’ನೂರು-ವರ್ಷಗಳಷ್ಟು ಹಳೆಯ ಮಾಹಿತಿಗಳ', 'ಇಂಟರ್ನೆಟ್ ಸೈಟ್- ಶಾರ್ಪಿ’ !
ಈ ತಾಣದಲ್ಲಿ ನಿಮಗೆ ದೊರಕುವ ಅತಿ ಹಳೆಯ ಫೋಟೊಗಳು, ಎಲ್ಲಿಯೂ ಸಿಗುವುದಿಲ್ಲ. ’೧೯೦೦ ರಲ್ಲಿ ನ್ಯೂಯಾರ್ಕ್ ನಗರ, ” ’ವಾಶಿಂಗ್ಟನ್ ನಗರ”, ’ಅತಿ ಹಳೆಯ ರೈಲ್ವೆ ಎಂಜಿನ್,” ’ ಶತಮಾನದ ಮೊದಲಲ್ಲಿ ಇದ್ದ ಜನಜೀವನ-ಸಾರಿಗೆ ವ್ಯವಸ್ಥೆ,” ಉಡುಪು, ಹಾಗೂ ಪಟ್ಟಣ, ಹಳ್ಳಿಗಳಲ್ಲಿನ ಸಾಧಾರಣವಾದ, ’ಇನ್ನೂ ವಿಜ್ಞಾನದ ಸೋಂಕಿಲ್ಲದ ಸರಳ ಸುಂದರ ಜೀವನ,’ ವನ್ನು ನಾವು ಕಾಣಬಹುದು.
ಇನ್ನೊಂದು ಪ್ರಮುಖ ವಿಷಯವೆಂದರೆ, ನಿಮ್ಮ- ನಮ್ಮಮನೆಯ ಅತಿ ಪುರಾತನ ಫೋಟೋಗಳನ್ನು ಅಲ್ಲಿ ಅಪ್ಲೋಡ್ ಮಾಡಿ, ವಿಶ್ವದ ಜನರೊಡನೆ ಹಂಚಿಕೊಳ್ಳುವ ಸೌಭಾಗ್ಯ, ನಮ್ಮದಾಗಿಸಿಕೊಳ್ಳಬಹುದು.
ಅಂತಹದೇ ಕೆಲಸವನ್ನು ನಾನು ನಮ್ಮ ಪರಿವಾರದ ಒಂದು ಅಪರೂಪದ ಚಿತ್ರವನ್ನು 'ಆ ಸೈಟ್ ' ನಲ್ಲಿ ದಾಖಲಿಸಿ, ಆಗಾಗ ಅದರ ಸವಿಯನ್ನು ಉಣ್ಣುತ್ತಾ ಬಂದಿದ್ದೇನೆ.
ನಿಮಗೂ ಒಂದುವೇಳೆ, ಹಾಗನ್ನಿಸಿದರೆ, ’ಲಾಗ್ ಇನ್ ” ಮಾಡಿಕೊಳ್ಳಿ, ಮತ್ತು ೧೦೦ ವರ್ಷ ಹಿಂದಿನ ಭವ್ಯ ಅಥವಾ ಅಷ್ಟೇನೂ ಭವ್ಯವಲ್ಲದ, ಇಲ್ಲವೇ ಕಳಪೆ ಜೀವನದ ಮುಖವೊಂದರ, ಪರಿಚಯಮಾಡಿಕೊಳ್ಳಿ !
1. http://www.shorpy.com/node/1127
2. http://www.shorpy.com/node/1532
ಕೆಳಗಿನ ಚಿತ್ರದಲಿ ’ಸೂಟ್ ಉಡುಪಿನಲ್ಲಿರುವವರೇ,’ ನಮ್ಮ ಪ್ರೀತಿಯ ತಂದೆಯವರಾದ, ದಿವಂಗತ, ಎಚ್. ವಿ. ರಂಗರಾಯರು. ಅವರು ಕೆಲಸಮಾಡಿದ ಸಂಸ್ಥೆಗಳು ಹಲವಾರು. ಅನೇಕ ಕಾರಣಗಳಿಂದ ಪದೇ ಪದೇ ನೌಕರಿಯನ್ನು ಬಿಟ್ಟು, ಬೇರೆ ಬೇರೆ ನೌಕರಿಗಳನ್ನು ಅವರು ಆರಿಸಿಕೊಂಡರು. ಅಥವಾ ಪರಿಸ್ತಿತಿಯ ಒತ್ತಡಕ್ಕೆ ಮಣಿಯಬೇಕಾಯಿತು ಎಂದನ್ನಬಹುದೇನೋ !
ಅವರು ಮುಂಬೈ ಬಿಟ್ಟು, ನಮ್ಮ ಹುಟ್ಟಿದೂರು, ’ಹೊಳಲ್ಕೆರೆ’ ಗೆ ಬಂದು ವಾಸ್ತವ್ಯ ಹೂಡುವ ಮೊದಲು, ಅವರು ಕೆಲಸಮಾಡುತ್ತಿದ್ದ ಕಂಪೆನಿ ಯೊಂದರಲ್ಲಿ, ಅವರಿಗೆ ’ಬೀಳ್ಕೊಡುಗೆಯ ಸಮಾರಂಭ ’ವನ್ನು ಆಯೋಜಿಸಿದ್ದರು. ಆ ಸಂದರ್ಭದಲ್ಲಿ ತೆಗೆದ ಚಿತ್ರವಿದು.
ಆ ಸಮಯದಲ್ಲಿ ತೆಗೆದ ಈ ಚಿತ್ರ, ನಮ್ಮನ್ನು ಹಲವು ದಶಕಗಳ ಹಿಂದಿನ ಜೀವನಕ್ಕೆ, ಕರೆದೊಯ್ಯುತ್ತದೆ. ಅದು ಹಿಡಿಯುವ ಕನ್ನಡಿಯ ನೋಟ, ನಮಗೆ ಜ್ಞಾನವರ್ಧಕವೆಂಬುದು ನನ್ನ ಅಭಿಮತ ! ನೀವೇನನ್ನುತ್ತೀರಿ ?