’ಮೆಟ್ರೋ ರೈಲು ಅಂತಲ್ವಾ ಲಕ್ಷಣವಾಗ್, ಕನ್ನಡ್ದಲ್ಲಿ ಬರ್ಯೋದು" ; ಎಂದ್ ಕಲ್ತತೀರ ನೀವು, ನಿರಭಿಮಾನಿಗಳೇ ?

’ಮೆಟ್ರೋ ರೈಲು ಅಂತಲ್ವಾ ಲಕ್ಷಣವಾಗ್, ಕನ್ನಡ್ದಲ್ಲಿ ಬರ್ಯೋದು" ; ಎಂದ್ ಕಲ್ತತೀರ ನೀವು, ನಿರಭಿಮಾನಿಗಳೇ ?

ಬರಹ

 

ಭೂಮಿಪುತ್ರರಿಗೆ ಅನ್ಯಾಯ ಆಯ್ತೋ ಸುಮ್ನಿರೊರಲ್ಲ. ಎಲೄ. ಮಹಾರಾಷ್ಟ್ರಿಯರನ್ನ, ತಮಿಳ್ರನ್ನ, ತೆಲುಗಿನವರನ್ನ, ಮತ್ತೆ, ಬೆಂಗಾಲಿ, ಕೇರಳ ಯಾರ್ರನ್ನಾದೃ ನೋಡ್ರಿ. ಯಾರು ನಾಚಿಗೆಗೆಟ್ಟು ಇಂಗ್ಲೀಷ್ ನಲ್ಲಿ ಬರ್ಕೊಳೊದಿಲ್ಲ. ಆಮೇಲೆ ಒಳಗಡೆ, ಬರೀ ಬರೆಯೊದಲ್ಲ. ಕನ್ನಡಿಗರ ಸ್ಟಾಲ್ ಇರ್ಬೇಕು. ಅವರಿಗೆ ಪ್ರಥಮ ಆದ್ಯತೆ ಕೊಡ್ದೆ, ಹೇಗ್ ಸಾಧ್ಯ ?  ಅಷ್ಟೂ ಗೊತ್ತಾಗಲ್ವೆ  ?

 

ಹೀಗೆ ಬಿಟ್ಟು ಬಿಟ್ಟು ಬೆಂಗ್ಳೂರಿಗೆ ಬಂದ್ರೆ, ಎಲ್ಲೊ ಯಾವುದೋ ಪರದೇಶಕ್ಕೆ ಬಂದಂಗಾಗತ್ತೆ. ಯಾಕೆ ಹಾಗೆ, ಪರವಾಗಿಲ್ಲ ಬಿಡಿ ಬಿಡಿ ಅಂತ ಉಟ್ಕೊಂಡಿರೊ ಬಟ್ಟೆನೂ ಯಾರಾದೄ ಕಸ್ಕಂಡೋದೃ ಹೋಗ್ಲಿ ಅನ್ನೋ ನಿರಭಿಮಾನಿಗಳಿಗೆ ಏನ್ ಮಾಡ್ಬೇಕು ? ಚಚ್ಚಬೇಕು ದನಕ್ ಚಚ್ಚದಂಗೆ. ನೋಡ್ತಿಲ್ವ. ಹೊರಗಡೆ, ನಮ್ಮಜನರಿಗೆ ಆಗ್ತಿರೋ ಅನ್ಯಾಯ . ಬೆಳಗಾಂ, ಮದ್ರಾಸ್ (ಚೆನ್ನೈ ಅನ್ದಿದ್ರೆ ಗ್ರಹಚಾರ ಬಿಡಿಸ್ತಾರೆ ಅವೃ. ಅಷ್ಟೂ ಜ್ಞಾನ ಬೇಡವೇನ್ರಿ) ಕೊಲ್ಕತ್ತ, ಕೊಚ್ಚಿ. ಮಣ್ಣಿಗೆ ಮಣ್ ತಿನ್ನಬೇಕಾಗತ್ತೆ ಅಲ್ಲಿ ಹೋದ್ರೆ. ಒಂದ್ ಚಿಕ್ಕ ವಿಚಾರ ತಿಳ್ಕೊಬೇಕಾದ್ರೆ, ಆ ಭಾಷೆ ಇಲ್ದೆ, ಸಾಧ್ಯವೇ ?

