’ಹ್ಯಾಪಿ ಕ್ರಿಸ್ಮಸ್, ” ಹಾಗೂ ’ಹ್ಯಾಪಿ ನ್ಯೂ ಇಯರ್.”..!

’ಹ್ಯಾಪಿ ಕ್ರಿಸ್ಮಸ್, ” ಹಾಗೂ ’ಹ್ಯಾಪಿ ನ್ಯೂ ಇಯರ್.”..!

ಬರಹ

ಸಂಪದೀಯರಿಗೆಲ್ಲಾ, ’ ಕ್ರಿಸ್ಮಸ್ ಹಬ್ಬದ ಶುಭೇಚ್ಛೆಗಳು ”; ಹಾಗೂ ’ಹೊಸವರುಷದ ಶುಭಾಶಯಗಳು” ಸಹಿತ. ಅಬ್ಬಾ... ಎಂತಹ ವರ್ಷ, ೨೦೦೮ ! ನಮ್ಮೆಲ್ಲಾ ಭಾರತೀಯರಿಗೆ, ಅದರಲ್ಲೂ ಮುಂಬೈಕರರಿಗೆ, ಎಂದೆಂದೂ ಮರೆಯಲಾರದ, ಅಮಾನುಷವಾದ, ಕರಾಳ ಕೃತ್ಯಗಳ ಛಾಪನ್ನು, ನಮ್ಮೆಲ್ಲರ ಹೃದಯಗಳಲ್ಲಿ ನಿರಂತರವಾಗಿ ಕೆತ್ತಿದೆ. ಈ ಕಾರ್ಯಾಚರಣೆ, ಅನಿವಾರ್ಯವಾಗಿತ್ತೆ ? ಯಾವ ದ್ವೇಷ, ಏತಕ್ಕಾಗಿ ಈ ಭೀಭತ್ಸ ಕೃತ್ಯಗಳ ತಯಾರಿ, ಹಾಗೂ ಅಮಾಯಕರ ಮೇಲೆ ಪ್ರಯೋಗ ? ಯಾವ ಮತ, ಧರ್ಮ, ಇದಕ್ಕೆ ಪುಷ್ಟಿಕೊಡುತ್ತದೆ ?

ಅದಕ್ಕೇ ಹೇಳುವುದು, ಬಾಲ್ಯದಿಂದಲೇ, ಒಳ್ಳೆಯವರ ಸಹವಾಸ ಮಾಡಬೇಕು; ಒಳ್ಳೆಯ ಜಾಗ, ಒಳ್ಳೆಯ ಪರಿಸರದಲ್ಲಿ ಒಳ್ಳೆಮನಸ್ಸಿನಿಂದ ಎಲ್ಲರಿಗೂ ಹಿತವಾದ ಕಾರ್ಯವನ್ನು ಮಾಡಬೇಕೆಂದು, ನಮ್ಮ ಋಷಿ ಮುನಿಗಳು, ಸಾವಿರಾರು ವರ್ಷಗಳಿಂದ ಉಪದೇಶಿಸುತ್ತಾಬಂದಿದ್ದಾರೆ . ಅನುಷ್ಠಾನಕ್ಕೆ ತಂದಿದ್ದಾರೆ, ಸಹಿತ ! ಕೇವಲ ಹಣಸಂಪಾದನೆಯೇ ನಮ್ಮ ಧ್ಯೇಯವಾದಾಗ, ಮನಸ್ಸಿನಲ್ಲಿ ಧನಾತ್ಮಕವಾಗಿ ಯೋಚಿಸುವ ಕ್ರಿಯೆ ನಿಂತಾಗ, ಅಥವಾ ಕಾಣಿಸದೇ ಇದ್ದಾಗ ಮಾತ್ರ, ಇಂತಹ ಹೀನ ಕೃತ್ಯಗಳು ಜರುಗುತ್ತವೆ. ಮುಂಬೈನಲ್ಲಾದ ಮಾರಣಹೋಮವನ್ನು ಮಾಡುವ, ತಿಳಿಗೇಡಿಗಳಿಗೆ, ಬುದ್ಧಿಹೇಳಿ, ಅವರ ಜೀವನವನ್ನು ಸುಧಾರಿಸಿವ ಜನರ್ಯಾರೂ ಕಣ್ಣಿಗೆ ಕಾಣಿಸುತ್ತಿಲ್ಲ.. ಮುಂದಿನ ವರ್ಷಗಳಲ್ಲಾದರೂ ಈ ತಿಳಿಗೇಡಿಗಳಿಗೆ ಪರಮಾತ್ಮನು ಬುದ್ಧಿಯನ್ನು ಕರುಣಿಸಲೆಂದು, ಪ್ರಾರ್ಥನೆಯನ್ನು ಸಲ್ಲಿಸುವುದನ್ನು ಬಿಟ್ಟರೆ, ನಮಗೇನುಮಾಡಲು ಸಾಧ್ಯ ?

ಮೆರ್ರಿ ಕ್ರಿಸ್ಮಸ್, ಹಾಗೂ ವೆರಿ ..ವೆರಿ, ಹ್ಯಾಪಿ ನ್ಯೂಯಿಯರ್...ಟು ಯು ಆಲ್ ..!