’ಥಾಮಸ್ ಜೆಫರ್ಸನ್ ಮೆಮೋರಿಯಲ್ ಹಾಲ್ !

’ಥಾಮಸ್ ಜೆಫರ್ಸನ್ ಮೆಮೋರಿಯಲ್ ಹಾಲ್ !

ಬರಹ

ಅಮೆರಿಕದ ಹಿಂದಿನ ಚರಿತ್ರೆ ಅತಿಗಹನವೂ ಸ್ಫೂರ್ತಿದಾಯಕವೂ ಆಗಿದೆ. ಯೂರೋಪಿನಲ್ಲಿನ ಚರ್ಚಿನದಬ್ಬಾಳಿಕೆ ದರ್ಪಯುತವಾದಆಡಳಿತ, ಹಲವರನ್ನು [ಪಿಲ್ಗ್ರಿಮ್ ಫಾದರ್ಸ್] ದೇಶಬಿಟ್ಟು ಹೊಸಪ್ರದೇಶವನ್ನು ಅರಸಿಕೊಂಡು ಹೋಗಲು ಪ್ರೇರಣೆನೀಡಿತು. ಬಹುಶಃ ಹಾಗೆ ವಲಸೆಹೋದಾಗ ಸಿಕ್ಕ ವಿಶಾಲ, ಸಂಪದ್ಭರಿತ ಸ್ಥಾನಗಳಲ್ಲಿ ಅದ್ವಿತೀಯವಾದದ್ದು, ಆಗಾಗಲೇ ಹೆಸರುಮಾಡಿದ್ದ ಹೊಸಖಂಡ, ಅಮೆರಿಕ ! ಈ ವಿಶಾಲಭೂಭಾಗದ ಒಡೆತನವನ್ನು ನಿರ್ವಹಿಸಲುಮಾಡಿದ ಒಪ್ಪಂದಗಳು, ಸಮಝಾಯಿಶಿಗಳು, ಯುದ್ಧಗಳು, ಹೊಸ-ಹೊಸ ನಿರ್ಮಾಣಕಾರ್ಯಗಳನ್ನು ಓದುವುದು ಒಂದು ಅನೀರ್ವಚನೀಯ ಸಂತೋಷವನ್ನು ತರುತ್ತದೆ. ಇಂತಹ ಕಾರ್ಯಗಳಲ್ಲಿ ಮುಂದಾಳತ್ವವನ್ನು ವಹಿಸಿಕೊಂಡು ಗಮನಾರ್ಹವಾದ ಸಾಧನೆಮಾಡಿದವರಲ್ಲಿ ದೇಶಭಕ್ತ, ದೇಶನಿರ್ಮಾಪಕ, ’ಥಾಮಸ್ ಜೆಫರ್ಸನ್,' ಒಬ್ಬರು. ಮಿಸ್ಸೂರಿ ರಾಜ್ಯದ ರಾಜಧಾನಿಗೆ ಇಟ್ಟಿರುವುದು ಅವರಹೆಸರನ್ನೇ. ಲಾಯರ್ ಆಗಿದ್ದ ಆತ, ಕಟ್ಟಡವಿನ್ಯಾಸಕರ, ಪ್ರತಿಭಾನ್ವಿತಲೇಖಕ, ಅಮೆರಿಕದ ಪ್ರೆಸಿಡೆಂಟ್ ಆದದ್ದು, ಆ ದೇಷದ ಸೌಭಾಗ್ಯವೇಸರಿ. ಲ್ಯೂಸಿಯಾನ ರಾಜ್ಯವನ್ನು ಪ್ರೆಂಚರಿಂದ ಖರೀದಿಸಿ, ಅಮೆರಿಕದೇಶವನ್ನು ವಿಸ್ತರಿಸಿದ ಖ್ಯಾತಿ ಈತನದು. ಅಮೆರಿಕದ ಸ್ವಾತಂತ್ರ್ಯದ, ಹಾಗೂ ಸಂವಿಧಾನದ ಕರಡುಪ್ರತಿಗಳನ್ನು ತಯಾರಿಸುವವರಲ್ಲಿ ಇವರೊಬ್ಬ ಪ್ರಮುಖವ್ಯಕ್ತಿ.

ಇವರ ಗೌರವಾರ್ಥವಾಗಿ, ಮಿಸ್ಸೂರಿರಾಜ್ಯದ ರಾಜಧಾನಿ ಜೆಫರ್ಸನ್ ಸಿಟಿಯಲ್ಲಿ, ಒಂದು ಭವ್ಯ ವಿಶಾಲ ಸ್ಮಾರಕಸೌಧವನ್ನು ಕಟ್ಟಿದ್ದಾರೆ. ಅಲ್ಲಿಯೇ ಕಟ್ಟಡದ ಬದಿಯಲ್ಲಿ [ಹಿಂಭಾಗದಲ್ಲಿ] ಲ್ಯೂಸಿಯಾನ ರಾಜ್ಯವನ್ನು ಕೊಂಡಾಗ ಆದ ಒಪ್ಪಂದಕ್ಕೆ ರುಜುಹಾಕಿದ ದೊಡ್ಡ ಶಿಲ್ಪವಿದೆ. ಇದೊಂದು ಚಾರಿತ್ರ್ಯಿಕ ಘಟನೆ. ಇದರಿಂದಾಗಿ, ಅಮೆರಿಕ ದೇಶ ವಿಶಾಲವಾಗಿ ಪಶ್ಚಿಮಕ್ಕೆಬೆಳೆಯುತ್ತಾಹೋಯಿತು. ಮಿಸಿಸಿಪ್ಪಿನದಿಯ ಪಶ್ಚಿಮದ ವಿಸ್ತರಣೆ, ಅಮೆರಿಕಕ್ಕೆ ಪ್ರಚಂಡ ಸಂಪನ್ಮೂಲಗಳನ್ನು ಒದಗಿಸುವುದರಮೂಲಕ, ಅದೊಂದು ಅತ್ಯಂತ ಸ್ವಶಕ್ತಿಶಾಲಿಯಾಗಲು ಸಹಾಯಕವಾಯಿತು. ಕಟ್ಟಡ ಎಡ-ಬಲ ಪಾರ್ಶ್ವಗಳಲ್ಲಿ ಮಿಸಿಸಿಪ್ಪಿ ಮಿಸ್ಸೂರಿನದಿಗಳನ್ನು ಪ್ರತಿಬಿಂಬಿಸುವ ಅದ್ಭುತ ಭಾರಿ-ಭಾರಿ ಕಂಚಿನವಿಗ್ರಹಗಳಿವೆ !

-ಚಿತ್ರ ನಾನೇ ತೆಗೆದದ್ದು.