 

ಇಷ್ಟೇ ಅಲ್ಲ. ಇಲ್ಲೇ ಹುಟ್ಟಿಬೆಳೆದ ಆ ಜಯಲಲಿತಮ್ಮನ್ ಗೋಳ್ ಬೇರೆ. ನೀರ್ಕೊಡಿ ಅಂತ

 

ಈ ನೀರಿನ್ಗೊಳೆಲ್ಲ, ಆಗಿನ ಮೈಸೂರ್ನಲ್ಲಿ, ಇದ್ರಲ್ಲಾ  ದಿವಾನೃ  ಶೇಷಾದ್ರಿಅಯ್ಯರ್ ಮತ್ತು ಅವರ ಚೇಲಾಗಳು, ಅವರ್ಕಾಲದಲ್ಲಿ ತಪ್ಪುತಪ್ಪಾಗಿ ಮಾಡ್ಕೊಂಡ ಮಾತುಕತೆ. ಈಗ ನಮ್ಮದು ಚಿಕ್ಕ ಮೈಸೂರಲ್ಲ. ಬರೀ ಹರಿಹರದ ವರೆಗೆ ಮಾತ್ರ ಇತ್ತು. ಆಗ. ಈಗ ವಿಶಾಲ ಕರ್ನಾಟಕ ಆಗಿದೆ.  ದಾವಣಗೆರೆ, ಗುಲ್ಬರ್ಗ, ಮತ್ತೆ, ಚಿತ್ರದುರ್ಗಕ್ಕೆ ಜನ್ಮದಲ್ಲಿ ನೀರಿಲ್ಲ. ಒದ್ದಾಡಿ ಸಾಯ್ತಿದಾರೆ ಜನ. ಎಲ್ಲೊ ದೇವೆಗೌಡ್ರ ಊರ್ನಲ್ಲಿ ಆ ಮಹರಾಯ, ಸರ್. ಎಂ. ಚಿಶ್ವೇಶ್ವರಯ್ಯನೋರ್ ದಯದಿಂದ ನೀರ್ ಕಾಣ್ತಿದಾರೆ. ಕೆಂಪೇಗೌಡ್ರು, ಊರ್ಕಟ್ಟಿದೃ. ಆದ್ರೆ ನೀರ್ ಕೊಟ್ಟ ಮಹಾನುಭಾವ ಮೊಕ್ಷಗುಂಡಂರವರು. ಇದನ್ನ ನೆನೆಸ್ಕೊಳ್ದಿದ್ರೆ, ನಮ್ಮ ಬಾಯ್ನಲ್ಲಿ ಹುಳು ಬೀಳಲ್ವೇನ್ರಿ, ಸ್ವಾಮಿ.

 

