“ಥಟ್ ಅಂತ ಹೇಳಿ‘ ಯಲ್ಲಿ ಬಿ.ಆರ್.ಎಲ್ ಮತ್ತು ಸುಪ್ರಿಯಾ ಆಚಾರ್ಯ

“ಥಟ್ ಅಂತ ಹೇಳಿ‘ ಯಲ್ಲಿ ಬಿ.ಆರ್.ಎಲ್ ಮತ್ತು ಸುಪ್ರಿಯಾ ಆಚಾರ್ಯ

ಬರಹ

ಇದೇ ೦೮.೧೧.೦೭ ರ ರಾತ್ರಿ ೯.೩೦ ನಿಮಿಷಕ್ಕೆ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಬಿ.ಆರ್.ಲಕ್ಶ್ಮಣರಾವ್ ಹಾಗೂ ಕುಮಾರಿ ಸುಪ್ರಿಯಾ ಆಚಾರ್ಯ ಅವರು ಭಾಗವಹಿಸಲಿದ್ದಾರೆ. ಬಿ.ಆರ್.ಎಲ್ ಅವರು ತಮ್ಮ ಹಾಡುಗಳನ್ನು ಸ್ವಯಂ ಹಾಡಲಿದ್ದಾರೆ. ಅವರೊಡನೆ ಧ್ವನಿಗೂಡಿಸಲಿದ್ದಾರೆ ಸುಪ್ರಿಯಾ ಅವರು. ನೆಪೋಲಿ ಬಾರಿನಲ್ಲಿ ಗೋಪಿ, ಅಮ್ಮನ ಗಾಳಕ್ಕೆ ಸಿಕ್ಕ ಗೋಪಿ, ಹಳೇ ಸ್ಕೂಟರನ್ನೇರಿ ಹೊರಟ ಮಧ್ಯಮವರ್ಗದ ದಂಪತಿಗಳ ಹಾಸ್ಯದ ಲೇಪನ ಹೊತ್ತ ವಿಷಾಧ ಗೀತೆಗಳನ್ನು ಕೇಳಲು ಮರೆಯದಿರಿ. ಇದು ದೀಪಾವಳಿಯ ವಿಶೇಷ ಕಾರ್ಯಕ್ರಮ! ಇದು ೦೯.೧೧.೦೭ರ ಮಧ್ಯಾಹ್ನ ೧೧.೦೫ಕ್ಕೆ ಮರುಪ್ರಸಾರವಾಗಲಿದೆ. ನಿಮ್ಮ ಅನಿಸಿಕೆಗಳಿಗೆ ಸ್ವಾಗತ!

-ಡಾ.ನಾ.ಸೋಮೇಶ್ವರ