’ಅನ್ವೇಷಣೆ,’-ಹೀಗೊಂದು ಪದ್ಯವಿದೆ
೨೦೦೭ ರ, ಅಕ್ಟೋಬರ್, ೨೫ ರ, ಸುಧಾ, ವಾರ-ಪತ್ರಿಕೆಯಲ್ಲಿ.. ಈ ಪದ್ಯ ನನಗಿಷ್ಟವಾಯಿತು.
ಅಲಾರಾಂ ಸದ್ದಲ್ಲಿ ಬೆಳಗು ಕಾಣುತ್ತಾ.
ಬಿಸಿನೀರಿಗೆ ಒಲೆ ಒಟ್ಟುತ್ತಾ..
ಕಾಫಿಯನು ಫಿಲ್ಟರ್ ನಲ್ಲಿ ಹನಿಸುತ್ತ..
ಅಕ್ಕಿ ಬೇಯಿಸಿ, ಅನ್ನ ಬಸಿದು ಸಾಸಿವೆ ಸಿಡಿಸುತ್ತಾ.
ಮಕ್ಕಳ ಹೆಗಲಿಗೆ ಪಾಠಿ ಚೀಲ ಹಾಕುತ್ತಾ.
ಗಂಡನ ಬಗಲಿಗೆ ಬುತ್ತಿ ಗಂಟನ್ನು ಸಿಕ್ಕಿಸುತ್ತಾ.
ಬಸ್ಸಿನ ಬಾಗಿಲು -ಬೆವರು ತೊಗಲಿನೊಡನೆ ಗುದ್ದಾಡುತ್ತಾ
ಕಂಪ್ಯೂಟರ್ ಫ್ಯಾಕ್ಸ್ ಗಳಿಗೆ ಎಸ್ ಬಾಸ್ ಎನ್ನುತ್ತಾ.
ಕೀಲು ಬೊಂಬೆಯಂತೆ ತರಕಾರಿ ಕತ್ತರಿಸುತ್ತಾ...
ಇರುಳಿಗೆ ತುತ್ತು ಉಡಿಸುತ್ತಾ..
ಹಾಸಿಗೆಯ ಹೊಟ್ಟೆ ತುಂಬಿಸುತ್ತಾ... ಗೊಂದಲದಲಿ...ಒತ್ತಡದಲಿ... ಕಳೆದು ಹೋಗಿದ್ದಾಳೆ ರಾಧೆ ಹುಡುಕಿಕೊಡುವೆಯಾ ಶಾಮ ?
ನಿನ್ನ ನಡಿಗೆಗೆ ಹೆಜ್ಜೆಯಾಗುತ್ತಾ..
. ನಿನ್ನ ಭುಜಕ್ಕೆ ಬಳ್ಳಿಯಾಗುತ್ತಾ.
. ನಿನ್ನ ಆಧರಕ್ಕೆ ಮಧುವಾಗುತ್ತಾ..
. ನಿನ್ನ ಉಸಿರಿನ ಬಿಸಿಗೆ ಶಾಖವಾಗುತ್ತಾ..
. ನಿನ್ನ ಕಿವಿಯಲ್ಲಿ ಅಂತರಂಗದ ತರಂಗವನ್ನೆಬ್ಬಿಸುತ್ತಾ..
. ನಿನ್ನ ಬೆರಳುಗಳಿಗೆ ಸ್ಪರ್ಷವಾಗುತ್ತಾ...
ನಿನ್ನ ಕೊಡುವಿಕೆಗೆ ಕಣ್ಣಂಚಿನ ಹನಿಯ ಹುಸಿ ನಗುವಾಗುತ್ತಾ.
ನಿನ್ನಲ್ಲಿ ತನ್ನನ್ನೇ ಅರಸುತ್ತಾ.
ನಿನ್ನ ಆಕಾಶಕ್ಕೆ ಅವಕಾಶವಾಗುತ್ತಾ..
ನಿನ್ನ ಮುರುಳಿಯನಾದವಾಗುತ್ತಾ...
ಹಂಬಲದಲ್ಲಿ...ಕನವರಿಕೆಯಲಿ.
ಕಳೆದುಹೋಗಿದ್ದಾಳೆ ರಾಧೆ ಹುಡುಕಿ ತರುವೆಯಾ ಶಾಮ ?.
.. -ಅಂಜಲಿ ರಾಮಣ್ಣ.