6.ನಲ್ಲೆ-ನೀನೇಕೆನೆನಪಾಗಲೊಲ್ಲೆ
ಕವನ
ತಂಪೆನಿಸನೀ ಶಶಿಯನ್ನೆದೆಯ ಬೇಗೆ ಬಯಕೆಯ ಬಗೆಯುತಿಹುದು ಬೇಯದಿರಲಿ ಭಾವ ಬೇಗೆಯಲಿ
ಸುಡುವೆದೆಗೆ ತಂಪನೀಯುವ ಜೀವವೊಂದಿಲ್ಲ ತಂಪೆರೆಯುವೊಲುಮೆಯ ನಲ್ಲೆಯ ನೆಲೆಯ ಕಾಣಲೆಲ್ಲಿ
ನೆನೆಪಿನುಂಗರದ ನೆಪದಿ ಪ್ರಿಯತಮೆಯ ನೆನೆಪ ತಂದಿಟ್ಟೆ ಕಾವ್ಯದಲಿ ಚೆಲುವೆ ನೀನೇಕೆ ನೆನಪಾಗಲೊಲ್ಲೆ
ಪ್ರೇಮಕಾವ್ಯ ಚಿಲುಮೆಯ ಚರಮ ಸೀಮೆಯ ದಾಟಿ ಮೇಘಮಾಲೆಯಲಿಟ್ಟೆ ಪ್ರೇಮದೋಲೆಯನು ನಲ್ಲೆ
ಕಾವ್ಯ ಕುಲುಮೆಯ ತಿದಿಯನೊತ್ತಿ ಪ್ರೇಮಕಾವ್ಯದಂಚಿಗೆ ನಿಂತೆ ಕಾವ್ಯ ಕಾರಣ ಕಾಂತೆ ನೀನಿತು ಕಾಣಲೊಲ್ಲೆ
ಬಂದೆನೆಲ್ಲಿಂದ ಹೊರಟಿಹೆನೆಲ್ಲಿಗೋ ತಿಳಿಯದೀವಿಧಿಯಾಟ ಬೆಂದಮನಕೆ ಮುದವ ನೀಡಲು ಬಾನಲ್ಲೆಬಾ