’ರಾಕ್ ಬ್ರಿಡ್ಜ್ ಮೆಮೋರಿಯಲ್ ಸ್ಟೇಟ್ ಪಾರ್ಕ್”

’ರಾಕ್ ಬ್ರಿಡ್ಜ್ ಮೆಮೋರಿಯಲ್ ಸ್ಟೇಟ್ ಪಾರ್ಕ್”

ಬರಹ

’Rock Bridge Memorial State Park”

ಮಿಸ್ಸೂರಿ ರಾಜ್ಯದ ಅಗಾಧ ಪ್ರಕೃತಿ-ರಮಣೀಯವಾದ ಪರಿಸರಗಳನ್ನು ಹುಡುಕಿಕೊಂಡು ಅಲೆಯುವುದು ಒಂದು ಸುಯೋಗವೇ ಸರಿ. ಅದೆಷ್ಟು ಪಿಕ್ನಿಕ್ ಸ್ಪಾಟ್ ಗಳಿವೆ ! ಪ್ರತಿದಿನದ ಜಂಜಾಟದ ಜೀವನದ ಕಷ್ಟಕೋಟಲೆಗಳಿಂದ ಸ್ವಲ್ಪ ಸಮಯ ದೂರವಿದ್ದು. ಪ್ರಕೃತಿಯ ಜೊತೆ ಆಟವಾಡಲು ವಿಶೇಷವಾಗಿ ಹೇಳಿಮಾಡಿಸಿದ ಸರಿಯಾದ ತಾಣವಿದು.

ಒಟ್ಟು, ’ ರಾಕ್ ಬ್ರಿಡ್ಜ್ ಮೆಮೋರಿಯಲ್ ಸ್ಟೇಟ್ ಪಾರ್ಕ್,’ ಗಾಗಿಯೇ ಮೀಸಲಾಗಿಟ್ಟ ಜಾಗ : ೨, ೨೭೨. ೮೩ ಎಕರೆಗಳು.

ಪಾರ್ಕ್ ವ್ಯವಸ್ಥೆ ಶುರುವಾದದ್ದು : ೧೯೬೭ ರಲ್ಲಿ.

ಪರ್ಯಟಕರ ಆಸಕ್ತಿಗಳು : ಕೇವ್ ಟೂರ್ ಗಳು, ಮೀನುಹಿಡಿಯುವುದು, ಪಿಕ್ ನಿಕ್ ಜಾಗಗಳು, ಚಾರಣ ವ್ಯವಸ್ಥೆ - ಬೆಟ್ಟದ ಅಕ್ಕಪಕ್ಕಗಳಲ್ಲಿ ಸೈಕಲ್ ಹೊಡೆಯಲು ವ್ಯವಸ್ಥೆ -ಮಣ್ಣಿನ ಕೊರಕಲು ಕಾಲುದಾರಿಗಳಲ್ಲಿ ಓಡಾಟದ ವ್ಯವಸ್ಥೆ.

