ.. ನಾಳೆ ತಂದು ಕೊಡ್ತೀನಿ.!

***

ಧೈರ್ಯ

ವಿಮಾನದಲ್ಲಿ ಐದು ಜನ ಬೇರೆ ಬೇರೆ ದೇಶದ ಸ್ನೇಹಿತರು ಪ್ರಯಾಣ ಮಾಡ್ತಾ ಇರ್ತಾರೆ. ಪ್ರಯಾಣದ ನಡುವೆ ಸಿಕ್ಕಾಪಟ್ಟೆ ಮದ್ಯಪಾನ ಮಾಡಿ ಟೈಟಾಗುತ್ತಾರೆ.

ಬ್ರಿಟಿಷ್: ನಾನೀಗ ಮಲ್ಕೋತೀನಿ. ನಿದ್ದೆ ಬರ್ತಿದೆ.

ಅಮೆರಿಕನ್: ನನಗೀಗ ಇಂಟರ್ನೆಟ್ ಬ್ರೌಸ್ ಮಾಡಬೇಕು ಅನಿಸ್ತಿದೆ.

ಜರ್ಮನ್: ನಾನು ಸಿನಿಮಾ ನೋಡ್ತೀನಿ.

ಚೈನೀಸ್: ನಾನು ಹಾಡು ಕೇಳ್ತೀನಿ.

ಇಂಡಿಯನ್: (ಪೈಲಟ್ ಹತ್ರ ಹೋಗಿ ) ಎದ್ದೇಳ್ ಗುರು… ನಾನು ಓಡಿಸ್ತೀನಿ ಪ್ಲೇನು. ಎಲ್ ಬೋರ್ಡ್ ಥರ ಸಿಕ್ಕಾಪಟ್ಟೆ ಸ್ಲೋ ನೀನು.

***

ಅಪ್ಪ ಮತ್ತು ಮಗ

ಮರಿ ಗಾಂಪ: ಅಪ್ಪ ಇಲ್ಲಿ ಬಾ

ಅಮ್ಮ: ಈ ತರ ಮರ್ಯಾದೆ ಕೊಡದೆ ಅಪ್ಪನನ್ನು ಕರೆಯಬಾರದು ಮಗನೇ, ಅಪ್ಪನನ್ನು ಮರ್ಯಾದೆಯಿಂದ ಕರೀಬೇಕು.

ಮರಿ ಗಾಂಪ : ಅಪ್ಪ ಮರ್ಯಾದೆ ಇಂದ ಇಲ್ಲಿ ಬಾ

***

ದೂರವಾದ ಸಮಸ್ಯೆ 

ಆಪರೇಷನ್ ನಂತರ ಗಾಂಪ “ಡಾಕ್ಟರ್ ನಾನು ಈಗ ಎಲ್ಲಾ ಸಮಸ್ಯೆಯಿಂದ ದೂರಾಗಿದ್ದೀನಾ” ಎಂದು ಕೇಳಿದ.

ಆಗ ಬಂದ ಉತ್ತರ “ಮಗು, ಡಾಕ್ಟರ್ ಅವರ ಭೂಮಿ ಮೇಲೇನೇ ಇದ್ದಾರೆ. ನೀನು ಮಾತ್ರ ಇಲ್ಲಿಗೆ ಬಂದಿರೋದು. ನಾನು ಡಾಕ್ಟರ್ ಅಲ್ಲ.. ನಾನು ಚಿತ್ರಗುಪ್ತ” ಅಂತ.

***

ಇದು ಬೇಕಿತ್ತಾ!!?

ಶ್ರೀಮತಿ ಹೊಸ ಸಿಮ್ ತಗೊಂಡು ಫೋನ್‌ಗೆ ಹಾಕ್ಕೋತಾಳೆ. ಗಾಂಪನಿಗೆ ನಂಬರ್ ಗೊತ್ತಿರಲ್ಲ. ಅವನನ್ನು ಒಂದ್ಸಲ ಗೋಳು ಹೊಯ್ದುಕೊಳ್ಳೋಣ ಅಂತ ಆಸೆ ಆಗುತ್ತೆ. ಗಾಂಪ ಹಾಲ್‌ನಲ್ಲಿ ಏನೋ ಕೆಲಸ ಮಾಡ್ತಾ ಕೂತಿರ್ತಾನೆ. ಶ್ರೀಮತಿ ಅಡುಗೆ ಮನೆಗೆ ಹೋಗಿ ಬಚ್ಚಿಟ್ಕೊಂದು ಅವನ ಫೋನ್ ಗೆ ರಿಂಗ್ ಮಾಡ್ತಾಳೆ. ಗಾಂಪ ಫೋನ್ ಎತ್ತುತ್ತಾನೆ. ಶ್ರೀಮತಿ ಮೆಲುದನಿಯಲ್ಲಿ ಹಲೋ ಅಂತಾಳೆ.

ಗಾಂಪನೂ ಮೆಲುದನಿಯಲ್ಲೇ ಉಸುರುತ್ತಾನೆ ‘ಹಲೋ ಮೈನಾ… ಪ್ಲೀಸ್ ಫೋನ್ ಕಟ್ ಮಾಡು, ಆ ಗೂಬೆ ಅಡುಗೆ ಮನೇಲಿದಾಳೆ ಅವಳಿಗೆ ಗೊತ್ತಾದ್ರೆ ಸುಮ್ನೆ ಕಿರಿಕ್ಕು. ನಾನೇ ಆಮೇಲೆ ಮಾಡ್ತೀನಿ’.

ಇದು ಬೇಕಿತ್ತಾ!!?

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