’ಲಷ್ಕರ್ -ಇ- ತೊಯ್ಬಾ,” ಸಂಘಟನೆಯ ಜನ್ಮರಹಸ್ಯವೇನು ?

’ಲಷ್ಕರ್ -ಇ- ತೊಯ್ಬಾ,” ಸಂಘಟನೆಯ ಜನ್ಮರಹಸ್ಯವೇನು ?

ಬರಹ

ಶಕ್ತಿಶಾಲಿ ರಾಷ್ಟ್ರಗಳು ತಮ್ಮ ಅನುಕೂಲಕ್ಕಾಗಿ ಯುಕ್ತಾಯುಕ್ತ ವಿಚಾರಗಳಿಲ್ಲದೆ, ಒಮ್ಮೊಮ್ಮೆ ಮಾಡುವ ಕಾರ್ಯಾಚರಣೆಗಳು ಒಡ್ಡುವ ಸವಾಲುಗಳು ವಿಪರೀತ. ಅಮೆರಿಕ ಮಾಡಿದ್ದೂ ಇದೇ ತಪ್ಪನ್ನೆ ! ಉದಾಹರಣೆಗೆ, ೮೦ ರ ದಶಕದಲ್ಲಿ, ಸೋವಿಯತ್ ಒಕ್ಕೂಟದ ಸೈನ್ಯಪಡೆಗಳನ್ನು, ಆಫ್ಘಾನಿಸ್ತಾನದ ’ ಕುನಾರ್, ಪ್ರಾಂತ್ಯದಿಂದ ಹೊಡೆದೋಡಿಸಲು ಅಮೆರಿಕದ ಬೇಹುಗಾರಿಕಾದಳ (ಸಿ. ಐ. ಎ.) ಮತ್ತು ಇದರಜೊತೆಗೆ, ಪಾಕೀಸ್ತಾನದ ಬೇಹುಗಾರಿಕಾ ಸಂಘಟನೆ, ಇಂಟರ್ ಸರ್ವೀಸಸ್ ಇಂಟಲಿಜೆನ್ಸ್ (ಐ. ಎಸ್. ಐ) ಜೊತೆಜೊತೆಯಾಗಿ ಸೇರಿ, ಲಷ್ಕರ್- ಇ- ತೋಯ್ಬಾ, ಸಂಘಟನೆಯನ್ನು ಹುಟ್ಟುಹಾಕಿದರು. ಇದರ ವ್ಯವಸ್ಥಾಪಕ ನಿರ್ದೇಶಕ, ಹಫೀಸ್ ಮುಹಮ್ಮದ್ ಸೈಯದ್, ಎಂಬಾತ. ಇವರ ಜೊತೆ ಜಾಫರ್ ಇಕ್ಬಾಲ್, ಎಂಬ ಜೊತೆಗಾರರೂ ಇದ್ದರು. ಇವರ ಸೇರ್ಪಡೆ, ಸಿ. ಐ. ಎ ಗೆ ಚೆನ್ನಾಗಿ ಗೊತ್ತಿತ್ತು. ಯಾವ ಮುಚ್ಚುಮರೆಯೂ ಇರಲಿಲ್ಲ.

ಸೋವಿಯತ್ ಒಕ್ಕೂಟ, ಆಫ್ಘಾನಿಸ್ತಾನದಿಂದ ಹೊರಗೆ ಬಂದಾಗ, ಸಿ. ಐ. ಎ. ಲಷ್ಕರ್ ಗೆ ತನ್ನ ಬೆಂಬಲವನ್ನು ನಿಲ್ಲಿಸಿತು. ಆದರೆ, ಭಾರತದ ವಿರುದ್ಧ ಜಮ್ಮು ಕಾಶ್ಮೀರದಲ್ಲಿನ ನಿರಂತರ ಕಾದಾಟಕ್ಕೆ, ಈ ಉಗ್ರಗಾಮಿಗಳಿಗೆ, ಐ. ಎಸ್. ಐ ತನ್ನ ಬೆಂಬಲವನ್ನು ಇಂದಿನತನಕ ನೀಡುತ್ತಲೇ ಬಂದಿದೆ. ಇಷ್ಟೊಂದು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಲು ಕಾರಣ, ಮೊದಲು ಸಹಕರಿಸಿ, ಬಂಡಿ-ಬಂಡಿ ಶಸ್ತ್ರಾಸ್ತ್ರಗಳನ್ನು ಕೊಟ್ಟ ಅಮೆರಿಕದ ಸಿ. ಐ. ಎ, ಹಾಗೂ ಪಾಕೀಸ್ತಾನದ ಐ. ಎಸ್. ಐ ಸಂಘಟನೆಗಳ ಸಹಾಯದಿಂದ ಆನ್ನುವುದನ್ನು ನಾವು ಮರೆಯಬಾರದು.

ಒಂದುವೇಳೆ ಭಾರತವೇನಾದರೂ ಪಾಕೀಸ್ತಾನದ ಮೇಲೆ ಹಮ್ಲೆಮಾಡಿದರೆ, ನಾವಿದ್ದೇವೆ, ನಿಮ್ಮಸಹಾಯಕ್ಕೆ, ಎಂದು ಹೇಳುವಷ್ಟು ಸಮರ್ಥವಾಗಿ ಬೆಳೆದು ನಿಂತಿದೆ, ಈ ಲಷ್ಕರ್- ಇ- ತೋಯ್ಬಾ, ಸಂಘಟನೆ ! ಭಯೋತ್ಪಾದನೆಯ ಆಗರವಾಗಿ, ವಿಶ್ವದ ಶಾಂತಿಗೆ ಭಂಗವಾಗಿದೆ. ಯಾರು ಯಾರನ್ನು ಬಯ್ಯಬೇಕು ? ಎಲ್ಲರೂ ಸಮಯಸಾಧಕರೇ. ದಿನದಿನವೂ ಹಾವಿಗೆ ಹಾಲೆರೆದರೂ, ಕೊನೆಗೆ ಅದು ಕಚ್ಚುವುದು ನಮ್ಮನ್ನೇ ! ಕಚ್ಚುವುದು ಅದರ ಧರ್ಮ ಅಲ್ಲವೇ ?

-ಚಿತ್ರ. ಮುಂಬೈ ಮಿರರ್ ದಿನ ಪತ್ರಿಕೆ.