ಹಾಂಕಾಂಗ್ ಪಟ್ಣನೇ ತೊಗೊಳ್ಲ್ರಿ ಉದಾಹರಣೆಗೆ, ೯೯ ವರ್ಷದ ಅಗಿಮೆಂಟ್ ಇತ್ತು. ಮುಗಿದ್ಮಾರ್ನೆ ದಿನನೇ ಇಂಗ್ಲೀಷ್ ನೊರು, ಚೈನಕ್ಕೆ ಬಿಟ್ಕೊಟ್ಟು ಹೋಗ್ಬಿಟ್ರು. ಇನ್ನೂ ನಾವೇಕ್ ಈ ಕಾವೇರಿ ನೀರ್ನ ಕೊಡ್ತಿವಿ ಅಂತ ಹೇಳೊದ್ರಲ್ಲಿ ಏನಾದೃ ಸತ್ವ ಇದಿಯೇನ್ರಿ. ಆಗ ಚಿಕ್ಕ ರಾಜ್ಯ. ಇಲ್ಲಿದ್ದೊರೆಲ್ಲಾ ತಮಿಳ್ನೊರು. ಮಹರಾಜರ ಹತ್ರ, ಹೊಸ್ಕಂಡು ಇರೋಸಮಯದಲ್ಲೇ ತಮ್ಮ ಬೇಳೆನು ಬೇಯ್ಸ್ಕೊಂಡೃ ಅಷ್ತೇ. ಅದೇಲ್ಲ ಹಳೆಮಾತು. ಈಗಿನ ಪರಿಸ್ಥಿತಿನಲ್ಲಿ ನಮಗೇನೀರಿಲ್ಲ. ಬೀದರ್, ಗುಲ್ಬರ್ಗ, ಚಿತ್ರದುರ್ಗ, ದಾವಣಗೆರೆ, ನೀರಿಲ್ದೆ ಸಾಯ್ಬೆಕೇನ್ರಿ. ಸ್ವಾಮಿ ಸನ್ಮಾನ್ಯ ಎಡಿಯೂರಪ್ಪನೊರೆ ? ಬರಿ, ಮಂಡ್ಯ, ಮೈಸೂರಿಗೆ ಮಾತ್ರ ಕಾವೇರಿ ನದಿ ನೀರು ಉಣ್ಸಿ. ನಮಗೆ ಬ್ಯಾಡ್ವ ? ಏನನ್ಯಾಯರೀ ಸ್ವಾಮಿ. ಇನ್ನೂ ಎಷ್ಟ್ ವರ್ಷ  ಈ ನೀರಿನ ಒಪ್ಪಂದ. ಎಲ್ಲ ಮುಗಿದುಹೋಗಿದೆ.  

 

ಈಗ ನಮ್ಮೂರ್ ಕಡೆ ನೀರ್ ಕೊಡಿ. ಕುಡ್ಯಕ್ಕೆ, ... ತೊಳ್ಕಳಕ್ಕೆ ನೀರಿಲ್ದೆ, ಪಡ್ತಿರೊ ಕಷ್ಟ ನಿಮಗೆಲ್ಲಿ ಗೊತ್ತಾಗತ್ತೆ ? ಚಿತ್ರದುರ್ಗಕ್ಕೆ ಬನ್ನಿ, ಆ ಮಂಡ್ಯ, ಮೈಸೂರು, ಬೆಂಗ್ಳೂರು, ಹಾಸ್ನ, ಶಿವಮೊಗ್ಗ .... ಬಿಟ್ಟು

 

ಕನ್ನಡದ್ ಜನಕ್ಕೆ ಏನಾದೃ ಒಳ್ಳೇದ್ ಮಾಡ್ರಿ. ನಮ್ಮೂರ್ ನೋಡಾನ ಅಂತ  ಬೆಂಗ್ಳೂರ್ ಗೆ ಬಂದ್ರೆ, ನಮ್ಮೂರಿಗೆ ಬಂದಿದೀವಿ ಅನ್ನೊ ಭಾವನೆ ಬರ್ದೆ, ಎಲ್ಲ, ಇಂಗ್ಲೀಷ್, ಹಿಂದಿ ಫಲಕಗಳ್ನ ನೋಡಿ ಬೇಜಾರಾಗ್ ಹೋಗಿದೆ ಸ್ವಾಮಿ....

 

ಮೊನ್ನೆ ಆಯ್ತಲ್ಲ. ವಿಶ್ವ- ತಮಿಳು ಸಮ್ಮೇಳನ ಚೆನ್ನೈನಲ್ಲಿ. ಒಂದ್ ಪದ ಇಂಗೀಷ್ ನಲ್ಲಿ ಇತ್ತೆನ್ರಿ ? ಒಂದೊಂದ್ ಸಲ ಹಾಗಿಲ್ಲದಿದ್ರೆ ಸಾದ್ಯವೇ ಇಲ್ಲ. ನಮ್ಮ ಜನಕ್ಕೆ ನ್ಯಾಯ ಸಿಗೋದೇ ಆಗ....! !