’ಸ್ವಲ್ಪ ಎತ್ತರದ ಜಾಗಕ್ಕೆ ಹೋಗಲೂ ಭದ್ರವಾದ ಮರದ ದಿಣ್ಣೆಗಳಿಂದ ಮಾಡಿದ ಗಟ್ಟಿಮುಟ್ಟಾದ ಮರದ ಮೆಟ್ಟಿಲುಗಳನ್ನು ಹಾಕಿದ್ದಾರೆ. ಪಕ್ಕದಲ್ಲಿ ಹಿಡಿದುಕೊಂಡು ಹತ್ತಲು ಅನುಕೂಲವಿದೆ. ’ಅಮೆರಿಕದಲ್ಲಿ ಪ್ರಾಕೃತಿಕ ಸಂಪತ್ತು ಅಧಿಕವಾಗಿದೆ. ಕ್ಯಾಲಿಫೋರ್ನಿಯದಿಂದ, ನ್ಯೂಯಾರ್ಕ್ ನಗರದ ವರೆಗೂ ಮನೆಕಟ್ಟಲು ಬಳಕೆಗೆಬೇಕಾದ ಮರದಸಾಮಾನುಗಳನ್ನು ಸಮೃದ್ಧವಾಗಿಯೂ ಧಾರಾಳವಾಗಿಯೂ ಕೈಬಿಟ್ಟು ಹಾಕಿ ಚೆನ್ನಾಗಿ ಬಳಸುತ್ತಾರೆ. ಮರದ ಎಲೆಕ್ಟ್ರಿಕ್ ಪೋಲ್ ಗಳು, ಹಾಗೂ ಮನೆಯ ಫ್ಲೋರಿಂಗ್, ಮನೆಯ ಮುಂಭಾಗದ ಪೊರ್ಟಿಕೋಗಳೆಲ್ಲಾ ಮರದಿಂದಲೇ ಮಾಡಿರುತ್ತಾರೆ. ಅದೆಷ್ಟು ಗಟ್ಟಿಮುಟ್ಟಾದ ಮರಗಳು ! ದಶಕಗಳು ಮಳೆಯಲ್ಲಿ ನೆಂದರೂ ಅವು ಕಲ್ಲಿನ ತರಹ ಗಟ್ಟಿಯಾಗಿಯೇ ಇರುತ್ತವೆ. ಕ್ರಿಮಿ-ಕೀಟಗಳು ಅವನ್ನು ಏನೂಮಾಡಲಾರವು. ಸ್ವಲ್ಪ ಅದಕ್ಕೆತಕ್ಕನಾದ ಮರದ ಪೇಂಟ್ ಬಳಿಯುವುದನ್ನು ಬಿಟ್ಟರೆ ಬೇರೆ ಯಾವ ಉಪಚಾರವನ್ನೂಕೊಡುವುದಿಲ್ಲ.

ರಾಜ್ಯ ಸರ್ಕಾರದ ಪರ್ಯಟನ ವಿಭಾಗವು, ಅನೇಕ ಹೆಚ್ಚಿನ ಮಾಹಿತಿಗಳು, ವಿಷಯಗಳನ್ನು ಒದಗಿಸಿದ್ದಾರೆ. ಉದಾ : ಗುಹೆಗೆ ಹೋಗುವ ಹತ್ತಿರದ ಕಾಲು-ದಾರಿ.ಸಾಮಾನ್ಯ ಮಾಹಿತಿ. ಹೆಚ್ಚಿನ ಸೌಲಭ್ಯಗಳು ಪಾರ್ಕ್ ನ್ನು ಬೇಟಿಮಾಡಲು ಅತಿ ಉತ್ತಮ ಸಮಯ. ಕೆಲವು ಚಿತ್ರಗಳ ಸಹಾಯ ಪಿಕ್ ನಿಕ್ ಜಾಗಗಳು, ಆಟದ ಮೈದಾನದ ವಿವರ. ಹತ್ತಿರದ ಜಾಗಗಳಿಗೆ ಟ್ರೆಕ್ಕಿಂಗ ಸೌಲಭ್ಯಗಳು, ಕಾಲುದಾರಿಗಳ ಮಾಹಿತಿ. ಇತ್ಯಾದಿ.

5901 South Hwy. 163
Columbia, MO 65203
573-449-7402.

ರಾಕ್ ಬ್ರಿಡ್ಜ್ ನ ಬಳಿ ದಟ್ಟವಾದ ಕಾಡು, ಚಿಕ್ಕಪುಟ್ಟ ತೊರೆಗಳು, ಹಸುರು ಹುಲ್ಲುಗಾವಲುಗಳು ಹಾಗೂ ಮರ-ಗಿಡ-ಬಳ್ಳಿ,-ಹೂ, ಹಾಗೂ ಚಿತ್ರ-ವಿಚಿತ್ರವಾದ ಕ್ರಿಮಿಕೀಟಗನ್ನೂ ವೀಕ್ಷಿಸಿ ಆನಂದಿಸಲು ಹೇಳಿಮಾಡಿಸಿದ ಜಾಗವಿದು.

ಅರ್ಧ ಮೈಲಿ ನಡೆದರೆ ಸಾಕು ನಿಮಗೆ,’ ಡೆವಿಲ್ಸ್ ಐಸ್ ಬಾಕ್ಸ್ ಬೋರ್ಡ್ ವಾಕ್”, ಸಿಗುತ್ತದೆ. ಭಾರಿ ಬಂಡೆಯ ಒಳಗಡೆ, ಅದರ ಮೇಲೆ, ನೀವು ನಡೆಯಬಹುದು. ರಾಕ್ ಬ್ರಿಡ್ಜ್, ಕಾನರ್ಸ್ ಕೇವ್, ಪಾತಾಳದ ನೆಲದಲ್ಲಿ ಹರಿಯುವ ಹಳ್ಳ. ಚಿಲುಮೆ, ೨,೨೭೩-ಎಕರೆ ಪಾರ್ಕ್ ನಲ್ಲಿ ೧೫ ಮೈಲಿಗಳಷ್ಟು ದೂರ ನಡೆದೇ ಹೋಗಬೇಕು. ಹೈಕ್ ಮಾಡಲು ಬಹಳ ಚೆನ್ನಾಗಿದೆ ಪರಿಸರ. ಬೈಸಿಕಲ್ ಜನ, ಕುದುರೆ ಸವಾರಿಮಾಡಿ ಹೋಗುವವರಿಗೂ ೭೫೦-ಎಕರೆ ’ ಗ್ಯನ್ಸ್ ಕ್ರೀಕ್ ವೈಲ್ಡ್ ಏರಿಯ ,’ ಸರಿಯಾದ ಸ್ಥಳದಲ್ಲಿದೆ. ಇದಕ್ಕೆ ಮೊದಲು ಕಾಲುದಾರಿಯಲ್ಲಿ ಹೋಗಲು ಹವಾಮಾನ ಸರಿಯಾಗಿದೆಯೇ ಇಲ್ಲವೇ ಎಂದು ಸರಿಯಾಗಿ ತಿಳಿಯಲು ’ಹಾಟ್ ಲೈನ್ಸ್ ಅನುಕೂಲ,’ ಲಭ್ಯವಿದೆ. ಗುಂಪು, ಸಮೂಹಗಳಲ್ಲಿ ಬರುವ ಪರ್ಯಟಕರಿಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ. ’ಡೆವಿಲ್ಸ್ ಐಸ್ ಬಾಕ್ಸ್ ಕೇವ್ ’, ಸುಮಾರು ೭ ಮೈಲಿ ನಡೆದೇ ಹೋಗಬೇಕು, ಹೋಗಲು ಟೂರ್ ವ್ಯವಸ್ಥೆಯೂ ಇದೆ. ಇದಕ್ಕೆ ಮೊದಲೇ ಸ್ಥಳವನ್ನು ಕಾದಿರಿಸಬೇಕು. ’ಓರಿಯೆಂಟೇಶನ್ ಕೋರ್ಸ್ ,’ ಇದೆ. ಅದಕ್ಕೆ ಸೇರಿಕೊಂಡರೆ ಉತ್ತಮ. ಮಾಹಿತಿ ಸಂಗ್ರಹಕರಿಗೆ ವಿಶೇಷ ಸೌಲಭ್ಯಗಳಿವೆ. ಅಮೆರಿಕದಲ್ಲಂತೂ ವಿಷಯಗಳನ್ನು ತಿಳಿಯಲು ’ ಅತಿವೇಗದ ಅಂತರ್ಜಾಲವ್ಯವಸ್ಥೆ,’ ಇರುವುದರಿಂದ ಸುಲಭವಾಗಿ ’ಜಾಲಾಡಿ ’, ಮಾಹಿತಿಸಂಗ್ರಹ ಮಾಡಲು ಅಡ್ಡಿಯಿಲ್ಲ.

ಪಾರ್ಕ್ ನಲ್ಲೇ ಒಂದು ದಿನದ ಮಟ್ಟಿಗೆ ರಾತ್ರಿಯಸಮಯದಲ್ಲಿ ಇಳಿದುಕೊಳ್ಳಲೂ, ಆಶಿಸುವವರಿಗೆ ವಸತಿ ಸೌಲಭ್ಯವೂ ಇದೆ. ಆಟದ ಮೈದಾನ, ಮನೆಮಂದಿಗೆ ಆನಂದಿಸಲು ಉತ್ತಮ ತಾಣ. ಇನ್ನೂ ಹಲವಾರು ಸೌಲಭ್ಯಗಳನ್ನು ವ್ಯವಸ್ಥಾಪಕರ ಬಳಿ, ಕೇಳಿ ವಿಚಾರಿಸಿ, ಮಾಹಿತಿ ಪಡೆಯಬಹುದು.

-ಚಿತ್ರ. ವೆಂ